ಅಜೆಕಾರು : ರಸ್ತೆಯಲ್ಲಿ ಹೋಗುತ್ತಿದ್ದ ನಡೆದುಕೊಂಡು ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯನ್ನು ಮನೆಗೆ ಡ್ರಾಪ್ ಕೊಡುವುದಾಗಿ ಪುಸಲಾಯಿಸಿ ವಿವಾಹಿತ ವ್ಯಕ್ತಿಯೋರ್ವ ತನ್ನ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಕರೆದೊಯ್ಯುವ ಸಂದರ್ಭ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದಾಗ ಬೆದರಿದ ಬಾಲಕಿ ಬೈಕಿನಿಂದ ಜಿಗಿದು ಗಾಯಗೊಂಡ ಘಟನೆ ಅಜೆಕಾರಿನಲ್ಲಿ ನಡೆದಿದೆ.ಶಿರ್ಲಾಲು ಹಾಡಿಯಂಗಡಿ ಶಿವಬೆಟ್ಟು ನಿವಾಸಿ ಪ್ರಶಾಂತ ನಾಯಕ್ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಬಸ್ ಚಾಲಕ. ಅಜೆಕಾರು ಪೊಲೀಸರು ಆರೋಪಿಯನ್ನು ಬಂಧಿಸಿ ವಿರುದ್ಧ ಪೋಕೋ ಪ್ರಕರಣ ದಾಖಲಿಸಿದ್ದಾರೆ.

ಪ್ರಥಮ ಪಿಯು ಓದುತ್ತಿದ್ದ ಮನೆಗೆ ವಿದ್ಯಾರ್ಥಿನಿ ತನ್ನ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಜೆಕಾರು ಕುರ್ಸುಕಟ್ಟೆ ಎಂಬಲ್ಲಿ ಅಜೆಕಾರು ಪೇಟೆ ಕಡೆಯಿಂದ ಬಂದ ಪ್ರಶಾಂತ ನಾಯಕ್, ನನಗೆ ನಿನ್ನ ಮನೆಯವರ ಪರಿಚಯವಿದೆ. ನಿನಗೆ ಬೈಕಿನಲ್ಲಿ ಡ್ರಾಪ್ ಕೊಡುವುದಾಗಿ ಹೇಳಿ ಆಕೆಯನ್ನು ಪುಸಲಾಯಿಸಿದ್ದ ಬಾಲಕಿ ಆತನ ಮಾತು ನಂಬಿ ಬೈಕ್ ನಲ್ಲಿ ಕುಳಿತುಕೊಂಡಾಗ ಆರೋಪಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳನೀಡಲು ಯತ್ನಿಸಿದ್ದಾನೆ ಎನ್ನಲಾಗಿದ್ದು ಇದರಿಂದ ಹೆದರಿದ ಬಾಲಕಿ ಆತನಿಂದ ತಪ್ಪಿಸಿಕೊಳ್ಳಲು ಚಲಿಸುವ ಬೈಕಿನಿಂದ ಜಿಗಿದ ಪರಿಣಾಮ ಬಿದ್ದು ಗಾಯಗೊಂಡಿದ್ದಾಳೆ.

ಆಕೆ ಬೈಕಿನಿಂದ ಬಿದ್ದ ತತ್ ಕ್ಷಣವೇ ಆರೋಪಿ ಬೈಕ್ ಜತೆ ಪರಾರಿಯಾಗಿದ್ದು ಪೊಲೀಸರು ಸಿಸಿ ಕ್ಯಾಮರಾ, ಮೊಬೈಲ್ ಕರೆಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಆರೋಪಿ ಈ ಹಿಂದೆ ಖಾಸಗಿ ಬಸ್ಸು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು ವಿಪರೀತ ಕುಡಿತದ ಚಟ ಹೊಂದಿದ್ದ ಎನ್ನಲಾಗಿದೆ. ಬಾಲಕಿಯ ಹೆತ್ತವರು ದೂರು ನೀಡಿದ್ದಾರೆ.