ಸುಳ್ಯ: ಕೆ.ಎಸ್.ಆರ್ ಟಿ. ಸಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ – ಮಹಿಳೆ ಮೃತ್ಯು – ಇಬ್ಬರು ಗಂಭೀರ – ನ್ಯೂಸ್ ಫೋಕಸ್
ಸುಳ್ಯ : ಸುಳ್ಯ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಆರಂತೋಡು ಎಂಬಲ್ಲಿ ಕೆ.ಎಸ್.ಆರ್ ಟಿ. ಸಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಸುಳ್ಯ ಕಡೆಯಿಂದ ಮಡಿಕೇರಿ ಹೋಗುತ್ತಿದ್ದ KA 21 F 0069 ನೋಂದಣಿ ಸಂಖ್ಯೆಯ ಬಸ್,…
ನಾಳೆ ಮಂಗಳೂರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಆಗರ್ವಾಲ್ – ನ್ಯೂಸ್ ಫೋಕಸ್
ಮಂಗಳೂರು : ನಾಳೆ ಜೂನ್ 24ರಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ರವರು ಮಂಗಳೂರಿಗೆ ಆಗಮಿಸಲಿದ್ದಾರೆ. ಇವರು ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಬೆಳಗ್ಗೆ 10.30 ಗಂಟೆಗೆ ಮಂಗಳೂರಿನ ಗೊರಕ್ಷಕನಾಥ ಸಭಾಭವನ ಕದ್ರಿಯಲ್ಲಿ…
ಬಾಯ್ ಫ್ರೆಂಡ್ ಜೊತೆ ಜಗಳ ಯುವತಿ ಆತ್ಮಹತ್ಯೆ – ನ್ಯೂಸ್ ಫೋಕಸ್
ತುಮಕೂರು: ಬಾಯ್ ಫ್ರೆಂಡ್ ಜೊತೆಗೆ ಗಲಾಟೆ ಮಾಡಿಕೊಂಡು ಯುವತಿಯೊಬ್ಬಳು ಸಾವಿಗೆ ಶರಣಾಗಿರೋ ಘಟನೆ ಗ್ರಾಮಾಂತರ ಹೊಸಹಳ್ಳಿಯಲ್ಲಿ ನಡೆದಿದೆ. ಚೈತನ್ಯ (22) ಮೃತ ಯುವತಿ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. 22 ವರ್ಷದ ಯುವತಿ ಚೈತನ್ಯ ಫೈನಲ್…
ರಾಜಸ್ಥಾನ ರಾಯಲ್ಸ್ ತಂಡ ಸೇರಿದ ಕನ್ನಡತಿ ಶ್ರೇಯಾಂಕಾ ಪಾಟೀಲ್
ಟೀಮ್ ಇಂಡಿಯಾದ ಆಟಗಾರರು ಸಾಮಾನ್ಯವಾಗಿ ಬೇರೆ ಲೀಗ್‌ಗಳಲ್ಲಿ ಆಡುವುದು ಅಪರೂಪ. ಈಗ ಕೆಲವು ಲೀಗ್‌ಗಳಲ್ಲಿ ಭಾರತದ ಆಟಗಾರರು ಕಾಣಿಸಿಕೊಳ್ಳುತ್ತಿದ್ದಾರೆ. ಅದ್ರಲ್ಲೂ ಮಹಿಳಾ ಆಟಗಾರ್ತಿಯರು ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಿದ್ದನ್ನು ನೀವು ನೋಡಿರಬಹುದು. ಈಗ ಇದೇ ಸಾಲಿಗೆ ಮತ್ತೊಂದು ಲೀಗ್ ಸೇರ್ಪಡೆ…
ಗಲಾಟೆ – ಹಲ್ಲೆ ಆರೋಪ : ಮಾಜಿ ಸಂಸದ ಅನಂತ್ ಕುಮಾರ್ ಸೇರಿ ಮೂವರ ವಿರುದ್ಧ FIR – ನ್ಯೂಸ್ ಫೋಕಸ್
ಬೆಂಗಳೂರು : ಬೆಂಗಳೂರಿನ ಹೊರವಲಯದ ಹಳೆ ನಿಜಗಲ್ ಬಳಿ ನಡೆದ ರಸ್ತೆ ಗಲಭೆ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರ ಮಾಜಿ ಸಚಿವ ಹಾಗೂ ಮಾಜಿ ಸಂಸದ ಅನಂತಕುಮಾರ್ ಹೆಗಡೆ, ಅವರ ಗನ್‌ಮ್ಯಾನ್ ಮತ್ತು ಚಾಲಕನ ವಿರುದ್ಧ ದಾಬಸ್‌ಪೇಟೆ ಪೊಲೀಸರು…
ವಿ.ಹಿo. ಪ ಬಜರಂಗದಳ ಕಾಡಬೆಟ್ಟು ವತಿಯಿಂದ ದಿ| ಸುಹಾಸ್ ಶೆಟ್ಟಿ ಸವಿನೆನಪಿಗಾಗಿ ಅಸಹಾಯಕ ಹಿಂದೂ ಕುಟುಂಬಕ್ಕೆ ಸ್ನಾನಗೃಹ ನಿರ್ಮಾಣ – ನ್ಯೂಸ್ ಫೋಕಸ್
ಬಂಟ್ವಾಳ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮತ್ತು ದುರ್ಗಾ ಶಾಖೆ ಕಾಡಬೆಟ್ಟು ಇದರ ನೇತೃತ್ವದಲ್ಲಿ ವಿಶ್ವಹಿಂದೂ ಪರಿಷದ್ ಬಜರಂಗದಳ ಸಮಾಜದಲ್ಲಿ ‘ಸೇವಾ – ಸುರಕ್ಷಾ ಸಂಸ್ಕಾರ ಈ ಘೋಷ ವಾಕ್ಯದೊಂದಿಗೆ ಹಿಂದೂ ಸಮಾಜದ ರಕ್ಷಣೆಗೆ ಕಟಿಬದ್ಧವಾದ ಸಂಘಟಣೆ ಈ ರೀತಿ…
ಇರಾನ್ ಇಸ್ರೇಲ್ ಕದನ ವಿರಾಮದ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾದ ಟ್ರಂಪ್? ಮುಂದಿನ ಗುರಿ ಏನು?- ನ್ಯೂಸ್ ಫೋಕಸ್
ಇಸ್ರೇಲ್ ಇರಾನ್ ಮಧ್ಯೆದಲ್ಲಿ ಎಂಟ್ರಿಯಾದ ಟ್ರಂಪ್ ಇರಾನ್ ಮೇಲೆ ರಾತ್ರೋರಾತ್ರಿ ದಾಳಿ ನಡೆಸಿದರು. ಇದಾದ ಬೆನ್ನಲ್ಲೇ ಇರಾನ್ ಅಮೆರಿಕ ವಿರುದ್ಧ ಸೇಡಿನ ಪ್ರತಿಜ್ಞೆ ಮಾಡಿತ್ತು, ಇಸ್ರೇಲ್ ಮೇಲೆ ದಾಳಿ ಕೂಡ ಮುಂದುವರೆಸಿತ್ತು. ಆದರೆ ಈಗ ಇರಾನ್ ಇಸ್ರೇಲ್ ಮಧ್ಯೆ ಟ್ರಂಪ್ ಮತ್ತೆ…
ಕೊರಗಜ್ಜ ದೈವದ ನರ್ತನ ವೇಳೆ ಬಾಲಕಿಯರು ಕುಣಿದ ವಿಡಿಯೋ ವೈರಲ್ -ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ, ದೈವನರ್ತಕ ಕ್ಷಮೆಯಾಚನೆ – ನ್ಯೂಸ್ ಫೋಕಸ್
ಮಡಿಕೇರಿ: ಮಡಿಕೇರಿ ಕಡೆ ನಡೆದ ಕೊರಗಜ್ಜ ದೈವ ನೇಮದ ಸಂದರ್ಭ ದೈವದ ನರ್ತನದ ಜತೆಗೆ ಇಬ್ಬರು ಬಾಲಕಿಯರೂ ಹೆಜ್ಜೆ ಹಾಕಲು ಅವಕಾಶ ನೀಡಿದ ವೀಡಿಯೋ ವೈರಲ್ ಆಗಿ ದೈವಾರಾಧಕರ ಆಕ್ಷೇಪಕ್ಕೆ ಕಾರಣವಾದ ಹಾಗೂ ಕೊನೆಗೆ ಆ ದೈವ ನರ್ತಕರು ಪತ್ರಿಕಾ ಗೋಷ್ಠಿ…
ಮಂಗಳೂರಿನ ಗಂಜಿಮಠದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ, ನಳಿನ್ ಕುಮಾರ್ ಕಟೀಲ್ ಭಾಗಿ – ನ್ಯೂಸ್ ಫೋಕಸ್
ಮಂಗಳೂರು: ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗಂಜಿ ಮಠ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಾಲ್ಗೊಂಡು,…
ಯಶ್ ‘ಟಾಕ್ಸಿಕ್’ ಮುಂದೆ ಥಂಡಾ ಹೊಡೆದ ವಿಜಯ್ ‘ಜನನಾಯಗನ್’ – ನ್ಯೂಸ್ ಫೋಕಸ್
ತಮಿಳು ನಟ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ವಿಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದೆ. ಸಣ್ಣ ಝಲಕ್‌ನಲ್ಲಿ ದಳಪತಿ ಖಾಕಿ ಖದರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್…
ಸುಳ್ಯದ ಮಾವಿನಕಟ್ಟೆ ಬಳಿ ಕಾಡುಕೋಣಗಳ ಹಿಂಡು ಪ್ರತ್ಯಕ್ಷ – ನ್ಯೂಸ್ ಫೋಕಸ್
ಸುಳ್ಯ: ಕಾಡುಕೋಣಗಳ ಹಿಂಡು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಬಳಿ ರಾತ್ರಿ ನಡೆದಿದೆ. ಕೆಲವು ದಿನಗಳ ಹಿಂದೆ ರಾತ್ರಿ 12ರ ಸುಮಾರಿಗೆ ದೇವಚಳ್ಳ ಪಂಚಾಯತ್ ಬಳಿ ಮುಖ್ಯ ರಸ್ತೆಯಲ್ಲಿ ಕಾಡುಕೋಣಗಳ ಹಿಂಡು ಕಂಡು ಬಂದಿದೆ.…
ಲೋಕಾರ್ಪಣೆಗೆ ಸಿದ್ದಗೊಂಡ ಸಿಗಂದೂರು ತೂಗು ಸೇತುವೆ – ನ್ಯೂಸ್ ಫೋಕಸ್
ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪರವರ ಹಾಗೂ ಸಂಸದ ಶ್ರೀ ಬಿ ವೈ ರಾಘವೇಂದ್ರ ರವರ ಪ್ರಯತ್ನದ ಫಲವಾದ ಸಿಗಂದೂರು ತೂಗು ಸೇತುವೆಯ ಬಹುತೇಕ ಕಾಮಗಾರಿ ಪೂರ್ಣಗೊಂಡು ಇದೀಗ ಲೋಕಾರ್ಪಣೆಗೆ ಸಿದ್ದಗೊಂಡಿದೆ. ಈ ಸೇತುವೆಯು 11 ಪಿಲ್ಲರ್ ಗಳನ್ನು ಹೊಂದಿದ್ದು ಸುಮಾರು…
ಪುತ್ತೂರಿನಿಂದ ಮಂಗಳೂರಿಗೆ ನಾನ್ ಸ್ಟಾಪ್ ಎಕ್ಸ್‌ಪ್ರೆಸ್ ಬಸ್ ಆರಂಭ: ಶಾಸಕ ಅಶೋಕ್ ರೈ- ನ್ಯೂಸ್ ಫೋಕಸ್
ಪುತ್ತೂರು: ಪುತ್ತೂರಿನಿಂದ ಮಂಗಳೂರಿಗೆ ನಾನ್ ಸ್ಟಾಪ್ ಸರಕಾರಿ ಬಸ್ ಶೀಘ್ರ ಸಂಚಾರ ಆರಂಭ ಮಾಡಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಶಾಸಕರ ಕಚೇರಿಯಲ್ಲಿ ಸೋಮವಾರ ನಡೆದ ಕೆಎಸ್‌ಆರ‍್ಟಿಸಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಶಾಸಕರು ತನ್ನ ಕಚೇರಿಯಲ್ಲಿ ಪುತ್ತೂರು…
ಕರ್ನಾಟಕದ ಪ್ರತಿಯೊಂದು ಗ್ರಾಮದಲ್ಲೂ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಮತ್ತು ವೈಫಲ್ಯಗಳ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ- ಕ್ಯಾಪ್ಟನ್ ಚೌಟ
ಗುರುಪುರ: ರಾಜ್ಯದ ಪ್ರಗತಿಗೆ ಅದರಲ್ಲಿಯೂ ಅವಿಭಜಿತ ದಕ್ಷಿಣ ಕನ್ನಡದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವುದಕ್ಕೆ ಜನಾಂದೋಲವನ್ನು ರೂಪಿಸುವವರೆಗೆ ಬಿಜೆಪಿ ವಿರಮಿಸುವುದಿಲ್ಲ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.…
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ನೇತೃತ್ವದಲ್ಲಿ ವ್ಯಾಪಕ ಜನವಿರೋಧಿ ನೀತಿಗಳ ವಿರುದ್ಧ ಪ್ರಬಲ ಪ್ರತಿಭಟನೆ- ನ್ಯೂಸ್ ಫೋಕಸ್
