ಸೋಮವಾರದಿಂದಲೇ ನಂದಿನಿ ಉತ್ಪನ್ನಗಳ ದರ ಇಳಿಕೆ; ಯಾವುದಕ್ಕೆ ಎಷ್ಟು ದರ? – ಇಲ್ಲಿದೆ ಪಟ್ಟಿ – ನ್ಯೂಸ್ ಫೋಕಸ್
ಬೆಂಗಳೂರು: ಕೆಎಂಎಫ್ ಗ್ರಾಹಕರಿಗೆ ನವರಾತ್ರಿ ಸಿಹಿಸುದ್ದಿ ಸಿಕ್ಕಿದೆ. ಸೋಮವಾರದಿಂದಲೇ ನಂದಿನಿ ಉತ್ಪನ್ನಗಳ ದರ ಇಳಿಕೆಯಾಗಲಿದ್ದು, ಉತ್ಪನ್ನಗಳ ಹೊಸ ದರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನೂತನ ಜಿಎಸ್ಟಿ ಇಳಿಕೆಯ ಹಿನ್ನಲೆಯಲ್ಲಿ ಕೆಲ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಜಿಎಸ್ಟಿ ದರ ಶೇ.12 ರಿಂದ 5…
ಪುತ್ತೂರು ಬಿಜೆಪಿ ವತಿಯಿಂದ ನರೇಂದ್ರ ಮೋದಿಜೀಯವರ ಹುಟ್ಟುಹಬ್ಬದ ಪ್ರಯುಕ್ತ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಮತ್ತು ಪ್ರಜ್ಞಾಶ್ರಮ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ – ನ್ಯೂಸ್ ಫೋಕಸ್
ಪುತ್ತೂರು : ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ದೇಶ, ವಿದೇಶದಿಂದ ವಿವಿಧ ರೀತಿಯಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಪುತ್ತೂರು ಬಿಜೆಪಿ ವಿಶೇಷ ರೀತಿಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆ ರೋಗಿಗಳಿಗೆ ಮತ್ತು ಬೀರಮಲೆ ಪ್ರಜ್ಞಾಶ್ರಮದ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ…
2010ರ ಬಳಿಕ ಮೊದಲ ಬಾರಿಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ – ಸೆ.1ರಿಂದ ಜಾರಿಗೆ – ನ್ಯೂಸ್ ಫೋಕಸ್
ಸುಬ್ರಹ್ಮಣ್ಯ (ಸೆ.20): ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಿವಿಧ ಸೇವೆಗಳ ದರಗಳಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಪರಿಷ್ಕೃತ ದರ ಸೆ.1ರಿಂದಲೇ ಜಾರಿಗೆ ಬಂದಿದೆ. ಸುಮಾರು 40 ಸೇವೆಗಳ ದರ ಹೆಚ್ಚಳಗೊಂಡು ಪರಿಷ್ಕರಣೆ ಆಗಿದೆ. ಈ ಹಿಂದೆ, 2010ರ ನವೆಂಬರ್ ನಲ್ಲಿ ಸೇವೆಗಳ ದರ…
ವರ್ಷದ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಮಾತುಕತೆ – ಸ್ಫೋಟಕ ವಿಡಿಯೋ ರಿಲೀಸ್ – ನ್ಯೂಸ್ ಫೋಕಸ್
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರೋಪಿ ಚಿನ್ನಯ್ಯ ಜೊತೆ ಮಹೇಶ್ಶೆಟ್ಟಿ ತಿಮರೋಡಿ ಭೇಟಿಯಾದ ವಿಡಿಯೋ ಬಹಿರಂಗಗೊಂಡಿದೆ. ತಿಮರೋಡಿ ಮನೆಯಲ್ಲಿ ವರ್ಷದ ಹಿಂದೆ ಭೇಟಿಯಾಗಿದ್ದ ವಿಡಿಯೋ ಇದಾಗಿದೆ. ತಿಮರೋಡಿ ಭೇಟಿ ವೇಳೆ ಹೆಣಗಳ ಹೂತ…
ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಾಸ್ಥಾನದ ಸಭಾ ಭವನದಲ್ಲಿ ದಿನಾಂಕ 28 ಆದಿತ್ಯವಾರ ಧರ್ಮಸ್ಥಳದಲ್ಲಿ ನಡೆಯುವ ಸತ್ಯದರ್ಶನ ಕಾರ್ಯಕ್ರಮದ ಪೂರ್ವಭಾವಿ – ನ್ಯೂಸ್ ಫೋಕಸ್
ಕಣಿಯೂರು,ಸೆಪ್ಟೆಂಬರ್ 18:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಣಿಯೂರು ವಲಯ ಹಾಗೂ ವಲಯದ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಭಜನಾ ಮಂಡಳಿ ಗಳ ಪದಾಧಿಕಾರಿಗಳು, ದೇವಸ್ಥಾನ, ದೈವಸ್ಥಾನ ಗಳ ಮುಖ್ಯಸ್ಥರು, ಸಹಕಾರಿ ಬ್ಯಾಂಕ್ ನ ಅಧ್ಯಕ್ಷರ ಸಮ್ಮುಖದಲ್ಲಿ ಕೊರಿಂಜಾ ಶ್ರೀ ಪಂಚಲಿಂಗೇಶ್ವರ…
ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ಗಾಲಿಕುರ್ಚಿ ಜಾಥಾ – ನ್ಯೂಸ್ ಫೋಕಸ್
ಸೇವಾಭಾರತಿ (ರಿ.), ಕನ್ಯಾಡಿ – ಸೇವಾಧಾಮ ಇದರ ನೇತೃತ್ವದಲ್ಲಿ, ರಾಷ್ಟ್ರೀಯ ಸೇವಾ ಯೋಜನೆ, ರೋಟರಿ ಕ್ಲಬ್ ದೇರಳಕಟ್ಟೆ, ರೋಟರಿ ಕ್ಲಬ್ ಮಂಗಳೂರು ಸಿಟಿ, ರೋಟರಿ ಕ್ಲಬ್ ಮಂಗಳೂರು ಡೌನ್ ಟೌನ್ ಮತ್ತು ರೋಟರಿ ಕ್ಲಬ್ ಮಂಗಳೂರು ಸೌತ್ ಇವುಗಳ ಸಹಭಾಗಿತ್ವದಲ್ಲಿ ವಿಶ್ವ…
ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ 75ನೇ ವರ್ಷದ ಜನ್ಮದಿನದ ಪ್ರಯುಕ್ತ ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ – ನ್ಯೂಸ್ ಫೋಕಸ್
ಉಜಿರೆ : ಸೆ 17 ಭಾರತೀಯ ಜನತಾ ಪಾರ್ಟಿ ಉಜಿರೆ ಮಹಾಶಕ್ತಿ ಕೇಂದ್ರ ವತಿಯಿಂದ ನೆಚ್ಚಿನ ವಿಶ್ವನಾಯಕ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ 75ನೇ ವರ್ಷದ ಜನ್ಮದಿನದ ಪ್ರಯುಕ್ತ ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ…
ಶಾಂತಿಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮಹಾಸಭೆ – ನ್ಯೂಸ್ ಫೋಕಸ್
ಶಾಂತಿಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮಹಾಸಭೆ ರೂ 153’556.21 ನಿವ್ವಳ ಲೀ ಗೇ 74 ಪೈಸೆ ಬೋನಸ್ ಶೇಕಡ 10 ಡಿವಿಡೆಂಟ್ಪುತ್ತೂರು ಶಾಂತಿಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆಯು ಸೆಪ್ಟೆಂಬರ್ 16ರಂದು ಸಂಘದ ಆವರಣದಲ್ಲಿ ನಡೆಯಿತು. ಈ…
ಬೆಳ್ತಂಗಡಿ: ಬಂಗ್ಲೆಗುಡ್ಡ 2ನೇ ದಿನದ ಎಸ್ಐಟಿ ಕಾರ್ಯಾಚರಣೆ ಮುಕ್ತಾಯ- 2 ತಲೆ ಬುರುಡೆ, ಮಾನವ ಅಸ್ಥಿಪಂಜರ ವಶಕ್ಕೆ – ನ್ಯೂಸ್ ಫೋಕಸ್
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ಎಸ್ಐಟಿ ನಡೆಸುತ್ತಿರುವ ಎರಡನೇ ದಿನದ ಕಾರ್ಯಾಚರಣೆ ಗುರುವಾರ ಸಂಜೆ ಮುಕ್ತಾಯಗೊಂಡಿದೆ. ಎಸ್ಐಟಿ ತಂಡ ಎರಡು ತಲೆ ಬುರುಡೆ ಹಾಗೂ ಮಾನವರ ಅಸ್ಥಿಪಂಜರ ವಶಪಡಿಸಿಕೊಂಡು ಕಾಡಿನಿಂದ ಮರಳಿದೆ. ಮೂರು ಗಂಟೆಗಳ ಕಾಲ ಬಂಗ್ಲೆಗುಡ್ಡೆಯಲ್ಲಿ ಎಸ್ಐಟಿ ಕಾರ್ಯಾಚರಣೆ ನಡೆಸಿದೆ.…
ಬಂಗ್ಲೆಗುಡ್ಡದಲ್ಲಿ ಸಿಕ್ಕ ಐದು ತಲೆ ಬುರುಡೆ, ಮೂಳೆಗಳು ಪುರುಷರದ್ದು – ಇಂದು ಎರಡನೇ ದಿನದ ಶೋಧ ಕಾರ್ಯ – ನ್ಯೂಸ್ ಫೋಕಸ್
ಧರ್ಮಸ್ಥಳ: ಧರ್ಮಸ್ಥಳದ ಬಂಗ್ಲೆಗುಡ್ಡ ರಹಸ್ಯ ಬೇಧಿಸಲು ಹೊರಟ ಎಸ್ಐಟಿ (SIT) ಇಂದು ಎರಡನೇ ದಿನದ ಶೋಧ ಕಾರ್ಯ ನಡೆಸಿದೆ. ಬುಧವಾರ ಶೋಧ ನಡೆಸಿದ ವೇಳೆ ಐದು ತಲೆ ಬುರುಡೆ ಸೇರಿ ನೂರಾರು ಮೂಳೆಗಳು ಸಿಕ್ಕಿದ್ದು ಅದೆಲ್ಲವೂ ಪುರುಷರದ್ದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.…
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 5 ಕಿಂಡಿ ಅಣೆಕಟ್ಟಿಗೆ 5.70 ಕೋಟಿ ರೂ ಅನುದಾನ ಮಂಜೂರು
ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಹಾಗೂ ಬಂಡ್ವಾಳ ತಾಲೂಕು ವ್ಯಾಪ್ತಿಯ 5 ವಿವಿಧ ಕಡೆಗಳಲ್ಲಿ ಕಿಂಡಿಅಣೆಕಟ್ಟು ನಿರ್ಮಾಣಕ್ಕೆ ಪುತ್ತೂರು ಶಾಸಕ ಅಶೋಕ್ ರೈ ಅವರ ಮನವಿಯ ಮೇರೆಗೆ ಸಣ್ಣ ನೀರಾವರಿ ಇಲಾಖೆಯಿಂದ ಒಟ್ಟು 5.70 ಕೋಟಿ ಅನುದಾನಮಂಜೂರಾಗಿದ್ದು…
