ಟೀಮ್ ಇಂಡಿಯಾದ ಆಟಗಾರರು ಸಾಮಾನ್ಯವಾಗಿ ಬೇರೆ ಲೀಗ್‌ಗಳಲ್ಲಿ ಆಡುವುದು ಅಪರೂಪ. ಈಗ ಕೆಲವು ಲೀಗ್‌ಗಳಲ್ಲಿ ಭಾರತದ ಆಟಗಾರರು ಕಾಣಿಸಿಕೊಳ್ಳುತ್ತಿದ್ದಾರೆ. ಅದ್ರಲ್ಲೂ ಮಹಿಳಾ ಆಟಗಾರ್ತಿಯರು ಮಹಿಳಾ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಆಡಿದ್ದನ್ನು ನೀವು ನೋಡಿರಬಹುದು. ಈಗ ಇದೇ ಸಾಲಿಗೆ ಮತ್ತೊಂದು ಲೀಗ್‌ ಸೇರ್ಪಡೆ ಆಗಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಟಗಾರ್ತಿಯರು ಆಡುವುದನ್ನು ಕಾಣಬಹುದಾಗಿದೆ.

ಕರ್ನಾಟಕದ ಸ್ಟಾರ್‌ ಸ್ಪಿನ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್‌ ಸಹ ಮಹಿಳಾ ಕೆರೆಬಿಯನ್‌ ಲೀಗ್‌ನಲ್ಲಿ (ಡಬ್ಲ್ಯುಸಿಪಿಎಲ್‌) ಆಡಲಿದ್ದಾರೆ. ಇವರು ಕಳೆದ ಒಂದು ವರ್ಷಗಳಿಂದ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗಿದ್ದರು. ಶ್ರೇಯ್ಯಾಂಕ್ ಪಾಟೀಲ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಬಾರ್ಬಡೋಸ್ ರಾಯಲ್ಸ್ ಪರ ಆಡಲಿದ್ದಾರೆ. ಇವರು ಕಳೆದ ಆವೃತ್ತಿಯ ಡಬ್ಲ್ಯುಸಿಪಿಎಲ್‌ನಲ್ಲಿ ಆಡಿರಲಿಲ್ಲ. 2023ರಲ್ಲಿ ಗಯಾನಾ ವಾರಿಯರ್ಸ್ ತಂಡ ಫೈನಲ್‌ ತಲುಪಿರುವಲ್ಲಿ ಶ್ರೇಯಾಂಕ ಕೊಡುಗೆ ಅಪಾರ.

ಶ್ರೇಯಾಂಕಾ ಪಾಟೀಲ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2024ರಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು. ಇದಾದ ಬಳಿಕ ಇವರು ಭಾರತದ ಪರವೂ ಕೆಲವೇ ಪಂದ್ಯಗಳನ್ನು ಆಡಿದ್ದರು. ಗಾಯದ ಬಳಿಕ ಕಂಬ್ಯಾಕ್‌ ಮಾಡಲು ಕಾತುರಾಗಿರುವ ಶ್ರೇಯಾಂಕಾ, ಮಹಿಳಾ ಕೆರಿಬಿಯನ್‌ ಲೀಗ್‌ನಲ್ಲಿ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.