ಮಂಗಳೂರು : ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ದಕ್ಷಿಣ ಕನ್ನಡ ಪ್ರಧಾನ ಕಾರ್ಯದರ್ಶಿ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಬಿಜೆಪಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವತಿಯಿಂದ ಆಯೋಜಿಸಿದ ವಿವಿಧ ಗ್ರಾಮ ಪಂಚಾಯತ್ ಹಾಗೂ ಪಟ್ಟಣ…
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ, ಆರೋಪಿಗಳು NIA ಕಸ್ಟಡಿಗೆ – ನ್ಯೂಸ್ ಫೋಕಸ್
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಬಜೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ನ್ಯಾಯಾಲಯ 8 ಮಂದಿ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ ಕಸ್ಟಡಿಗೆ ನೀಡಿದೆ.ಪ್ರಕರಣ ಸಂಬAಧ ಎನ್‌ಐಎ ಪ್ರತ್ಯೇಕವಾಗಿ ಎಫ್‌ಐಆರ್ ದಾಖಲಿಸಿದೆ.…
ಬಿಜೆಪಿ ಪುತ್ತೂರು ನಗರ ಮಂಡಲ ವತಿಯಿಂದ ಕಾಂಗ್ರೆಸ್ ಸರಕಾರದ ವಿರುದ್ಧ ಪುತ್ತೂರಿನಲ್ಲಿ ಪ್ರತಿಭಟನೆ – ನ್ಯೂಸ್ ಫೋಕಸ್
ಪುತ್ತೂರು : ಕಾಂಗ್ರೆಸ್ ನ ಬೆಲೆಯೇರಿಕೆ ಭ್ರಷ್ಟಾಚಾರವನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ನಗರಮಂಡಲ ವತಿಯಿಂದ ಪುತ್ತೂರಿನ ಮಿನಿ ವಿಧಾನ ಸೌಧದ ಬಳಿ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯ ಕೇಂದ್ರ ಬಿಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ ಕಾಂಗ್ರೆಸ್ ಸರಕಾರದ ದೌರ್ಜನ್ಯ…
ಬಿಜೆಪಿ ಸುಳ್ಯ ಮಂಡಲ ವತಿಯಿಂದ ಕಾಂಗ್ರೆಸ್ ಸರಕಾರದ ವಿರುದ್ಧ ಸಂಜೀವ ಮಠoದೂರ್ ನೇತೃತ್ವದಲ್ಲಿ ಅಜ್ಜಾವರದಲ್ಲಿ ಪ್ರತಿಭಟನೆ – ನ್ಯೂಸ್ ಫೋಕಸ್
ಸುಳ್ಯ : ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಅಜ್ಜಾವರ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಸುಳ್ಯ ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯಲ್ಲಿ ಪುತ್ತೂರಿನ ಮಾಜಿ ಶಾಸಕರಾದ ಸಂಜೀವ ಮಠoದೂರ್ ಭಾಗವಹಿಸಿ ಮಾತಾಡಿದರು. ಕಳೆದ 2 ವರುಷದ…
ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ, ಪ್ರಯಾಣಿಕ ಮೃತ್ಯು – ನ್ಯೂಸ್. ಫೋಕಸ್
ಬೆಳ್ತಂಗಡಿ: ಬದ್ಯಾರ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಆಟೋರಿಕ್ಷಾವೊಂದು ಪಲ್ಟಿಯಾಗಿ ಬಿದ್ದು ಗಂಭೀರವಾಗಿ ಗಾಯಗೊಂಡು ಪ್ರಯಾಣಿಕನೊಬ್ಬ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ. ಮೃತ ವ್ಯಕ್ತಿ ಮಾಲಾಡಿ ನಿವಾಸಿ ಶಿವಾನಂದ ಪಿ ಮಾಳವ 33 ವರ್ಷ ಎಂದು ಗುರುತಿಸಲಾಗಿದೆ.
ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಬನ್ನೂರು ಗ್ರಾಮ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ – ನ್ಯೂಸ್ ಫೋಕಸ್
ಪುತ್ತೂರು : ಕಾಂಗ್ರೆಸ್ ನ ಬೆಲೆಯೇರಿಕೆ ಭ್ರಷ್ಟಾಚಾರವನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಬನ್ನೂರು ವತಿಯಿಂದ ಬನ್ನೂರು ಗ್ರಾಮಪಂಚಾಯತ್ ಮುಂಭಾಗ ಪ್ರತಿಭಟನೆ ಮಾಡಲಾಯಿತು. ಪ್ರಸ್ತಾವಿಕವಾಗಿ ಮಾತನಾಡಿದ ಆರ್ಯಾಪು ಮಹಾಶಕ್ತಿ ಕೇಂದ್ರ ದ ಪ್ರಧಾನ ಕಾರ್ಯದರ್ಶಿ ನಾಗೇಶ್ ಟಿ ಎಸ್ ಕೆಮ್ಮಾಯಿ ಅವರು…
ಸುರತ್ಕಲ್ : ಬಿಜೆಪಿಯಿಂದ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗೆ ಖಂಡಿಸಿ ಭಾರಿ ಪ್ರತಿಭಟನೆ
ಸುರತ್ಕಲ್ : ಬೆಲೆ ಏರಿಕೆ, ಭ್ರಷ್ಟಾಚಾರದಿಂದ ಜನರು ಬದುಕಲು ಸಾಧ್ಯವಾಗದಂತಹ ಸ್ಥಿತಿ ರಾಜ್ಯದಲ್ಲಿದೆ. ಸ್ವತಃ ಕಾಂಗ್ರೆಸ್ ಶಾಸಕರೇ ಅನುದಾನ ಸಿಗದೇ ಪರದಾಡುತ್ತಿದ್ದು ಬಿಜೆಪಿ ಶಾಸಕರಿಗೆ ಪ್ರತಿಭಟನೆ ಮಾಡುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟುವಂತೆ ಮಾಡಿ ಎಂದು ಹೇಳುವಷ್ಟರ ಮಟ್ಟಿಗೆ ಅನುದಾನ ನೀಡಿದ…
ಶಕ್ತಿ ಯೋಜನೆ ಬಳಿಕ ಪುರುಷರ ಪರಿಸ್ಥಿತಿ ಕೆಟ್ಟದಾಗಿದೆ: ಕಾಂಗ್ರೆಸ್ ಶಾಸಕ ಆರ್ ವಿ ದೇಶಪಾಂಡೆ- ನ್ಯೂಸ್ ಫೋಕಸ್
ಕೊಪ್ಪಳ ಜಿಲ್ಲೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಶಕ್ತಿ ಬಳಸಿಕೊಂಡು ಮಹಿಳೆಯರು ರಾಜ್ಯದ ಎಲ್ಲ ಭಾಗದಲ್ಲಿಯೂ ಓಡಾಡುತ್ತಿದ್ದಾರೆ. ಗಂಡುಮಕ್ಕಳಿಗೆ ಬಸ್‌ನಲ್ಲಿ ಹತ್ತಲು ಸಾಧ್ಯವಾಗುತ್ತಿಲ್ಲ. ಪುರುಷರ ಪರಿಸ್ಥಿತಿ ಕೆಟ್ಟದಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆದ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.…
ದಕ್ಷಿಣ ಕನ್ನಡ-ಉತ್ತರ ಕನ್ನಡಕ್ಕೆ 3 ಗಂಟೆಯಲ್ಲಿ ಅಪ್ಪಳಿಸಲಿದೆ ಭಾರಿ ಗಾಳಿ ಮಳೆ- ನ್ಯೂಸ್ ಫೋಕಸ್
ಕರಾವಳಿಯಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಭಾನುವಾರದ ಧಾರಾಕಾರ ಮಳೆ ಗಾಳ ಬಳಿಕ ಸೋಮವಾರ ಬೆಳ್ಳಂಬೆಳಿಗ್ಗೆ ಅಲರ್ಟ್ ಕೊಡಲಾಗಿದೆ. ಇಂದು ಬೆಳ್ಳಂಬೆಳಗ್ಗೆ 7 ಗಂಟೆ ಗಂಟೆಗೆ ಅಲರ್ಟ್ ಕೊಟ್ಟಿರುವ ಹವಾಮಾನ ಇಲಾಖೆ ಮುಂದಿನ 3 ಗಂಟೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡಕ್ಕೆ…
ಹಣಕ್ಕಾಗಿ ಹೆತ್ತ ತಾಯಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಮಗ- ನ್ಯೂಸ್ ಫೋಕಸ್
ಮಣಿಪಾಲ: ಹಣಕ್ಕಾಗಿ ಮಗ ತನ್ನ ತಾಯಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣ ಮಣಿಪಾಲದಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆಯಿಂದ ಕೊಲೆಯೇ ನಡೆದಿದೆ ಎಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಆರೋಪಿ ಮಗನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಕೊಲೆಗೀಡಾದ ತಾಯಿಯನ್ನು ಪದ್ಮಾಬಾಯಿ (45)…
ಪುತ್ತೂರು : ವಿಷ ಸೇವನೆ ಮಾಡಿದ್ದ ಪ್ರೇಮಿಗಳನ್ನು ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು – ನ್ಯೂಸ್ ಫೋಕಸ್
ಪುತ್ತೂರು ಯುವಕ ಮತ್ತು ಯುವತಿ ವಿಷ ಸೇವಿಸಿ ಒದ್ದಾಡುತ್ತಿದ್ದನ್ನು ಕಂಡು ಅವರನ್ನು ಆಸ್ಪತ್ರೆಗೆ ಕರೆತಂದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ. ಯುವಕ ಮತ್ತು ಯುವತಿ ಮೂಲತಃ ಬೆಂಗಳೂರಿನ ಯಲಹಂಕದವರಾಗಿದ್ದು ಇವರನು ಶ್ರೀಶ ಮತ್ತು ಪ್ರಜ್ವಲ ಎಂದು ಗುರುತಿಸಲಾಗಿದೆ.ಅವರನ್ನು ಆಂಬುಲೆನ್ಸ್ ಮೂಲಕ ಪುತ್ತೂರಿನ ಸರಕಾರಿ…
ಸರ್ವೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ- ನ್ಯೂಸ್ ಫೋಕಸ್
ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ದಿ ಕೆಲಸಗಳು ಮತ್ತು ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ಕಾಂಗ್ರೆಸ್ ಬಗ್ಗೆ ಒಲವು ಹೆಚ್ಚಿಸಿದೆ,ಮುಂದಿನ 15 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಭದ್ರವಾಗಿಯೇ ಉಳಿಯಲಿದೆ ಎಂದು ಪುತ್ತೂರು…
ಇಳಂತಿಲ ಗ್ರಾಮ ಪಂಚಾಯತ್ ಸದಸ್ಯ ಸುಪ್ರೀತ್ ಪಾಡೆಂಕಿ ಅನಾರೋಗ್ಯದಿಂದ ನಿಧನ – ನ್ಯೂಸ್ ಫೋಕಸ್
ಉಪ್ಪಿನಂಗಡಿ : ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಸ್ತುತ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಸುಪ್ರೀತ್ ರವರು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧಾನರಾಗಿದ್ದಾರೆ.