ಅ.20: ಅಶೋಕ ಜನಮನ 2025 ಬೃಹತ್ ದೀಪಾವಳಿ ಕಾರ್ಯಕ್ರಮ 22 ವಿವಿಧ ಸಮಿತಿಗಳ ನೇಮಕ: ಸುಮಾ ಅಶೋಕ್ ರೈ – ನ್ಯೂಸ್ ಫೋಕಸ್
ಪುತ್ತೂರು: ಅಕ್ಟೋಬರ್ 20 ರಂದು ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ 13 ನೇ ವರ್ಷದ ಅಶೋಕ ಜನಮನ 2025 ಕಾರ್ಯಕ್ರಮ ನಡೆಸಲು ಸಹಕಾರಿಯಾಗುವಂತೆ 23 ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಪ್ರವರ್ತಕಿ,ಶಾಸಕ ಅಶೋಕ್ ರೈ…
ನೆಟ್ಟಾರು : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಗುಂಡಿಗೆ ಬಿದ್ದ ಕಾರು – ನ್ಯೂಸ್ ಫೋಕಸ್
ಬೆಳ್ಳಾರೆ ಗ್ರಾಮದ ನೆಟ್ಟಾರಿನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದ ಘಟನೆ ನಡೆದಿದೆ. ನೆಟ್ಟಾರು ತಿರುವಿನಲ್ಲಿಚಾಲಕನ ನಿಯಂತ್ರಣ ತಪ್ಪಿ ರಿಟ್ಸ್ ಕಾರು ಗುಂಡಿಗೆ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂ ಗೊಂಡಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಬೆಳ್ಳಾರೆ…
ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ವತಿಯಿಂದ ನರೇಂದ್ರ ಮೋದಿಜೀ ಯವರ ಹುಟ್ಟುಹಬ್ಬ ಆಚರಣೆ – ನ್ಯೂಸ್ ಫೋಕಸ್
ಬೆಳ್ತಂಗಡಿ : ಸೆ 17 ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಯವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕಳೆoಜ ನಂದಗೋಕುಲ ಗೋಶಾಲೆಗೆ ರೂ.10.000/- ಧನಸಹಾಯ ಹಾಗೂ ಅಶಕ್ತ ಕುಟುಂಬಗಳಾದ ಕುವೆಟ್ಟು ಗ್ರಾಮದ…
ತಿಮರೋಡಿ ವಿರುದ್ಧ ಎಸ್ಐಟಿಯಿಂದ ಆರ್ಮ್ಸ್ ಆಕ್ಟ್ ಅಡಿ ಕೇಸ್ ದಾಖಲು – ನ್ಯೂಸ್ ಫೋಕಸ್
ಮಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ವಿಶೇಷ ತನಿಖಾ ತಂಡ (SIT) ಪ್ರಕರಣ ದಾಖಲಿಸಿದೆ. ಎಸ್ಪಿ ಸೈಮನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆರ್ಮ್ಸ್ ಆಕ್ಟ್ (Arms Act )ಅಡಿ ಪ್ರಕರಣ ದಾಖಲಿಸಿದ್ದಾರೆ. ಆಗಸ್ಟ್ 26 ರಂದು ಚಿನ್ನಯ್ಯನನ್ನು ತಿಮರೋಡಿಯ ನಿವಾಸಕ್ಕೆ…
ಕಬಕ ಶ್ರೀ ಅಡ್ಯಲಾಯ ಮತ್ತು ಪರಿವಾರ ದೈವಗಳ ಸನ್ನಿದಿಯಲ್ಲಿ ಶ್ರೀ ದೈವಗಳಿಗೆ ಅಡ್ಯೆ ಸೇವೆ ಹಾಗೂ ಸಾರ್ವಜನಿಕ ಶ್ರೀ ಮೃತ್ಯುಂಜಯ ಹವನ – ನ್ಯೂಸ್ ಫೋಕಸ್
ಕಬಕ ಶ್ರೀ ಅಡ್ಯಾಲಯ ಮತ್ತು ಪರಿವಾರ ದೈವಗಳ ಸನ್ನಿದಿಯಲ್ಲಿ ಕನ್ಯಾ ಸಂಕ್ರಮಣದಂದು ಶ್ರೀ ವೇದಮೂರ್ತಿ ಶ್ರೀ ಶ್ರೀಧರ್ ಭಟ್ ಇವರ ಪೌರೋಹಿತ್ಯದಲ್ಲಿ ಶ್ರೀ ದೈವಗಳಿಗೆ ಅಡ್ಯೆ ಸೇವೆ ಹಾಗೂ ಸಾರ್ವಜನಿಕ ಶ್ರೀ ಮೃತ್ಯುoಜಯ ಹವನ ಹಾಗೂ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ…
ಜೆಮಿನಿ ಎಐ ನ್ಯಾನೋ ಬನಾನಾ , ಸೀರೆ ಟ್ರೆಂಡ್ ಬಗ್ಗೆ ಭಾರೀ ಎಚ್ಚರಿಕೆ ನೀಡಿದ ಪೊಲೀಸ್ – ನ್ಯೂಸ್ ಫೋಕಸ್
ನವದೆಹಲಿ (ಸೆ.15): ಜೆಮಿನಿ AI ಸೀರೆ ಫೋಟೋಗಳ ಟ್ರೆಂಡ್ ಭಾರತದ ಸೋಶಿಯಲ್ ಮೀಡಿಯಾಗಳಲ್ಲಿ ಬಿರುಗಾಳಿ ಎಬ್ಬಿಸಿದ್ದು, ಸಾವಿರಾರು ಯೂಸರ್ಗಳು ಗೂಗಲ್ನ ಜೆಮಿನಿ ಅಪ್ಲಿಕೇಶನ್ ಬಳಸಿ ರಚಿಸಲಾದ ಸೊಗಸಾದ ಸೀರೆಗಳಲ್ಲಿ AI-ರಚಿತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅನೇಕ ಯೂಸರ್ಗಳು “ಸಾಂಪ್ರದಾಯಿಕ ವಧುವಿನ ನೋಟ,” “ಬಾಲಿವುಡ್-ಸ್ಟೈಲ್…