ಗ್ರಾಪಂ ಸಾಮಾನ್ಯ ಸಭೆಯಲ್ಲಿ ತುಳು ಮಾತನಾಡದಂತೆ ನಿರ್ಬಂಧ : ಜಿಪಂ ಸುತ್ತೋಲೆಶಾಸಕ ಅಶೋಕ್ ರೈ ಸೂಚನೆ: ಆದೇಶ ವಾಪಸ್
ಪುತ್ತೂರು: ದ ಕ ಜಿಲ್ಲೆಯ ಗ್ರಾಪಂ ಗಳಲ್ಲಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಯ ವೇಳೆ ತುಳು ಭಾಷೆಯನ್ನು ಬಳಸಬಾರದು ರಂದು ಜಿಪಂ ಶನಿವಾರ ಸುತ್ತೋಲೆ ಹೊರಡಿಸಿದ್ದು ,ಈ ಸುತ್ತೋಲೆ ಯನ್ನು ವಾಪಸ್ ಪಡೆಯುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಅಧಿಕಾರಿಗಳಿಗೆ…
ಕೊಳ್ತಿಗೆ ಗ್ರಾಮದಲ್ಲಿ ಕಾಡಾನೆ ಹಾವಳಿ: ಅಧಿಕಾರಿಗಳ, ಸಾರ್ವಜನಿಕರ ಸಭೆ, ನಾಡಿಗೆ ಬಂದ ಕಾಡಾನೆಯನ್ನು ಮತ್ತೆ ಕಾಡಿಗೆ ಅಟ್ಟಿಸಿದ ಬಳಿಕ ಸೋಲಾರ್ ತಂತಿಬೇಲಿ ಅಳವಡಿಕೆ: ಶಾಸಕ ಅಶೋಕ್ ರೈ
ಪುತ್ತೂರು: ಕೊಳ್ತಿಗೆ ಗ್ರಾಮದಲ್ಲಿ ಕಳೆದ ಕೆಲವು ತಿಂಗಳಿಂದ ಕಾಡಟನೆ ಹಾವಳಿ ಇದೆ. ರಾತ್ರಿ ವೇಳೆ, ಕೆಲವೊಮ್ಮೆ ಹಗಲು ಹೊತ್ತಿನಲ್ಲೂ ಕೃಷಿ ತಓಟಕ್ಕೆ ಬಂದು ಕೃಷಿ ಹಾಗೂ ಇನ್ನಿತರ ಬೆಳೆಗಳನ್ನು ನಾಶ ಮಾಡುತ್ತಿದೆ. ನಾಡಿಗೆ ಬಂದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಅರಣ್ಯ…
ಲಂಚ ಪಡೆದ ಪ್ರಕರಣ, ಗಣಿ ಇಲಾಖೆ ಉಪನಿರ್ದೇಶಕಿ ಕೃಷ್ಣವೇಣಿ ಸಸ್ಪೆಂಡ್ – ನ್ಯೂಸ್ ಫೋಕಸ್
ಮಂಗಳೂರು: ಲಂಚ ಪಡೆದ ಪ್ರಕರಣದಲ್ಲಿ ಜೈಲು ಸೇರಿ ನಂತರ ಜಾಮೀನಿನಲ್ಲಿ ಹೊರಬಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದ ಮಂಗಳೂರಿನ ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ ಅವರನ್ನು ಕೆಲಸದಿಂದ ವಜಾಗೊಳಿಸಿದೆ. ಭ್ರಷ್ಟಾಚಾರದ ಆರೋಪದಲ್ಲಿ ಬಂಧಿತರಾಗಿ ಜೈಲು ಸೇರಿದ್ದ ಅವರು ಜಮೀನು ಪಡೆದ ನಂತರ ಅದೇ…
ವಿಟ್ಲ ಚಾಲಕನ ನಿಯಂತ್ರಣ ತಪ್ಪಿ ವಾಗನರ್ ಕಾರ್ ಪಾದಚಾರಿಗೆ ಡಿಕ್ಕಿ -ನ್ಯೂಸ್ ಫೋಕಸ್
ವಿಟ್ಲ : ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿಗೆ ಡಿಕ್ಕಿ ಹೊಡೆದು ಪಕ್ಕದ ಧರೆಗೆ ಗುದ್ದಿದ ಘಟನೆ ವಿಟ್ಲದ ಅಡ್ಯನಡ್ಕ ಎಂಬಲ್ಲಿ ನಡೆದಿದೆ. ಘಟನೆಪರಿಣಾಮಕಾರ್ಡ್ರೈವರ್ಗೆಮತ್ತುಪಾದಚಾರಿಗೆಸಣ್ಣಪುಟ್ಟಗಾಯಗಳಾಗಿವೆ. ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ.
ನಾಳೆ ಪುತ್ತೂರಿನಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಪುತ್ತೂರು ಬಿಜೆಪಿ ವತಿಯಿಂದ ಎಲ್ಲಾ ಗ್ರಾಮ ಪಂಚಾಯತ್ ಮುಂಭಾಗ ಏಕಕಾಲದಲ್ಲಿ ಪ್ರತಿಭಟನೆ- ನ್ಯೂಸ್ ಫೋಕಸ್
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನಸಾಮಾನ್ಯರ ಮೇಲೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯತೆ ಹಾಗೂ ದುರಾಡಳಿತದ ವಿರುದ್ಧ ನಾಳೆ ಬಿಜೆಪಿ ನೇತೃತ್ವದಲ್ಲಿ ಪುತ್ತೂರು ವಿಧಾಸಭಾಕ್ಷೇತ್ರದ ಎಲ್ಲಾ ಪಂಚಾಯತ್, ಪಟ್ಟಣ ಪಂಚಾಯತ್ , ನಗರ ಸಭೆ , ಮಿನಿ ವಿಧಾನಸೌಧ ಮುಂಭಾಗದಲ್ಲಿ ಬಿಜೆಪಿ…
ಸುಬ್ರಮಣ್ಯ ರೈಲ್ವೆ ಹಳಿ ಮೇಲೆ ಬಿದ್ದ ಬಂಡೆಕಲ್ಲು ಸಂಚಾರದಲ್ಲಿ ವ್ಯತ್ಯಾಸ – ನ್ಯೂಸ್ ಫೋಕಸ್
ಸುಬ್ರಹ್ಮಣ್ಯ: ಸಕಲೇಶಪುರದಿಂದ ಸುಬ್ರಹ್ಮಣ್ಯ ಕಡೆ ಬರುವ ರೈಲು ಎಡಕುಮೇರಿ-ಶಿರಿಬಾಗಿಲು ಗುಡ್ಡ ಕುಸಿದಿರುವುದರಿಂದ ರೈಲು ಸಂಚಾರದ ಸಮಯದಲ್ಲಿ ವ್ಯತ್ಯಾಸವಾಗಿದೆ. ರೈಲು ಸಂಖ್ಯೆ 16511 ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಕಡಗರವಳ್ಳಿಗೆ ಬೆಳಗ್ಗೆ 3:40ಕ್ಕೆ ಆಗಮಿಸಿದ್ದು, ತಡವಾಗಿ ಹೊರಡಲಿದೆ. ಹಾಗೇ ರೈಲು ಸಂಖ್ಯೆ 16585 SMVT…
ಬಿಜೆಪಿ ಮಂಗಳೂರು ಉತ್ತರ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ನ್ಯೂಸ್ ಫೋಕಸ್
ಮಂಗಳೂರು : ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲ, ಕಾವೂರು ಮಹಾಶಕ್ತಿ ಕೇಂದ್ರ -2 ಇವರ ನೇತೃತ್ವದಲ್ಲಿ ಯೆಯ್ಯಾಡಿ ಶ್ರೀ ರಾಮ ಮಂದಿರದಲ್ಲಿ ಆಯೋಜನೆಯಾದ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಡಾ.…
ಸೋಮೇಶ್ವರದ ಕಡಲ ತೀರದಲ್ಲಿ ಸಂಸದ ಕ್ಯಾ. ಚೌಟ ನೇತೃತ್ವದ 2ನೇ ಆವೃತ್ತಿಯ ʼಯೋಗ ವಿದ್ ಯೋಧʼ ಕಾರ್ಯಕ್ರಮ- ನ್ಯೂಸ್ ಫೋಕಸ್
ಮಂಗಳೂರು: ದಕ್ಷಿಣ ಕನ್ನಡದ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಒಂದಾಗಿರುವ ಸೋಮೇಶ್ವರದ ಕಡಲಕಿನಾರೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪರಿಕಲ್ಪನೆಯ “ಯೋಗ ವಿತ್ ಯೋಧ” 2ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಅತ್ಯಂತ ಯಶಸ್ವಿ ಹಾಗೂ ಅರ್ಥಪೂರ್ಣವಾಗಿ ನಡೆಯಿತು. ಆ…
ಪುತ್ತೂರು ನಗರಸಭಾ ಸದಸ್ಯ ಶೀನಪ್ಪ ನಾಯ್ಕ ನಿಧನ – ನ್ಯೂಸ್ ಫೋಕಸ್
ಅನಾರೋಗ್ಯದಿಂದ ನಗರಸಭಾ ಸದಸ್ಯ ಶೀನಪ್ಪ ನಾಯ್ಕ್ ನಿಧಾನರಾಗಿದ್ದಾರೆ. ಮುಕ್ರುoಪಾಡಿ ಅನಂದಾಶ್ರಮ ನಿವಾಸಿಯಾಗಿದ್ದ ಇವರು ಪುತ್ತೂರು ನಗರಸಭಾ ಸದಸ್ಯರಾಗಿದ್ದರು. ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯಸಿರೆಳಿದಿದ್ದಾರೆ.
ಪುತ್ತೂರು ಬಿಜೆಪಿ ವತಿಯಿಂದ ಯೋಗ ದಿನಾಚರಣೆ – ನ್ಯೂಸ್ ಫೋಕಸ್
ಪುತ್ತೂರು :ಬಿಜೆಪಿ ಪುತ್ತೂರು ವಿಧಾನ ಸಭಾ ವ್ಯಾಪ್ತಿಯ ಯೋಗ ದಿನಾಚರಣೆ ಕಾರ್ಯಕ್ರಮವು ಒಕ್ಕಲಿಗ ಗೌಡ ಸಮುದಾಯ ಭವನ ತೆಂಕಿಲ ಇಲ್ಲಿ ನಗರ ಮತ್ತು ಗ್ರಾಮಾಂತರ ಯುವಮೋರ್ಚಾ ದ ನೇತ್ರವತ್ವದಲ್ಲಿ ನಡೆಯಿತುಯೋಗ ಕಾರ್ಯಕ್ರಮವನ್ನು ಯೋಗ ತರಬೇತಿ ದರಾರದ ವಸಂತ ಸುವರ್ಣ ಇವರು ಉದ್ಘಾಟಿಸಿ…
ವಿಶ್ವ ದಾಖಲೆಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ- ನ್ಯೂಸ್ ಫೋಕಸ್
ವಿಶಾಖಪಟ್ಟಣಂ: ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು, ಈ ಕಾರ್ಯಕ್ರಮ ವಿಶ್ವ ದಾಖಲೆಯ ಸ್ಥಾಪನೆಯತ್ತ ದಾಪುಗಾಲಿರಿಸಿದೆ. 11ನೇ ಅಂತರರಾಷ್ಟ್ರೀಯ ಯೋಗ ದಿನ (2025) ಸಾಗರದ ಕರಾವಳಿಯಲ್ಲಿರುವ ವಿಶಾಖಪಟ್ಟಣಂನಲ್ಲಿ ಪ್ರಾರಂಭವಾಯಿತು. ಪ್ರಧಾನಿ ನರೇಂದ್ರ ಮೋದಿ ಸ್ವತಃ ಈ…
ಕೇಂದ್ರದ ಮಾರ್ಗ ಸೂಚಿಯಂತೆ ವಸತಿ ಯೋಜನೆಯಲ್ಲಿ ಅಲ್ಪ ಸಂಖ್ಯಾತರಿಗೆ ಮೀಸಲಾತಿ, ಸಿ.ಎಂ ಸ್ಪಷ್ಟನೆ – ನ್ಯೂಸ್ ಫೋಕಸ್
ಬೆಂಗಳೂರು: ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ಶೇ.10 ರಿಂದ ಶೇ.15 ಕ್ಕೆ ಹೆಚ್ಚಿಸುವ ಬಗ್ಗೆ ವಿರೋಧ ಪಕ್ಷ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದು ಈ ನಿರ್ಧಾರ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ನಗರೋತ್ಥಾನ ಹಂತ 4 ಬಾಕಿ ಇರುವ ಹಣ 20 ದಿನದೊಳಗೆ ಪಾವತಿ: ಶಾಸಕ ಅಶೋಕ್ ರೈ ಮನವಿಗೆ ಸರಕಾರದ ಸ್ಪಂದನೆ- ನ್ಯೂಸ್ ಫೋಕಸ್
ಪುತ್ತೂರು: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಮನೆ ನಿರ್ಮಾಣ, ಶೌಚಾಲಯ ನಿರ್ಮಾಣ ಹಾಗೂ ಮನೆ ದುರಸ್ಥಿ ಗೆ ಈ ಹಿಂದೆ ಸರಕಾರ ಫಲಾನುಭವಿಗಳನ್ನು ಆಯ್ಕೆ ಮಾಡಿತ್ತು. ಆಯ್ಕೆಯಾದ ಪ.ಜಾತಿ.ಪ ಪಂಗಡ,ವಿಕಲಚೇತನ ಹಾಗೂ ಹಿಂದುಳಿದ ವರ್ಗದ ಫಲಾನುಭವಿಗಳಿಗೆ ಕಂತಿನ ಹಣ ಪಾವತಿಯಾಗಿರಲಿಲ್ಲ. ಈ…
ಪುಡಾ ಕಚೇರಿಗೆ ಹೆಚ್ಚುವರಿ ಸಿಬಂದಿಗಳನ್ನು ನೇಮಿಸಿ, ನಗರಾಭಿವೃದ್ದಿ ಇಲಾಖೆಗೆ ಶಾಸಕ ಅಶೋಕ್ ರೈ ಮನವಿ- ನ್ಯೂಸ್ ಫೋಕಸ್
ಪುತ್ತೂರು: ಪುತ್ತೂರು ನಗರಾಯೋಜನಾ ಪ್ರಾಧಿಕಾರ ಕಚೇರಿ(ಪುಡಾ) ಗೆ ಹೆಚ್ಚುವರಿ ಸಿಬಂದಿಗಳನ್ನು ನೇಮಕ ಮಾಡುವಂತೆ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ದೀಪಾಚೋಲನ್ ಅವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ಇಲಾಖೆಯ ಕಾರ್ಯದರ್ಶಿಯವರನ್ನು ಭೇಟಿಯಾದ ಶಾಸಕರು ಸಿಬಂದಿಗಳ ಕೊರತೆ ಇರುವ ಕಾರಣಕ್ಕೆ…
ಕೆರೆಯಲ್ಲಿ ಮೀನು ಹಿಡಿಯುತ್ತಿದ್ದವರಿಗೆ ಸಿಕ್ಕಿತು ಜಾಕ್ ಪಾಟ್! ಒಂದೇ ಮೀನಿಗೆ ದುಂಬಾಲು ಬಿದ್ದ ಜನ! – ನ್ಯೂಸ್ ಫೋಕಸ್
ಮಂಡ್ಯ : ಇಂತಾದ್ದೊಂದು ಪ್ರಸಂಗ ನಡೆದಿರೋದು ಸಕ್ಕರೆನಾಡು ಮಂಡ್ಯದ ಕೆಆರ್ ಪೇಟೆಯ ದೇವಿರಮ್ಮಣ್ಣಿ ಕೆರೆಯಲ್ಲಿ. ಎಂದಿನಂತೆ ಮೀನುಗಾರರು ಮೀನು ಹಿಡಿಯಲು ಇಂದು ಕೆರೆಯಲ್ಲಿ ಬಲೆ ಹಾಕಿದ್ದರು. ಈ ಬಲೆಗೆ ಅಪರೂಪದ ಬಂಗಾರದ ಬಣ್ಣದ ಗೌರಿ ಮೀನು ಸಿಲುಕಿದೆ. ನಂತರ ಈ ವಿಚಾರ…
ಭಾರತದ ಅತಿದೊಡ್ಡ ಎಲ್ಪಿಜಿ ಸಂಗ್ರಹಾಗಾರ ಈಗ ಮಂಗಳೂರಿನಲ್ಲಿ – ನ್ಯೂಸ್ ಫೋಕಸ್
ಮಂಗಳೂರು :ಮಂಗಳೂರಿನಲ್ಲಿ 80,000 ಟನ್ ಸಾಮರ್ಥ್ಯದ ಭೂಗತ ಎಲ್ಪಿಜಿ ಸಂಗ್ರಹಾಗಾರ ನಿರ್ಮಾಣ ಕಾಮಗಾರಿ ಹಾಗೂ ಸಿದ್ಧತಾ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇದು ಭಾರತದ ಅತಿದೊಡ್ಡ ಭೂಗತ ಎಲ್ಪಿಜಿ ಸಂಗ್ರಹಾಗಾರವಾಗಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ಗಾಗಿ ಎಂಇಐಎಲ್ ನಿರ್ಮಿಸಿರುವ ಈ ಸಂಗ್ರಹಾಗಾರವು ಇಂಧನ…
ಪಾಪದ ಹಣದಲ್ಲಿ ಬಟ್ಟೆ ತೆಗೆದುಕೊಳ್ಳುವಷ್ಟು ದರಿದ್ರ ನನಗೆ ಬಂದಿಲ್ಲ ಎಚ್ ಡಿ ಕುಮಾರಸ್ವಾಮಿ – ನ್ಯೂಸ್ ಫೋಕಸ್
ಬೆಂಗಳೂರು : ಪಾಪದ ದುಡ್ಡಲ್ಲಿ ಬೆಟ್ಟೆ ತೆಗೆದುಕೊಳ್ಳುವಷ್ಟು ಇನ್ನು ನನಗೆ ಅಷ್ಟು ದಾರಿದ್ರ್ಯ ಬಂದಿಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನನಗೆ ಡಿ.ಕೆ ಶಿವಕುಮಾರ್ ಅವರಿಂದ ಬಟ್ಟೆ ತಗೊಳೋ ಅವಶ್ಯಕತೆ ಇಲ್ಲ.…
ಪುತ್ತೂರು ಬಿಜೆಪಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೂನ್ 23ರಂದು ಬೃಹತ್ ಪ್ರತಿಭಟನೆ “ -ಸಂಜೀವ ಮಠಂದೂರು ಪತ್ರಿಕಾಗೋಷ್ಠಿ- ನ್ಯೂಸ್ ಫೋಕಸ್
ಕರ್ನಾಟಕ ರಾಜ್ಯ ಸರಕಾರದಲ್ಲಿ ಸ್ವಜನ ಪಕ್ಷಾಪಾತ ಭ್ರಷ್ಟಚಾರ ತಾಂಡವವಾಡುತ್ತಿದೆ. ಅಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯವಾಗಿದೆ. ಜನಸಾಮಾನ್ಯರು ದಿನ ನಿತ್ಯ ಒಂದಲ್ಲೊಂದು ಸಮಸ್ಯೆಯನ್ನು ಅನುಭವಿಸುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.ಭ್ರಷ್ಟಾಚಾರ 94ಸಿ ಯಿಂದ ಹಿಡಿದು ವಾಲ್ಮೀಕಿ ನಿಗಮದ ತನಕ ಈ ರಾಜ್ಯದಲ್ಲಿ ಬಹಿರಂಗ ಆಗಿದೆ.…
ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತೆ ಕೆಲಸದ ದಿನಗಳು, ಸುಪ್ರೀಂ ಕೋರ್ಟ್ – ನ್ಯೂಸ್ ಫೋಕಸ್
ನವದೆಹಲಿ: ಪ್ರಮುಖ ಆಡಳಿತಾತ್ಮಕ ಬದಲಾವಣೆಯಲ್ಲಿ,ಕಾನೂನು ಮತ್ತು ನ್ಯಾಯ ಸಚಿವಾಲಯವು ಸುಪ್ರೀಂ ಕೋರ್ಟ್ (ತಿದ್ದುಪಡಿ) ನಿಯಮಗಳು, 2025 ಪ್ರಕಾರ 2ನೇ ಮತ್ತು 4ನೇ ಶನಿವಾರ ಸುಪ್ರೀಂ ಕೋರ್ಟ್ ನ ನೋಂದಾವಣೆ ಮತ್ತು ಕಚೇರಿಗಳ ಕೆಲಸದ ದಿನಗಳ ಪಟ್ಟಿಗೆ ಮರಳಿ ಸೇರಿಸಿದೆ.ಗೆಜೆಟ್‌ನಲ್ಲಿ ಪ್ರಕಟವಾದ ಅಧಿಸೂಚನೆಯ…
ಇಸ್ರೇಲ್ ನಲ್ಲಿ ಇರುವ ಹಿಂದೂ ಯುವಕರ ತಂಡದಿಂದ ಸುಹಾಸ್ ಶೆಟ್ಟಿ ಹೆತ್ತವರಿಗೆ ಆರ್ಥಿಕ ನೆರವು – ನ್ಯೂಸ್ ಫೋಕಸ್
ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹೆತ್ತವರಿಗೆ ಇಸ್ರೇಲ್ ನಲ್ಲಿ ದುಡಿಯುತ್ತಿರುವ ಹಿಂದೂ ಯುವಕರು 5 ಲಕ್ಷ ಹಣವನ್ನು ಸಂಗ್ರಹಿಸಿ ಸುಹಾಸ್ ಶೆಟ್ಟಿ ಹೆತ್ತವರಿಗೆ ಪರಮಾಪೂಜ್ಯ ವಜ್ರದೇಹಿ ಮಠದ ಸ್ವಾಮೀಜಿಯವರ ಕೈಯಿಂದ ಹಸ್ತಾಂತರ ಮಾಡಿಸಿದ್ದಾರೆ
ಬ್ರಹ್ಮಾವರ : ಮಚ್ಚಿನಿಂದ ಕಡಿದು ಹೆಂಡತಿಯ ಕೊಲೆ ಮಾಡಿದ ಗಂಡ – ನ್ಯೂಸ್ ಫೋಕಸ್
ಬ್ರಹ್ಮಾವರ : ಕತ್ತಿಯಿಂದ ಕಡಿದು ಹೆಂಡತಿಯನ್ನು ಕಡಿದು ಕೊಂಡಿರುವ ಘಟನೆ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಜೂನ್19 ರ ರಾತ್ರಿ ನಡೆದಿದೆ. ಪತ್ನಿ ಹೆಚ್ಚಾಗಿ ಮೊಬೈಲ್ ಬಳಸುತ್ತಾಲೆಂದು ಪತಿ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ. ರೇಖಾ ಕೊಲೆಯಾದ ಹೆಂಗಸು .…
ಜೂನ್ 23ರಂದು ಬಿಜೆಪಿ ವತಿಯಿಂದ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ, ಕಾವೂರಿನಲ್ಲಿ ಪೂರ್ವಭಾವಿ ಸಭೆ – ನ್ಯೂಸ್ ಫೋಕಸ್
ರಾಜ್ಯ ಕಾಂಗ್ರೆಸ್ ಸರಕಾರ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಯಾವುದೇ ಅನುದಾನಗಳನ್ನು ನೀಡದೆ ನಿರ್ಲಕ್ಷ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಜೂನ್ 23 ರಂದು ಭಾರತೀಯ ಜನತಾ ಪಕ್ಷದ ವತಿಯಿಂದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ…
ಮಿಡ್ ನೈಟ್ ರೈಡ್ – ದಕ್ಷಿಣ ಕನ್ನಡ ಎಸ್ಪಿ ಗೆ ಹೈಕೋರ್ಟ್ ನೋಟೀಸ್ – ನ್ಯೂಸ್ ಫೋಕಸ್
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪೊಲೀಸರು ಒಂದು ಸಮುದಾಯದ ಮನೆಗಳಿಗೆ ಮಧ್ಯರಾತ್ರಿ ತೆರಳಿ ನಾಗರಿಕರ ಫೋಟೋ ತೆಗೆದು ಜಿಪಿಎಸ್ ಅಪ್‌ಲೋಡ್ ಮಾಡಿದ ಮಿಡ್‌ನೈಟ್ ರೈಡ್‌ಗೆ ಸಂಬಂಧಿಸಿ ಹೈಕೋರ್ಟ್ ಜಿಲ್ಲಾ ಎಸ್ಪಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಇಂತಹ ಪ್ರಕರಣಕ್ಕೆ ಸಂಬಂಧಿಸಿ…
ಚಾಮರಾಜನಗರ : ಕುರಿ ಮೇಯಿಸುತ್ತಿದ್ದ ಮಹಿಳೆಯ ಮೇಲೆ ಹುಲಿ ದಾಳಿ: ಮಹಿಳೆ ಸ್ಥಳದಲ್ಲೇ ಸಾವು
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯಲ್ಲಿ ಹುಲಿಯೊಂದು ಕುರಿ ಮೇಯಿಸುತ್ತಿದ್ದ ಮಹಿಳೆ ಮೇಲೆ ಏಕ ಏಕಿ ದಾಳಿ ಮಾಡಿದೆ. 45 ವರ್ಷದ ಪುಟ್ಟಮ್ಮ ಎಂಬುವವರನ್ನು ಕೊಂದಿರುವ ಘಟನೆ ನಡೆದಿದೆ. ಕುರಿ ಮೇಯಿಸಲು ತೆರಳಿದ್ದ ದೇಶಿಪುರ ಕಾಲೋನಿಯ ಪುಟ್ಟಮ್ಮಗೆ ಹುಲಿ ದಾಳಿ ಮಾಡಿದೆ. ಪುಟ್ಟಮ್ಮನನ್ನು…
ಕರಾವಳಿ ಜಿಲ್ಲೆಗಳಲ್ಲಿ ಜೂನ್ 26ರ ವರೆಗೂ ಮಳೆ ಭಾರಿ ಮಳೆ – ನ್ಯೂಸ್ ಫೋಕಸ್
ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ , ಜೂನ್ 26ರವರೆಗೂ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ,…
ಬಂಗಾರದ ಬೆಲೆ ಗೊತ್ತಿಲ್ಲದೆ ಮಾಂಗಲ್ಯ ಖರೀದಿಗೆ ಬಂದಿದ್ದ ವೃದ್ಧ ಬಡ ದಂಪತಿಗೆ ಉಚಿತವಾಗಿ ಮಂಗಳಸೂತ್ರ ಕೊಟ್ಟ ಅಂಗಡಿ ಮಾಲೀಕ- ನ್ಯೂಸ್ ಫೋಕಸ್
ಮಹಾರಾಷ್ಟ್ರ : ಇಂದಿನ ಚಿನ್ನದ ದರದ ಬಗ್ಗೆ ಯಾವುದೇ ಮಾಹಿತಿಯಿಲ್ಲದೆ ತಾವು ಕೂಡಿಟ್ಟಿದ್ದ ಅಲ್ಪ ಸ್ವಲ್ಪ ಹಣವನ್ನು ಚಿನ್ನದ ಅಂಗಡಿಗೆ ಬಂದಿದ್ದ ಬಡ ವೃದ್ಧ ದಂಪತಿಗೆ, ಅವರು ಕೊಳ್ಳ ಬಯಸಿದ್ದ ಮಾಂಗಲ್ಯ ಸರವನ್ನು ಅಂಗಡಿಯ ಮಾಲೀಕ ಉಚಿತವಾಗಿ ನೀಡಿರುವ ಘಟನೆ ಇತ್ತೀಚೆಗೆ…
ಇಂಡಿಯ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ಪುತ್ತೂರಿನ ಸಂಧ್ಯಾ – ನ್ಯೂಸ್ ಫೋಕಸ್
ಪುತ್ತೂರು : ಪುತ್ತೂರಿನ ಸಂಧ್ಯಾ ಇವರು ಇಂಡಿಯ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೊಸ ಸಾಧನೆಯನ್ನು ಮಾಡಿದ್ದಾರೆ. ತಲೆಯ ಮೇಲೆ ಬೆಂಕಿಯ ಉಂಗುರವನ್ನು ಇಟ್ಟುಕೊಂಡು 3 ನಿಮಿಷ 17 ಸೆಕೆಂಡ್ ಗಳ ಕಾಲ ಭರತನಾಟ್ಯ ನೃತ್ಯ ಪ್ರದರ್ಶಿಸುವುದರ ಮೂಲಕ ಹೊಸ ದಾಖಲೆಯನ್ನು…
ಸಾಕ್ಷಿ ಇದ್ರೆ ಪೊಲೀಸ್ ಠಾಣೆಗೆ ತನ್ನಿ: ಸೋಶಿಯಲ್ ಮೀಡಿಯಾ ಇನ್ವೆಸ್ಟಿಗೇಷನ್ ಅಪರಾಧ – ಸುಧೀರ್ ರೆಡ್ಡಿ
ಮಂಗಳೂರು: ಸೋಶಿಯಲ್ ಮೀಡಿಯಾಗಳಲ್ಲಿ ಅವನು ಅಪರಾಧಿ ಅವನು ಇನೋಸೆಂಟ್ ಅಂತ ಪೋಸ್ಟ್ ಹಾಕೋರಿಗೆ ಮಂಗಳೂರು ಪೊಲೀಸ್ ಕಮಿಷನರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ನೀವೇ ಇನ್ವೆಸ್ಟಿಗೇಶನ್ ಮಾಡಬೇಡಿ ಸಾಕ್ಷಿ ಇದ್ರೆ ನಮ್ಮಲ್ಲಿ ಬನ್ನಿ ಅದನ್ನು ಪರಿಗಣಿಸುತ್ತೇವೆ ಅದೆಲ್ಲ ಬಿಟ್ಟು ನಿಮ್ಮಷ್ಟಕೆ ನೀವೇ ಇನ್ವೆಸ್ಟಿಗೇಶನ್…
ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಪುತ್ತೂರು ಬಿಜೆಪಿ ವತಿಯಿಂದ ಜೂನ್ 21ರಂದು ಯೋಗ ದಿನಾಚರಣೆ – ನ್ಯೂಸ್ ಫೋಕಸ್
ಪುತ್ತೂರು : ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಈ ಬಾರಿ ಪುತ್ತೂರು ಬಿಜೆಪಿ ವತಿಯಿಂದ ಜೂನ್ 21 ರಂದು ಬೆಳಗ್ಗೆ 7.30 ಗಂಟೆಗೆ ಪುತ್ತೂರಿನ ಒಕ್ಕಲಿಗ ಗೌಡ ಸಮುದಾಯದ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಸ್ತಾವನೆ ಮಾಡಿದ…
ವಿಟ್ಲ : ಪಿಕಪ್‘ ನಿಂದ ಬಿದ್ದ ದನ, ಅಕ್ರಮ ಗೋ ಸಾಗಾಟ ಶಂಕೆ – ನ್ಯೂಸ್ ಫೋಕಸ್
ವಿಟ್ಲ : ಚಲಿಸುತ್ತಿದ್ದ ಪಿಕಪ್ ವಾಹನದಿಂದ ದನವೊಂದು ಬಿದ್ದು ಗಾಯಗೊಂಡ ಘಟನೆ ವೀರಕಂಬದ ಮೈರಾ ಎಂಬಲ್ಲಿ ನಡೆದಿದೆ. ದನ ಬಿದ್ದ ಕೂಡಲೆ ಪಿಕಪ್ ವಾಹನವನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಗೋವನ್ನು ಅಕ್ರಮವಾಗಿ ಸಾಗಾಟ ಮಾಡಿರಬಹುದು ಎಂದು ಅಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ.