ಸೌಜನ್ಯ ಮಾವ ವಿಠಲ್ಗೌಡ ತೋರಿಸಿದ ಬಂಗ್ಲೆಗುಡ್ಡೆ ಕಾಡಿನಲ್ಲಿ 5 ಅಸ್ಥಿಪಂಜರ ಮೂಳೆ ಪತ್ತೆ – ನ್ಯೂಸ್ ಫೋಕಸ್
ದಕ್ಷಿಣ ಕನ್ನಡ (ಸೆ.17): ಬಂಗ್ಲೆಗುಡ್ಡೆ ಮೀಸಲು ಅರಣ್ಯದಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯು ಮಹತ್ವದ ತಿರುವು ಪಡೆದಿದ್ದು, ವಿಶೇಷ ತನಿಖಾ ದಳದ ಮೂರು ಪ್ರತ್ಯೇಕ ತಂಡಗಳು ಐದು ವಿಭಿನ್ನ ಸ್ಥಳಗಳಲ್ಲಿ ಮಾನವ ಅಸ್ಥಿಪಂಜರಗಳ ಅವಶೇಷಗಳನ್ನು ಪತ್ತೆ ಹಚ್ಚಿವೆ. ಈ ಬೆಳವಣಿಗೆಯಿಂದಾಗಿ ‘ಬಂಗ್ಲೆಗುಡ್ಡೆ ರಹಸ್ಯ’…
ಮಾಣಿ – ಸಂಪಾಜೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ : ರಾ.ಹೆದ್ದಾರಿ ಪ್ರಾದೇಶಿಕ ಅಧಿಕಾರಿ ಜೊತೆ ಶಾಸಕ ರೈ ಮಾತುಕತೆ – ನ್ಯೂಸ್ ಫೋಕಸ್
ಪುತ್ತೂರು : ಬೆಂಗಳೂರು: ಮಾಣಿ – ಸಂಪಾಜೆ ಚತುಷ್ಪಥ ರಾ.ಹೆದ್ದಾರಿ 275 ರ ಕಾಮಗಾರಿಗೆ ಡಿಪಿಆರ್ ಮುಗಿದಿದ್ದು ವಾರ್ಷಿಕ ಯೋಜನೆಯಲ್ಲಿ ಹೆದ್ದಾರಿಯನ್ನು ಸೇರ್ಪಡೆಗೊಳಿಸಿಕಾಮಗಾರಿ ಆರಂಭ ಮಾಡುವಂತೆ ಎನ್ಎಚ್ ರೀಜನಲ್ ಆಫೀಸರ್ ನರೇಂದ್ರ ಶರ್ಮ ಅವರಿಗೆ ಶಾಸಕ ಅಶೋಕ್ ರೈ ವಿನಂತಿಸಿದ್ದಾರೆ.ಬುಧವಾರ ಎನ್ಎಚ್…
ಕುಳಾಯಿ -ಕಾನ ರೈಲ್ವೆ ಬ್ರಿಡ್ಜ್ ಕಾಂಕ್ರೀಟ್ ಕಾಮಗಾರಿಗೆ ಶಾಸಕ ಡಾ. ವೈ ಭರತ್ ಶೆಟ್ಟಿಯವರಿಂದ ಗುದ್ದಲಿ ಪೂಜೆ – ನ್ಯೂಸ್ ಫೋಕಸ್
ಕುಳಾಯಿ -ಕಾನ ಭಾಗದ ಸಾರ್ವಜನಿಕರ ಬಹು ಬೇಡಿಕೆಯ ಕುಳಾಯಿ -ಕಾನ ರೈಲ್ವೆ ಬ್ರಿಡ್ಜ್ ಕಾಂಕ್ರೀಟ್ ಕಾಮಗಾರಿಗೆ ಶಾಸಕರು ಡಾ. ವೈ ಭರತ್ ಶೆಟ್ಟಿಯವರಿಂದ ಗುದ್ದಲಿ ಪೂಜೆ. ಸಾರ್ವಜನಿಕರ ಬಹು ಬೇಡಿಕೆಯ ರಸ್ತೆಯಾದ ಕುಳಾಯಿ ಕಾನ ಬ್ರಿಡ್ಜ್ ರಸ್ತೆಗೆ ಸುಮಾರು 26ಲಕ್ಷ ವೆಚ್ಚದಲ್ಲಿ…
ಅರಸಿನಮಕ್ಕಿಯಲ್ಲಿ ಬೃಹತ್ ರಕ್ತದಾನ ಶಿಬಿರ -ನ್ಯೂಸ್ ಫೋಕಸ್
ಅರಸಿನಮಕ್ಕಿ (ಸೆ. 14): ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.),ಅರಸಿನಮಕ್ಕಿ ಇದರ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು, ಲೇಡಿಗೋಶನ್ ಆಸ್ಪತ್ರೆ ಇವುಗಳ ಸಹಯೋಗದಲ್ಲಿ ಹಾಗೂ ಸೇವಾಭಾರತಿ (ರಿ.), ಕನ್ಯಾಡಿ ಇದರ…
ಡಿವಿಎಸ್ ಬ್ಯಾಂಕ್ ಖಾತೆ ಹ್ಯಾಕ್ – 3 ಲಕ್ಷ ದೋಚಿದ ಸೈಬರ್ ಕಳ್ಳರು – ನ್ಯೂಸ್ ಫೋಕಸ್
ಬೆಂಗಳೂರು: ಮಾಜಿ ಸಿಎಂ ಸದನಾಂದ ಗೌಡ ಅವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಸೈಬರ್ ಕಳ್ಳರು 3 ಲಕ್ಷ ರೂ. ಹಣವನ್ನು ಕದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 75 ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ 75 ಪೌರ ಕಾರ್ಮಿಕರರಿಗೆ ಆರ್ಎಂವಿ…
ಟ್ರಕ್ಕಿಂಗ್ ತೆರಳಿದ್ದ ಪುತ್ತೂರು ಮೂಲದ ಯುವಕ ಕುಸಿದು ಬಿದ್ದು ಮೃತ್ಯು – ನ್ಯೂಸ್ ಫೋಕಸ್
ಮೂಡಬಿದ್ರೆ: ಇಲ್ಲಿನ ಗುಡ್ಡವೊಂದಕ್ಕೆ ಟ್ರಕ್ಕಿಂಗ್ ಹೋಗಿದ್ದ ಇಬ್ಬರು ಯುವಕರ ಪೈಕಿ ಓರ್ವ ಅಸ್ವಸ್ಥಗೊಂಡು ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪುತ್ತೂರು ಇರ್ದೆ ನಿವಾಸಿ ಮನೋಜ್ ಎನ್ (22) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈತ ಕೇರಳದ ಆಡೂರು ನಿವಾಸಿ ಕಾರ್ತಿಕ್…