ನಾಲ್ಕು ಕಾಲೇಜುಗಳಿಗೆ ಅನುದಾನಕ್ಕೆ ಶಾಸಕ ಅಶೋಕ್ ರೈ ಮನವಿ- ನ್ಯೂಸ್ ಫೋಕಸ್
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಲ್ಕು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ದಿಗೆ ಅನುದಾನಕ್ಕಾಗಿ ಶಾಸಕ ಅಶೋಕ್ ರೈ ಅವರು ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ…
ಬಾಂಬ್ ಬೆದರಿಕೆ ಕರೆ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ; ಇದು ಹುಸಿ ಬಾಂಬ್ ಕರೆ ಎಂದು ಪೊಲೀಸರ ಸ್ಪಷ್ಟನೆ- ನ್ಯೂಸ್ ಫೋಕಸ್
ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಪಡೆಗೆ ಹುಸಿ ಬಾಂಬ್ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ ಕೈಗೊಳ್ಳಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಬುಧವಾರ ರಾತ್ರಿ ಭಯೋತ್ಪಾದಕನ…
ಕುಂಭದ್ರೋಣ ಮಳೆಯಿಂದ ಸಂತ್ರಸ್ತರಾದವರಿಗೆ ಕಾಳಜಿ ಕೇಂದ್ರ ತೆರೆಯಲು ಆಡಳಿತ ವ್ಯವಸ್ಥೆಗೆ ಇನ್ನೂ ಯಾಕೆ ಸಾಧ್ಯವಾಗಲಿಲ್ಲ – ಸಂಜೀವ ಮಠoದೂರ್
ಪುತ್ತೂರು: ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ,ಭ್ರಷ್ಟತೆ ಹಾಗೂ ಜನ ವಿರೋಧಿ ನೀತಿ ವಿರೋಧಿಸಿ ದ.ಕ. ಜಿಲ್ಲೆಯ 223 ಹಾಗೂ ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯಿತಿ, ನಗರ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಎದುರು ಏಕಕಾಲದಲ್ಲಿ ಭಾರತೀಯ ಜನತಾ ಪಾರ್ಟಿ…
ಬಂಟ್ವಾಳ: ಗಂಡ -ಹೆಂಡತಿ ಜಗಳ, ಹೆಂಡತಿಯನ್ನು ಕೊಂದು ಗಂಡ ಆತ್ಮಹತ್ಯೆ – ನ್ಯೂಸ್ ಫೋಕಸ್
ಬಂಟ್ವಾಳ : ಹೆಂಡತಿಯನ್ನು ಕೊಂದು ಗಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ ನಡೆದಿದೆ. ಮೃತ ದಂಪತಿಗಳನ್ನು ತಿಮ್ಮಪ್ಪ ರಾಮ ಮೂಲ್ಯ (52) ಮತ್ತು ಜಯಂತಿ (45) ಎಂದು ಗುರುತಿಸಲಾಗಿದೆ.ಇಂದು ಬೆಳಗ್ಗೆ ಪತಿ ತಿಮ್ಮಪ್ಪ ರಾಮ…
ಸೋಮೇಶ್ವರ ಕಡಲ ಕಿನಾರೆಯಲ್ಲಿ ಜೂ.21ರಂದು ಬೃಹತ್ ಯೋಗಾಭ್ಯಾಸ: ಸಂಸದ ಕ್ಯಾ. ಚೌಟ- ನ್ಯೂಸ್ ಫೋಕಸ್
ಮಂಗಳೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಈ ಬಾರಿ ಸೋಮೇಶ್ವರ ಕಡಲ ತೀರದಲ್ಲಿ ’ಯೋಗ ವಿತ್ ಯೋಧ ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ. ದಕ್ಷಿಣ ಕನ್ನಡದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ…
ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಇರುವ ಗುಂಡಿಗೆ ಬಿದ್ದ ಕಾರು – ನ್ಯೂಸ್ ಫೋಕಸ್
ಪುತ್ತೂರು : ನೆಹರುನಗರ ದಿಂದ ಬನ್ನೂರಿಗೆ ಸಂಪರ್ಕಿಸುವ ರಸ್ತೆಯಲ್ಲಿ ಸಂಚರಿಸುವ ವೇಳೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಲ್ಕ್ಸ್ವಾಗನ್ ಕಾರು ರಸ್ತೆ ಬದಿ ಇರುವ ಹೊಂಡಕ್ಕೆ ಬಿದ್ದಿದೆ. ಕಾರಿನ ಮುಂಭಾಗ ಸಂಪೂರ್ಣ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರು – ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತಿದ್ದ ಹೆಡ್ ಕಾನ್ಸ್ಟೇಬಲ್ ರಶೀದ್ ವರ್ಗಾವಣೆ – ನ್ಯೂಸ್ ಫೋಕಸ್
ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪರೋಕ್ಷವಾಗಿ ನೆರವಾಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದ ಬಜ್ಪೆ ಠಾಣಾ ಹೆಡ್ ಕಾನ್ಸ್ಟೇಬಲ್ ರಶೀದ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಕರಾವಳಿಯಲ್ಲಿ ಇತ್ತೀಚಿನ ಕೋಮು ಸೌಹಾರ್ದತೆಗೆ ದಕ್ಕೆ ವಿಚಾರವನ್ನು ಗಂಭೀರವಾಗಿ…
ನೂತನ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರಿಗೆ ಅಧಿಕಾರ ಹಸ್ತಾಂತರಿಸಿದ ನಿಕಟಪೂರ್ವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ – ನ್ಯೂಸ್ ಫೋಕಸ್
ದಕ್ಷಣ ಕನ್ನಡ ನೂತನ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ರವರು ಬುಧವಾರ ನಿಕಟಪೂರ್ವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಉಪ್ಪಿನಂಗಡಿ : ಕುಮಾರಧಾರ ನದಿ ದಡದಲ್ಲಿ ಮೊಸಳೆ ಪ್ರತ್ಯಕ್ಷ – ನ್ಯೂಸ್ ಫೋಕಸ್
ಉಪ್ಪಿನಂಗಡಿ: ನೆಕ್ಕಿಲಾಡಿಯ ಕುಮಾರಧಾರ ನದಿ ದಡದಲ್ಲಿ ಮೊಸಳೆಯೊಂದು ಪತ್ತೆಯಾಗಿದೆ. ಮೊಸಳೆ ನೋಡಲು ಹೋದ ಜನರನ್ನು ಕಂಡು ಮೊಸಳೆಯು ತಕ್ಷಣ ನದಿ ನೀರಿಗೆ ಇಳಿದಿದೆ. ಈ ಘಟನೆ ಜೂ.18ರಂದು ಸಂಜೆ ನಡೆದಿದೆ. ಇದರಿಂದಾಗಿ ನೆಕ್ಕಿಲಾಡಿಯ ಆಸು ಪಾಸಿನ ಜನರಲ್ಲಿ ಭೀತಿ ಉಂಟಾಗಿದೆ.
ಉಡುಪಿ: ಖಾಸಿಗಿ ಬಸ್ ಚಾಲಕನ ಹುಚ್ಚಾಟ ವಿಡಿಯೋ ವೈರಲ್ ಬೆನ್ನಲ್ಲೇ, ಬಸ್ ಚಾಲಕನ ಬಂಧನ – ನ್ಯೂಸ್ ಫೋಕಸ್
ಉಡುಪಿ : ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ಬಳಿ ಜೂ.17ರಂದು ಬಸ್ಸನ್ನು ಸಾರ್ವಜನಿಕರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದ ಆರೋಪದಲ್ಲಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಬಸ್ ಚಾಲಕ ದೇವರಾಜ್. ಈತ ಬಸ್ಸನ್ನು ಅತೀ ವೇಗವಾಗಿ ಚಲಾಯಿಸಿ ಏಕಏಕಿ…
ಕಡಬ : ನಿವೃತ್ತ ಸೈನಿಕ ಹೃದಯಘಾತದಿಂದ ನಿಧನ – ನ್ಯೂಸ್ ಫೋಕಸ್
ಕಡಬ: ಒಂದು. ವರ್ಷದ ಹಿಂದೆ ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿದ್ದ ಸೈನಿಕ ಹೃದಯಘಾತದಿಂದ ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ.
ವಿಟ್ಲ : ಬೈಕ್ ಸ್ಕಿಡ್, ಇಬ್ಬರ ಸ್ಥಿತಿ ಗಂಭೀರ – ನ್ಯೂಸ್ ಫೋಕಸ್
ವಿಟ್ಲ : ಬೈಕ್ ಸ್ಕಿಡ್ ಆಗಿ ಇಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ವಿಟ್ಲ ದ ಚಂದಳಿಕೆ ಎಂಬಲ್ಲಿ ನಡೆದಿದೆ. ಗಾಯಳುಗಳನ್ನು ನಾಗೇಶ್ ಮತ್ತು ಹರ್ಷ ಎಂದು ತಿಳಿದುಬಂದಿದೆ. ಸದ್ಯ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು…
ಮಳೆಹಾನಿಯಿಂದ ನಷ್ಟಕ್ಕೊಳಗಾದವರಿಗೆ ಸರಕಾರದಿಂದ ಪರಿಹಾರದ ಮೊತ್ತ ವಿತರಣೆ- ನ್ಯೂಸ್ ಫೋಕಸ್
ಪುತ್ತೂರು:ಪೃಕೃತಿ ವಿಕೋಪದಿಂದ ಹಾನಿಗೊಳಗಾದ ಪಕ್ಕಾಮನೆ, ಕಚ್ಚಾಮನೆ, ಭಾಗಶ: ಹಾನಿ, ಪೂರ್ಣ ಹಾನಿ, ತೋಟ, ಬೆಳೆ, ಕೃಷಿ ಹಾನಿಗೊಳಗಾದ ಫಲಾನುಭವಿಗಳಿಗೆ ಕರ್ನಾಟಕ ಸರಕಾರದಿಂದ ಪರಿಹಾರ ಮೊತ್ತದ ಮೊದಲ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಪರಿಹಾರ ಪಡೆದುಕೊಂಡವರ ಪಟ್ಟಿ ಸರಕಾರದಿಂದ ೬೫೦೦…
ಆರ್ಎಸ್ಎಸ್ ಮತ್ತು ಬಜರಂಗದಳ ವಿರುದ್ಧ ಹೇಳಿಕೆ, ಸಿಎಂ ಸಿದ್ದರಾಮಯ್ಯ ಗೆ ಕೋರ್ಟ್ ನೋಟಿಸ್- ನ್ಯೂಸ್ ಫೋಕಸ್
ಬೆಂಗಳೂರು: ಆರ್.ಎಸ್.ಎಸ್., ಬಜರಂಗದಳ ವಿರುದ್ಧ ಸಿಎಂ ಸಿದ್ಧರಾಮಯ್ಯ ಹೇಳಿಕೆ ನೀಡಿದ್ದು.ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.ವಕೀಲ ಕಿರಣ್ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ 42ನೇ ಎಸಿಜೆಎಂ ನ್ಯಾಯಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನಸಾಮಾನ್ಯರ ಮೇಲೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯತೆ ಹಾಗೂ ದುರಾಡಳಿತದ ವಿರುದ್ಧ ಪ್ರತಿಭಟನೆಯ ಪೂರ್ವಭಾವಿ ಸಭೆ -ನ್ಯೂಸ್ ಫೋಕಸ್
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನಸಾಮಾನ್ಯರ ಮೇಲೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯತೆ ಹಾಗೂ ದುರಾಡಳಿತದ ವಿರುದ್ಧ ಜೂನ್ 23 ರಂದು ಬಿಜೆಪಿ ನೇತೃತ್ವದಲ್ಲಿ ವಿವಿಧ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಯಲಿರುವ ಪ್ರತಿಭಟನೆಯ ಪೂರ್ವಭಾವಿ ಸಭೆಯನ್ನು ಇಂದು, ಶಾಸಕರಾದ ಡಾ.…
ಪುತ್ತೂರು: ಕಾರು ಮತ್ತು ಬೈಕ್ ಡಿಕ್ಕಿ
ಪುತ್ತೂರು: ಕಾರು ಮತ್ತು ಬೈಕ್ ಡಿಕ್ಕಿಯಾದ ಘಟನೆ ಪುತ್ತೂರಿನ ನೆಹರುನಗರದಲ್ಲಿ ನಡೆದಿದೆ. ಈ ಘಟನೆಯಿಂದ ಬೈಕ್ ಸವಾರ ಮುರ ನಿವಾಸಿ ತನ್ಸೀರ್ ಎಂಬತನಿಗೆ ಗಂಭೀರ ಗಾಯಗಳಾಗಿದೆ. ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಇನ್ನಷ್ಟು ಮಾಹಿತಿ ತಿಳಿಯಬೇಕಾಗಿದೆ.
ಪುತ್ತೂರು – ಕೆದಂಬಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುನಂದಾ ರೈ ನಿಧನ -. ನ್ಯೂಸ್ ಫೋಕಸ್
ಪುತ್ತೂರು : ಕೆದಂಬಾಡಿ ಗ್ರಾಮಪಂಚಾಯತ್ ನ ಕಾರ್ಯದರ್ಶಿ ಬೆಳ್ಳಾರೆ ನಿವಾಸಿ ಸುನಂದಾ ರೈ ಯವರು ಅಲ್ಪಕಾಲದ ಅಸೌಖ್ಯದಿಂದ ಜೂನ್ 18 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧಾನರಾಗಿದ್ದಾರೆ.
ಸುಳ್ಯ ಅಪಘಾತಕ್ಕೊಳಗಾದ ಗೋವಿಗೆ ಬಜರಂಗದಳ ಸುಳ್ಯ ಘಟಕದಿಂದ ಸಂಪ್ರದಾಯ ಬದ್ಧ ಕಾರ್ಯ – ನ್ಯೂಸ್ ಫೋಕಸ್
ಸುಳ್ಯ: ನಾಗಪಟ್ಟಣ ದೇವಸ್ಥಾನದ ಬಳಿ ಜೂನ್ 9 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗೋ, ಚಿಕಿತ್ಸೆ ಫಲಕಾರಿಯಾಗದೇ 17 ರಂದು ಮೃತ ಪಟ್ಟಿರುತ್ತದೆ. ಅಪಘಾತದ ಪರಿಣಾಮವಾಗಿ ಬೆನ್ನುಮೂಳೆಗೆ ಗಂಭೀರ ಗಾಯವಾಗಿತ್ತು. ಗೋಮಾತೆಯನ್ನು ಸುಳ್ಯ ನಗರ ಪಂಚಾಯತ್‌ನ ದಪನ ಭೂಮಿಯಲ್ಲಿ…
ರಾಜ್ಯ ಸರ್ಕಾರದಿಂದ 17 ಮಂದಿ ತಹಶೀಲ್ದಾರ್ ಗಳ ವರ್ಗಾವಣೆ – ನ್ಯೂಸ್
ರಾಜ್ಯ ಸರ್ಕಾರವು ಕ೦ದಾಯ ಇಲಾಖೆಯ 17 ಮಂದಿ ತಹಶೀಲ್ದಾರ್ಗಳನ್ನು ವರ್ಗಾವಣೆ ಮಾಡುವ ಆದೇಶವನ್ನು ಬಿಡುಗಡೆ ಮಾಡಿದೆ. ಈ ನಿರ್ಧಾರವು ಸಾರ್ವಜನಿಕ ಹಿತ ಮತ್ತು ಆಡಳಿತಾತ್ಮಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗಿದೆ. ವರ್ಗಾವಣೆಗಳು ತಕ್ಷಣ ಜಾರಿಗೆ ಬರುವ೦ತೆ ಸರ್ಕಾರದಿಂದ ಸ್ಪಷ್ಟ ಸೂಚನೆ ಹೊರಡಿಸಿದೆ.
ಕೇರಳದ ಕೊಟ್ಟಿಯೂರ್ ಕ್ಷೇತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ- ನ್ಯೂಸ್ ಫೋಕಸ್
ತಿರುವನಂತಪುರಂ: ದಕ್ಷಿಣ ಭಾರತದ ಸುಪ್ರಸಿದ್ಧ ದೇವಸ್ಥಾನ ಕೇರಳ ಕೊಟ್ಟಿಯೂರ್ ಕ್ಷೇತ್ರಕ್ಕೆ ನಟ ದರ್ಶನ್ ಭೇಟಿ ನೀಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಮತ್ತು ತನ್ನಸ್ನೇಹಿತರೊಂದಿಗೆ ಕೇರಳದ ಕೊಟ್ಟಿಯೂರ್‌ನಲ್ಲಿರುವ ಶಿವನ ದೇವಸ್ಥಾನಕ್ಕೆ ದರ್ಶನ್ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ಕನ್ನಡದ ನಟ…
ಜೂನ್ 19ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಭೇಟಿ – ನ್ಯೂಸ್ ಫೋಕಸ್
ಗುರುವಾರ ರಾತ್ರಿ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ. ಜೂನ್ 20ದಂದು ಬಿಜಿಎಸ್ ಮೆಡಿಕಲ್ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು. ಆ ಬಳಿಕ ಕಾರ್ಯಕ್ರಮ ಮುಗಿಸಿ ಶುಕ್ರುವಾರ ಮಧ್ಯಾಹ್ನ ದೆಹಲಿಗೆ ವಾಪಸ್ ಆಗಲಿದ್ದಾರೆ.
ಮಂಗಳೂರು ಮಳೆಯಿಂದಾಗಿ ಹಾನಿ ಉಂಟಾದ ಪ್ರದೇಶಕ್ಕೆ ಶಾಸಕ ಭರತ್ ಶೆಟ್ಟಿ ಭೇಟಿ – ನ್ಯೂಸ್ ಫೋಕಸ್
ಮಂಗಳೂರು-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಮಸ್ಯೆ ಉಂಟಾದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೀರುಮಾರ್ಗ ಪಂಚಾಯತ್ ಗೆ ಒಳಪಟ್ಟ ಸರಿಪಲ್ಲ ಭಾಗದ ಪೊಂಪೈನಗರದ 2 ನೇ ರಸ್ತೆ ಸಮೀಪದ ಜನವಸತಿ ಪ್ರದೇಶಗಳಿಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ…
ಉಡುಪಿ: ಖಾಸಗಿ ಬಸ್ ಚಾಲಕನ ಹುಚ್ಚಾಟ – ಏಕಾಏಕಿ ಬ್ರೇಕ್ ಹಾಕಿ ಸುತ್ತಿದ ಬಸ್ – ಬಸ್ ನೊಳಗೆ ಕುಳಿತ್ತಿದ್ದ ಪ್ರಯಾಣಿಕರು ಗಲಿಬಿಲಿ -ನ್ಯೂಸ್ ಫೋಕಸ್
ಉಡುಪಿ : ನಗರದಲ್ಲಿ ಖಾಸಗಿ ಬಸ್‌ಗಳ ಅತಿವೇಗ ಚಾಲನೆಗೆ ಮತ್ತೊಂದು ಘಟನೆ ನಡೆದಿದೆ . ಕುಂದಾಪುರದಿಂದ ಉಡುಪಿಗೆ ಬರುತ್ತಿದ್ದ ಖಾಸಗಿ ಬಸ್ ಚಾಲಕ , ನಗರದ ಬನ್ನಂಜೆ ಬಳಿ ಏಕಾಏಕಿ ಬ್ರೇಕ್ ಹಾಕಿ ಬಸ್ಸು ತಿರುಗಿ ಪ್ರಯಾಣಿಕರಲ್ಲಿ ತೀವ್ರ ಭೀತಿ ಹುಟ್ಟಿಸಿದ…
ಬೆಂಗಳೂರಿನ ಹೊಸ ಹಳದಿ ಮೆಟ್ರೋ ಶೀಘ್ರವೇ ಸಂಚಾರ ಆರಂಭ – ನ್ಯೂಸ್ ಫೋಕಸ್
ಬೆಂಗಳೂರು ಮೆಟ್ರೋದ ಹಳದಿ ಮಾರ್ಗವು ಜೂನ್ 2025ರಲ್ಲಿ ಸಂಚಾರ ಆರಂಭವಾಗಲಿದೆ . ಆರಂಭದಲ್ಲಿ ಕೆಲವು ನಿಲ್ದಾಣಗಳಲ್ಲಿ ಸೀಮಿತ ಸೇವೆ ಲಭ್ಯವಿರುತ್ತದೆ. ಪೂರ್ಣ ಪ್ರಮಾಣದ ಸೇವೆ ಆಗಸ್ಟ್ ಅಥವಾ ಸೆಪ್ಟೆಂಬರ್ 2025ರಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಬಹುನಿರೀಕ್ಷಿತ ಹಳದಿ ಮೆಟ್ರೋ ಮಾರ್ಗ ಕೊನೆಗೂ ಸಾರ್ವಜನಿಕ…
ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್ ವಿ ನೇಮಕ -ನ್ಯೂಸ್ ಫೋಕಸ್
ಮಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರವು ಆಡಳಿತಾತ್ಮಕ ಬದಲಾವಣೆ ಮಾಡಿದ್ದು, ಮಂಗಳವಾರ (ಜೂ.17) ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಇದರಲ್ಲಿ ಐವರು ಜಿಲ್ಲಾಧಿಕಾರಿಗಳು ಸೇರಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಗಿಲನ್ ಅವರನ್ನು ವರ್ಗಾವಣೆ ಮಾಡಿದ್ದು, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ…
ಕಾರು ಪಲ್ಟಿಯಾಗಿ ವೈದ್ಯ ಮೃತ್ಯು – ನ್ಯೂಸ್ ಫೋಕಸ್
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ನಂತೂರು-ಪಂಪ್‌ವೆಲ್ ನಡುವೆ ಕಾರ್ ಪಲ್ಟಿಯಾಗಿ ಯುವ ವೈದ್ಯರೊಬ್ಬರು ಮೃತಪಟ್ಟ ಘಟನೆ ಜೂ.16ರ ಸೋಮವಾರ ತಡರಾತ್ರಿ ನಡೆದಿದೆ. ಮೃತ ಪಟ್ಟವರು ದೇರಳಕಟ್ಟೆ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಅಲ್ಲಿಯೇ ಫಿಸಿಯೋಥೆರಪಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ|…
ಮಂಗಳೂರು ವಿಮಾನ ನಿಲ್ದಾಣದಿಂದ ಹರಿಯುತ್ತಿರುವ ಮಳೆ ನೀರಿನಿಂದಾಗಿ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ಡಾ. ವೈ ಭರತ್ ಶೆಟ್ಟಿ- ನ್ಯೂಸ್ ಫೋಕಸ್
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನಲ್ಲಿರುವ ಪ್ರದೇಶವಾದ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತೀವ್ರ ಮಳೆಯಿಂದಾಗಿ ಹಾಗೂ ವಿಮಾನ ನಿಲ್ದಾಣದಿಂದ ಹರಿಯುತ್ತಿರುವ ಮಳೆ ನೀರಿನಿಂದಾಗಿ ಸಮಸ್ಯೆ ಉಂಟಾಗಿರುವ ವಸತಿ ಪ್ರದೇಶಗಳಿಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ…
ಪುತ್ತೂರು ಅಂಗಡಿಯೊಂದರಲ್ಲಿ ಬೆಂಕಿ ಅವಘಡ, ಅಗ್ನಿಶಾಮಾಕ ದಳದಿಂದ ಬೆಂಕಿ ನಂದಿಸುವ ಕಾರ್ಯ – ನ್ಯೂಸ್ ಫೋಕಸ್
ಪುತ್ತೂರು : ದರ್ಬೆ ವೃತ್ತದ ಬಳಿ ಇರುವ ಅಂಗಡಿಯೊಂದಕ್ಕೆ ಬೆಂಕಿ ತಗುಲಿರುವ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಾಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿದ್ದು ಹೆಚ್ಚಿನ ಮಾಹಿತಿ ಇನ್ನು ತಿಳಿಯಬೇಕಾಗಿದೆ.