ಬೆಳ್ತಂಗಡಿ: ಮತ್ತೆ ಬಂಗ್ಲೆಗುಡ್ಡ ಕಾಡಿನ ಶೋಧಕ್ಕೆ ಮುಂದಾದ ಎಸ್ಐಟಿ – ನ್ಯೂಸ್ ಫೋಕಸ್
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡ ಕಾಡಿನಲ್ಲಿ ಎಸ್ಐಟಿ ಮತ್ತೆ ಶೋಧ ಕಾರ್ಯ ನಡೆಸಲು ಮುಂದಾಗಿದೆ. ಸದ್ಯ ನೇತ್ರಾವತಿ ಸ್ನಾನ ಘಟ್ಟದಿಂದ ತಲಾಶ್ ಕಾರ್ಯ ಆರಂಭಗೊಂಡಿದೆ. 13 ಎಕರೆ ವಿಸ್ತೀರ್ಣವುಳ್ಳ ಬಂಗ್ಲೆಗುಡ್ಡದ ಸಂಪೂರ್ಣ ಅರಣ್ಯವನ್ನು ಜಾಲಾಡಲಿರುವ ಎಸ್ಐಟಿಯು ಅಸ್ಥಿಪಂಜರಕ್ಕಾಗಿ ಶೋಧ ನಡೆಸಲಿದೆ. ನೇತ್ರಾವತಿ…
ಕೊಪ್ಪಳ | ದಲಿತ ಮಹಿಳೆಗೆ ಅವಹೇಳನ ಆರೋಪ – ಯತ್ನಾಳ್ ವಿರುದ್ಧ FIR – ನ್ಯೂಸ್ ಫೋಕಸ್
ಕೊಪ್ಪಳ: ದಲಿತ ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಕುರಿತು ಕೊಪ್ಪಳ ನಗರದ ದಲಿತ ಸಂಘಟನೆಯ ಯುವ ಮುಖಂಡ ಮಲ್ಲಿಕಾರ್ಜುನ ಪೂಜಾರ ಅವರು ದೂರು ದಾಖಲಿಸಿದ್ದು,…
ಪುತ್ತೂರು : ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಯುವತಿಗೆ ಕಿರುಕುಳ ಆರೋಪಿಗೆ ಶಿಕ್ಷೆ – ನ್ಯೂಸ್ ಫೋಕಸ್
ಪುತ್ತೂರು: ದಿನಾಂಕ :25.04.2022 ರಂದು ಕೆ ಎಸ್ ಆರ್ ಟಿ ಸಿ ಬಸ್ ಸುಳ್ಯದಿಂದ ಪುತ್ತೂರಿಗೆ ಸಂಚರಿಸುತ್ತಿದ್ದ ಸಮಯ ಯುವತಿ ಕುಳಿತಿದ್ದ ಸೀಟಿನ ಪಕ್ಕಕ್ಕೆ ಕುಳಿತಿದ್ದ ಆರೋಪಿ ಮೊಹಮ್ಮದ್ ಸತ್ತಾರ್ ಮಾಡೂರು ಗ್ರಾಮದ ನಿವಾಸಿ ಎಂಬಾತನು ಬಸ್ಸು ಸಂಚರಿಸುತ್ತಿದ್ದ ಸಮಯ ಲೈಂಗಿಕ…
ವಿಟ್ಲ : ಗಾಂಜಾ ಮಾರಾಟ, ನಾಲ್ವರು ಯುವಕರ ಬಂಧನ – ನ್ಯೂಸ್ ಫೋಕಸ್
ವಿಟ್ಲ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೆ.15ರಂದು ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ಪೆಟ್ರೋಲ್ ಕರ್ತವ್ಯದಲ್ಲಿದ್ದ ವೇಳೆ, ಬಾತ್ಮಿದಾರರಿಂದ ಬಂದ ಮಾಹಿತಿಯ ಆಧಾರದ ಮೇಲೆ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ…
ಓಯೋ ರೂಮ್ ಗೆ ಹೋಗಲು ನಕಲಿ ಆಧಾರ್ ಕಾರ್ಡ್ ಬೇಕಾ? ಬೆಂಗಳೂರಿನಲ್ಲಿ ಬಯಲಾಯ್ತು ಸೈಬರ್ ರಹಸ್ಯ! – ನ್ಯೂಸ್ ಫೋಕಸ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಕಲಿ ದಾಖಲೆಗಳ ಮಾರಾಟ ಜಾಲ ಬಯಲಾಗಿದ್ದು, ಹೆಬ್ಬಗೋಡಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನಕಲಿ ಆಧಾರ್ ಕಾರ್ಡ್ ಹಾಗೂ ನಕಲಿ ಮಾರ್ಕ್ಸ್ ಕಾರ್ಡ್ ತಯಾರಿಸಿ ಮಾರಾಟ ಮಾಡುತ್ತಿದ್ದ ಈ ಗ್ಯಾಂಗ್ ಹಲವು ರಾಜ್ಯಗಳಲ್ಲಿ ದಾಖಲೆಗಳನ್ನು ಮಾರಾಟ ಮಾಡುತ್ತಿದ್ದ ಶಂಕೆ…
ದಸರಾ ಕ್ರೀಡಾ ಕೂಟದ ಯೋಗಾಸನ ಸ್ಪರ್ಧೆ ಯಲ್ಲಿ ಚಿನ್ನದ ಪದಕದೊಂದಿಗೆ ವಿಧಾತ್ ಗೌಡ. ಮುಡೂರು ರಾಜ್ಯ ಮಟ್ಟಕ್ಕೆ ಆಯ್ಕೆ – ನ್ಯೂಸ್ ಫೋಕಸ್
ಕರ್ನಾಟಕ ಸರಕಾರ,ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಕೊಡಗು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದರ ಸ0ಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ 2025-26. ಯೋಗಾಸನ ಸ್ಪರ್ಧೆ ಯನ್ನು 15 ಸೆಪ್ಟೆಂಬರ್ 2025 ರಂದು ಕ್ರೀಡಾ ಶಾಲಾ ಮೈದಾನ ಕೂಡಿಗೆ ನಲ್ಲಿ…
ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮ ಪಂಚಾಯತಿಗೆ ಭೇಟಿ ನೀಡಿದ MLC ಕಿಶೋರ್ ಕುಮಾರ್ ಪುತ್ತೂರು – ನ್ಯೂಸ್ ಫೋಕಸ್
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮ ಪಂಚಾಯಿತಿಗೆ ಇಂದು ಭೇಟಿ ನೀಡಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಇವರೊಂದಿಗೆ, ಕೇಂದ್ರ ಸರ್ಕಾರದ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ…
ರಾಜ್ಯದಲ್ಲಿ ಮೂರು ದಿನ ಭಾರೀ ಮಳೆ ಎಚ್ಚರಿಕೆ – ನ್ಯೂಸ್ ಫೋಕಸ್
ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳು ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಸೆಪ್ಟೆಂಬರ್ 16 ಮತ್ತು 17ರಂದು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿರುವ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ,…
ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪಾಂಗ್ಲಾಯ್ ದರ್ಬೆ ಪುತ್ತೂರಿನ ಬಾಲಕಿಯರ ಕಬಡ್ಡಿ ತಂಡ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ – ನ್ಯೂಸ್ ಫೋಕಸ್
ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಪಿ.ಎಂ. ಶ್ರೀ. ಪ್ರೌಢಶಾಲೆ ಬಂಟ್ವಾಳ ನೇತೃತ್ವದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14 ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ…
ಬೆಳ್ತಂಗಡಿ ಬಿಜೆಪಿ ವತಿಯಿಂದ ಲಾಯಿಲ ಶಕ್ತಿ ಕೇಂದ್ರದ ಅಭ್ಯಾಸವರ್ಗ ಕಾರ್ಯಕ್ರಮ – ನ್ಯೂಸ್ ಫೋಕಸ್
ಲಾಯಿಲ :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷದ ಸಂಘಟನಾ ದೃಷ್ಟಿಯಿಂದ ಸೆಪ್ಟೆಂಬರ್ 14 ರಂದು ಲಾಯಿಲ ಶಕ್ತಿಕೇಂದ್ರದ ಕಾರ್ಯಕರ್ತರ ಅಭ್ಯಾಸ ವರ್ಗ ಕಾರ್ಯಕ್ರಮ ಲಾಯಿಲ ಸಂಗಮ ಸಭಾಭವನದಲ್ಲಿ ನಡೆಯಿತು. ಪಕ್ಷದ ಹಿರಿಯ ಕಾರ್ಯಕರ್ತರಾದ ಪುಟ್ಟಣ್ಣ ಕುಂಬಾರ ಇವರು ದೀಪ…
ಕೆಂಪು ಕಲ್ಲು, ಮರಳು ಸಮಸ್ಯೆ ಬಗೆಹರಿಸದ ಕಾಂಗ್ರೆಸ್ ಸರ್ಕಾರದ ವಿರುದ್ದ ಮಂಗಳೂರಿನಲ್ಲಿ ನಾಳೆ ಬೃಹತ್ ಪ್ರತಿಭಟನಾ ಧರಣಿ: ಸಂಸದ ಕ್ಯಾ. ಚೌಟ – ನ್ಯೂಸ್ ಫೋಕಸ್
ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳಿನ ತೀವ್ರ ಕೊರತೆ ಉಂಟಾಗಿದ್ದು, ಇದರಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಬಡವರ ಮನೆ ಕಟ್ಟುವ ಕನಸು ನುಚ್ಚು…
ಶ್ರೀ ಮಹಾದೇವಿ ಯುವಕ ಮಂಡಲ (ರಿ.)ಕಬಕ ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ – ನ್ಯೂಸ್ ಫೋಕಸ್
ಶ್ರೀ ಮಹಾದೇವಿ ಯುವಕ ಮಂಡಲ (ರಿ.)ಕಬಕ ಹಾಗೂ ಶ್ರೀ ಮಹಾದೇವಿ ಮಹಿಳಾ ಮಂಡಳಿಯ ಸಹಕಾರದೊಂದಿಗೆ 2ನೇ ವರ್ಷದ ತುಳುನಾಡ ಪೆರ್ಮೆದ ಕೆಸರ್ಡ್ ಒಂಜಿದಿನ ಕಾರ್ಯಕ್ರಮ ಶ್ರೀ ಮಹಾದೇವಿ ದೇವಸ್ಥಾನಲ್ಲಿ ಪ್ರಾರ್ಥನೆ ಸಲ್ಲಿಸಿ ಕ್ರೀಡಾ ಜ್ಯೋತಿಯೊಂದಿಗೆ ದೇವಸ್ಥಾದಿಂದ ಕಬಕ ಸೀಗೆತ್ತಡಿ ಗದ್ದಗೆ ಸಾಗಿ…
ಮಹೇಶ್ ವಿಕ್ರಮ್ ಹೆಗ್ಡೆಗೆ ಜಾಮೀನು ಮಂಜೂರು:ಇಂದೇ ಬಿಡುಗಡೆ ಸಾಧ್ಯತೆ – ನ್ಯೂಸ್ ಫೋಕಸ್