ಡಿ.ಕೆ ಶಿವಕುಮಾರ್ ಸೈಕಲ್ ಸವಾರಿ- ವಿಧಾನಸೌದ ಮೆಟ್ಟಿಲಲ್ಲೇ ಬಿದ್ದ ಡಿ ಸಿ ಎಂ- ನ್ಯೂಸ್. ಫೋಕಸ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಳ್ಳಲಾದ ಸೈಕಲ್ ಸವಾರಿ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೈಕಲ್‌ನಿಂದ ಬಿದ್ದಿರುವ ಪ್ರಸಂಗ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೆಂಗಳೂರಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಾಲಿನ್ಯ…
ಬೆಳಕು ಸೇವಾ ಟ್ರಸ್ಟ್ ಪುತ್ತೂರು ವತಿಯಿಂದ ಕೈಕಾರ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ- ನ್ಯೂಸ್ ಫೋಕಸ್
ಪುತ್ತೂರು : ದ.ಕ. ಜಿ. ಪo.ಹಿ.ಪ್ರಾ.ಶಾಲೆ ಕೈಕಾರದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಬೆಳಕು ಸೇವಾ ಟ್ರಸ್ಟ್ ಪುತ್ತೂರು ವತಿಯಿಂದ ಕೈಕಾರ ಶಾಲೆಯಲ್ಲಿ ನೆರವೇರಿತು.ಶಾಲಾ ಮಕ್ಕಳಿಗೆ ಮುಖ್ಯ ಅತಿಥಿಗಳಾದ ಒಳಮೊಗ್ರು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ ಆರ್…
ಉಡುಪಿ: ಮಳೆ ನೀರಿನಲ್ಲಿ ಹುಚ್ಚಾಟ ಬೈಕ್ ಸಮೇತ ನೀರು ಪಾಲಾದ ಇಬ್ಬರು ಯುವಕರು- ನ್ಯೂಸ್ ಫೋಕಸ್
ಬೈಂದೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಾನ್ಸೂನ್ ಅಬ್ಬರಿಸುತ್ತಿದ್ದು, ಕಳೆದೊಂದು ವಾರದಿಂದ ಜೋರು ಮಳೆಯಾಗುತ್ತಿದೆ. ಪರಿಣಾಮ ಹಳ್ಳ ಕೊಳ್ಳಗಳು, ಝರಿ, ನದಿಗಳು ಮೈದುಂಬಿ ಹರಿಯುತ್ತಿವೆ. ಮಳೆಯಾರ್ಭಟಕ್ಕೆ ಹಳ್ಳಗಳನ್ನು ತಮ್ಮ ವ್ಯಾಪ್ತಿ ಮೀರಿ ಹರಿಯುತ್ತಿದ್ದು, ಹಲವೆಡೆ ರಸ್ತೆ ಮೇಲೆ ನೀರು ಹರಿಯುತ್ತಿದೆ. ಹಲವೆಡೆ ನೀರಿನ…
ಶ್ರೀರಾಮ ದೇವಸ್ಥಾನ ಮುಚ್ಚೂರು ಕಾನ ಇದರ ಜೀರ್ಣೋದ್ಧಾರದ ಪ್ರಯುಕ್ತ ಸಂಕಲ್ಪ ಸಭೆ – ನ್ಯೂಸ್ ಫೋಕಸ್
ಶ್ರೀರಾಮ ದೇವಸ್ಥಾನ ಮುಚ್ಚೂರು ಕಾನ ಇದರ ಜೀರ್ಣೋದ್ಧಾರದ ಪ್ರಯುಕ್ತ ಮುಚ್ಚೂರು ಕಾನ ಗ್ರಾಮಸ್ಥರ ಉಪಸ್ಥಿತಿಯಲ್ಲಿ ನಡೆದ ಸಂಕಲ್ಪ ಸಭೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಪಾಲ್ಗೊಂಡರು. ಮುಚ್ಚೂರು ಕಾನ ಭಾಗದಲ್ಲಿ ಸದಾ ಹಿಂದುತ್ವ ಹಾಗೂ…
ಅಜೆಕಾರು ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣ,ಪತ್ನಿ ಪ್ರತಿಮಾಗೆ ಹೈಕೋರ್ಟ್ ಜಾಮೀನು ಮಂಜೂರು – ನ್ಯೂಸ್ ಫೋಕಸ್
ಕಾರ್ಕಳ : ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ನಡೆದಿದ್ದ ಬಾಲಕೃಷ್ಣ ಪೂಜಾರಿ (44) ಅವರ ಸಂಚುಪೂರ್ವಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಪತ್ನಿ ಪ್ರತಿಮಾ (36) ಅವರಿಗೆ ಕರ್ನಾಟಕ ರಾಜ್ಯ ಹೈಕೋರ್ಟ್ ಶರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಮೃತ ಬಾಲಕೃಷ್ಣ…
ಆಗಸ್ಟ್ 1ರಿಂದ ಗೂಗಲ್ ಪೇ, ಫೋನ್ ಪೇ ಯದ್ವಾತದ್ವ ಬಳಕೆಗೆ ಅವಕಾಶವಿಲ್ಲ! ಹೊಸ ನಿಯಮ- ನ್ಯೂಸ್ ಫೋಕಸ್
ನೋಂದಾಯಿತ ಬ್ಯಾಂಕ್‌ಗಳು ಹಾಗೂ ಪೇಮೆಂಟ್ ಆ್ಯಪ್‌ಗಳು (Google Pay, PhonePe, Paytm) ಉಪಯೋಗಿಸುವವರಿಗೆ 2024 ಆಗಸ್ಟ್ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ತಿಳಿಸಿದೆ. ಈ ಮಾರ್ಗಸೂಚಿ ಪ್ರಕಾರ API request…
ಇಂದು ಸುಳ್ಳ್ಯ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ – ನ್ಯೂಸ್ ಫೋಕಸ್
ಸುಳ್ಯ: ಭಾರೀ ಮಳೆ ಮುಂದುವರಿದಿರುವ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢ ಶಾಲೆ, ಸರಕಾರಿ ಅನುದಾನಿತ ಮತ್ತು ಖಾಸಗೀ ವಿದ್ಯಾ ಸಂಸ್ಥೆಗಳಿಗೆ, ಜೂ.17ರಂದು ಮಂಗಳವಾರ ಸುಳ್ಯ ತಾಲೂಕು ಆಡಳಿತ ರಜೆ ಘೋಷಿಸಿದೆ.
ಮಂಗಳೂರು: ತಂದೆ ಸೇದಿ ಎಸೆದಿದ್ದ ಬೀಡಿ ನುಂಗಿದ ಮಗು ಮೃತ್ಯು- ನ್ಯೂಸ್ ಫೋಕಸ್
ಮಂಗಳೂರು: ಮನೆಯಲ್ಲಿ ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡಿದ್ದ 10 ತಿಂಗಳ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಅಡ್ಯಾರ್‌ನಲ್ಲಿ ವಾಸವಿದ್ದ ಬಿಹಾರ ಮೂಲದ ದಂಪತಿಯ ಮಗು ಅನೀಶ್ ಕುಮಾರ್ ಮೃತ ಮಗು. ಶನಿವಾರ ಮಧ್ಯಾಹ್ನ 1.30ರ ವೇಳೆಗೆ…
ಕಾಂತಾರ ಶೂಟಿಂಗ್ ವೇಳೆ ಶಿಪ್ ಪಲ್ಟಿ: ಹೊಂಬಾಳೆ ಫಿಲ್ಮ್ಸ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸ್ಪಷ್ಟನೆ- ನ್ಯೂಸ್ ಫೋಕಸ್
ಶಿವಮೊಗ್ಗ: ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನ ಮಾಡುತ್ತಿರುವ ʼಕಾಂತಾರ-1ʼ ಚಿತ್ರದ ಶೂಟಿಂಗ್ ವೇಳೆ ಜಲಾಶಯದಲ್ಲಿ ಶಿಪ್ ಮಗುಚಿದ ಘಟನೆ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ್ ಸ್ಪಷ್ಟನೆ ನೀಡಿದ್ದಾರೆ. “ಮಾಣಿ ಹಿನ್ನೀರಿನಲ್ಲಿʼಕಾಂತಾರ ಚಾಪ್ಟರ್ 1ʼ ಚಿತ್ರೀಕರಣ ನಡೆಯುತ್ತಿದೆ. ಬ್ಯಾಕ್…
ಬಂಟ್ವಾಳ : ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ನೀರು ನಿಂತ ಹಳ್ಳದಲ್ಲಿ ಪತ್ತೆ – ನ್ಯೂಸ್ ಫೋಕಸ್
ಬಂಟ್ವಾಳ : ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ನೀರು ನಿಂತ ಹಳ್ಳದಲ್ಲಿ ಪತ್ತೆಯಾಗಿದೆ. ಮೃತನನ್ನು ಬಂಟ್ವಾಳದ ಬೆಂಜನಪದವು ನಿವಾಸಿ ಸಾಗರ್ (28) ಎಂದು ತಿಳಿದಿದೆ. ಬಂಟ್ವಾಳದ ಬೆಂಜನಪದವು ನಿವಾಸಿ ಸಾಗರ್ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು ಸಾಗರ್‌ಗಾಗಿ ಮನೆಮಂದಿ ಹಾಗೂ…
ದ.ಕ. ಯುವಜನತೆಯ ಪ್ರತಿಭೆ, ವೃತ್ತಿಜೀವನ, ಉದ್ಯಮಶೀಲತೆ ಉತ್ತೇಜನಕ್ಕಾಗಿ ‘ಯುವ್ವಿಕಾಸ’ ಸಂಕಲ್ಪ: ಸಂಸದ ಕ್ಯಾ. ಚೌಟ- ನ್ಯೂಸ್ ಫೋಕಸ್
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಮುದಾಯಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವ, ಅವರ ಯೋಚನೆ- ಕನಸುಗಳಿಗೆ ಶಕ್ತಿ ಕೊಡುವ ಹಾಗೂ ಸಾಧ್ಯತೆಗಳನ್ನು ಅನ್ವೇಷಿಸುವ ಗುರಿಯೇ ‘ಯುವ್ವಿಕಾಸ್’ ಸಂಕಲ್ಪ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಸುಳ್ಯದ ತಾಲೂಕು ಪಂಚಾಯತ್‌ನಲ್ಲಿ ಇಂದು…
17 ಬಡ ವಿದ್ಯಾರ್ಥಿಗಳಿಗೆ ಶಾಸಕ ಅಶೋಕ್ ರೈ ಯವರಿಂದ ನೋಟ್ ಪುಸ್ತಕ ವಿತರಣೆ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ಆರ್ಥಿಕ ಸಂಕಷ್ಟದಲ್ಲಿರುವ ಒಟ್ಟು 17 ಬಡ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕವನ್ನು ಶಾಸಕ ಅಶೋಕ್ ರೈ ಅವರು ನೀಡಿದ್ದಾರೆ.ತೀರಾ ಬಡತನದಲ್ಲಿರುವ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ನಿಟ್ಟಿನಲ್ಲಿ ಶಾಸಕರು ತನ್ನ ಸ್ವಂತನಿಧಿಯಿಂದ ಪುಸ್ತಕವನ್ನು…
ಮಂಗಳೂರಿನ ಕೊಟ್ಟಾರ ಚೌಕಿ ಗೆ ಶಾಸಕ ಭರತ್ ಶೆಟ್ಟಿ ಭೇಟಿ, ಸ್ಥಳ ಪರಿಶೀಲನೆ – ನ್ಯೂಸ್ ಫೋಕಸ್
ಮಂಗಳೂರು: ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಕೊಟ್ಟಾರಚೌಕಿ ಪ್ರದೇಶಕ್ಕೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು. ಕೊಟ್ಟಾರಚೌಕಿ ಅತ್ಯಂತ ತಗ್ಗಾದ ಸ್ಥಳ, ಈ ಹಿಂದಿನ ಸ್ಥಿತಿಗತಿಯನ್ನು ನೋಡಿದಾಗ ಮಳೆಗಾಲದಲ್ಲಿ…
ಜೂನ್ 17ರಂದು ಈ ಪ್ರದೇಶಗಳಲ್ಲಿ ಕರೆಂಟ್ ಇಲ್ಲ – ನ್ಯೂಸ್ ಫೋಕಸ್
ಪುತ್ತೂರು: 110/33/11ಕೆವಿ ಮಾಡಾವು ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ.17 ರಂದು ಪೂರ್ವಾಹ್ನ 10:00 ರಿಂದ ಸಾಯಂಕಾಲ 3:00 ಗಂಟೆಯವರೆಗೆ 33ಕೆ.ವಿ ಮಾಡಾವು-ಬೆಳ್ಳಾರೆ, 33ಕೆವಿ ಮಾಡಾವು ಬೆಳ್ಳಾರೆ-ಗುತ್ತಿಗಾರು, 33ಕೆವಿ ಮಾಡಾವು-ಕಾವು ಮತ್ತು 33ಕೆವಿ ಮಾಡಾವು ಸುಳ್ಯ ವಿದ್ಯುತ್ ಮಾರ್ಗಗಳ…
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ, ರೆಡ್ ಅಲರ್ಟ್ ಘೋಷಣೆ -ನ್ಯೂಸ್ ಫೋಕಸ್
ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 17 ರಂದು ಬಿರುಗಾಳಿ ಭಾರೀ ಮಳೆ ಕುರಿತಂತೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಇಂದು ಜೂನ್ 17…