ಮೂಡುಬಿದಿರೆ ಪೊಲೀಸರ ಸ್ವಯಂಪ್ರೇರಿತ ಕೇಸಿನ ಮೇರೆಗೆ ಬಂಧಿತರಾಗಿದ್ದ ವಿಕ್ರಮ ವಾಹಿನಿಯ ಮುಖ್ಯಸ್ಥ ಮಹೇಶ್ ವಿಕ್ರಮ್ ಹೆಗ್ಡೆಯವರಿಗೆ ಜಾಮೀನು ಮಂಜೂರಾಗಿದೆ. ಮೂಡುಬಿದಿರೆ ನ್ಯಾಯಾಲಯದಲ್ಲಿ ವಕೀಲ ಶರತ್ ಶೆಟ್ಟಿಯವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಜಾಮೀನು ಮಂಜೂರುಗೊಳಿಸಿ ಆದೇಶಿಸಿದೆ. ಮಹೇಶ್ ವಿಕ್ರಮ್ ಹೆಗ್ಡೆ ಬಿಡುಗಡೆಗಾಗಿ ನಿನ್ನೆ…
ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಸುಶ್ಮಿತಾ ಬೆದ್ರುಪಣೆ ಮನೆಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ
ಭಾರತೀಯ ಗಡಿಭದ್ರತಾ ಪಡೆಗೆ ಆಯ್ಕೆಯಾದ ಅರಂತೋಡು ಗ್ರಾಮದ ಬೆದ್ರುಪಣೆ ನಿವಾಸಿ ಕು.ಸುಶ್ಮಿತಾ ಬೆದ್ರುಪಣೆ ಮನೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಭೇಟಿಯಾಗಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೇಶವ ಅಡ್ತಲೆ ಮಾಜಿ ಜಿಲ್ಲಾ…
ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ MLC ಕಿಶೋರ್ ಕುಮಾರ್ ಪುತ್ತೂರು -ನ್ಯೂಸ್ ಫೋಕಸ್
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಡಿಪ್ಪಾಡಿ ಗ್ರಾಮ ಪಂಚಾಯಿತಿಗೆ ಇಂದು ಭೇಟಿ ನೀಡಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಇವರೊಂದಿಗೆ, ಕೇಂದ್ರ ಸರ್ಕಾರದ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ…
ಕರ್ನಾಟಕದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದ್ರೆ ಮನೆಗೆ ನುಗ್ಗಿ ಹೊಡಿತೀವಿ: ಪ್ರಮೋದ್ ಮುತಾಲಿಕ್ – ನ್ಯೂಸ್ ಫೋಕಸ್
ಗದಗ: ನಮ್ಮ ದೇಶದಲ್ಲಿ ಹುಟ್ಟಿ, ನಮ್ಮದೇ ಅನ್ನ ತಿಂದು, ಸೌಲಭ್ಯಗಳನ್ನು ಪಡೆದು ಪಾಕಿಸ್ತಾನ ಜಿಂದಾಬಾದ್ ಅಂದ್ರೆ ಅಂತಹವರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಗಜೇಂದ್ರಗಡ ಪಟ್ಟಣದಲ್ಲಿ ಏರ್ಪಡಿಸಿದ್ದ ಹಿಂದೂ ಮಹಾ ಗಣೇಶ ಉತ್ಸವ…
ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ಮೊಹಾಂತಿ ಪ್ರಗತಿ ಪರಿಶೀಲನೆ ಸಭೆ – ತನಿಖೆಯ ವೇಗ ಹೆಚ್ಚಿಸುವಂತೆ ಸೂಚನೆ – ನ್ಯೂಸ್ ಫೋಕಸ್
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ಎಸ್ಐಟಿ (SIT) ತನಿಖೆ ಚುರುಕುಗೊಂಡಿದೆ. ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರೆ. ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಮುಂದಿನ…
ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಕಾರ್ಯಕ್ರಮದ ಪೂರ್ವಭಾವಿ ಸಭೆ – ನ್ಯೂಸ್ ಫೋಕಸ್
ಪುತ್ತೂರು:ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುವ ದೀಪಾವಳಿ ಕಾರ್ಯಕ್ರಮ “ ಅಶೋಕ ಜನಮನ” ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಶಾಸಕರೂ ಆದ ಅಶೋಕ್ ರೈ ತಿಳಿಸಿದರು.…
ವಿಶ್ವ ಹಿಂದೂ ಪರಿಷದ್ ಬಜರಂಗದಳ ತಿಂಗಳಾಡಿ ವತಿಯಿಂದ ರಕ್ತದಾನ ಶಿಬಿರ – ನ್ಯೂಸ್ ಫೋಕಸ್
ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡ ವೀರಾಂಜನೇಯ ಘಟಕ ತಿಂಗಳಾಡಿ ಇದರ ವತಿಯಿಂದ ಘಟಕದ ಕಾರ್ಯಕರ್ತನಾಗಿದ್ದ ದಿ| ಕೀರ್ತನ್ ಗೌಡ ಎರಕ್ಕಳ ಇವರ ಸ್ಮರಣಾರ್ಥವಾಗಿ ರಕ್ತದಾನ ಶಿಬಿರವು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರುನಲ್ಲಿ ನಡೆಯಿತು. ಒಟ್ಟು 20…
ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ – ಜನಸಾಗರ, ಡಿಜೆ ಸದ್ದಿಗೆ ಯುವ ಸಮೂಹ ಭರ್ಜರಿ ಡ್ಯಾನ್ಸ್ – ನ್ಯೂಸ್ ಫೋಕಸ್
ಚಿತ್ರದುರ್ಗ: ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಗಣೇಶನ ಶೋಭಾಯಾತ್ರೆ ಇಂದು ಚಿತ್ರದುರ್ಗದಲ್ಲಿ ನಡೆದಿದ್ದು, ಶೋಭಾಯಾತ್ರೆಗೆ ಜನಸಾಗರವೇ ಹರಿದುಬಂದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಜನರು ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು, ಡಿಜೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿ ಎಂಜಾಯ್ ಮಾಡಿದರು. ಇಂದು ಏಷ್ಯಾದಲ್ಲಿಯೇ…
ನಾಳೆ ಸೆ 14 ಆದಿತ್ಯವಾರ. 1ಕೋಟಿ ಅನುದಾನದಲ್ಲಿ ನಿರ್ಮಾಣ ಗೊಂಡ ಮಾಲಾಡಿ ಗ್ರಾಮ ಪೆರ್ಡೆ ಕ್ರಾಸ್ ನಿಂದ ಊರ್ಲ ರಸ್ತೆ ಕಾಂಕ್ರೀಟಿರಣ ರಸ್ತೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರಿಂದ ಲೋಕಾರ್ಪಣೆ – ನ್ಯೂಸ್ ಫೋಕಸ್
ಮಾಲಾಡಿ ಗ್ರಾಮ ಊರ್ಲ ಪರಿಸರದ ನಾಗರಿಕರ ಹಲವು ದಶಕಗಳ ಬೇಡಿಕೆಯಾದ ಪೂಂಜಾಲಕಟ್ಟೆ ನೈನಾಡ್ ಸಂಪರ್ಕ ರಸ್ತೆಯಲ್ಲಿ ಪೇರ್ಡೆಯಿಂದ ಊರ್ಲದವರೆಗಿನ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಬೆಳ್ತಂಗಡಿ ಶಾಸಕರರಾದ ಹರೀಶ್ ಪೂಂಜಾರವರು 1.0 ಕೋಟಿ ಅನುದಾನ ಒದಗಿಸಿದ್ದು ಕಾಮಗಾರಿ ಮುಕ್ತಾಯಗೊಂಡಿರುತ್ತದೆ. ಸೆಪ್ಟೆಂಬರ್ 14 ಆದಿತ್ಯವಾರ…
ಸವಣೂರು ಶ್ರೀರಾಮ ಸಂಜೀವಿನಿ ಒಕ್ಕೂಟದ ಮಹಾಸಭೆ
ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ.) ಸವಣೂರು ಇದರ 2024-2025ನೇ ಸಾಲಿನ ವಾರ್ಷಿಕ ಮಹಾಸಭೆಯು ಕುಮಾರಧಾರ ಸಭಾಂಗಣ ಗ್ರಾಮ ಪಂಚಾಯತ್ ಸವಣೂರು ಇಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವಿಜಯ ಈಶ್ವರ ಗೌಡ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ…
ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಸಾವಿನ ಸಂಖ್ಯೆ 9ಕ್ಕೆ ಏರಿಕೆ – ನ್ಯೂಸ್ ಫೋಕಸ್
ಹಾಸನ: ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಮಾಸುವ ಮುನ್ನವೇ ಹಾಸನದಲ್ಲಿ ಗಣೇಶ ಮೆರವಣಿಗೆ (Hassan Ganesh Procession) ವೇಳೆ ಘನಘೋರ ದುರಂತವೊಂದು ಸಂಭವಿಸಿದೆ. ಗಣೇಶ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಏಕಾಏಕಿ ಟ್ರಕ್ ಹರಿದು ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ…
ಪೋಸ್ಟ್ ಕಾರ್ಡ್ ನ್ಯೂಸ್ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಬಂಧನ – ನ್ಯೂಸ್ ಫೋಕಸ್
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಫೋಟೊ ಬಳಸಿ ಕೋಮು ಪ್ರಚೋದನೆ ಆರೋಪದಲ್ಲಿ ಪೋಸ್ಟ್ ಕಾರ್ಡ್ ನ್ಯೂಸ್ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಬಂಧಿಸಲಾಗಿದೆ. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ. ಮೂಡಬಿದಿರೆ ಪಿಎಸ್ಸೈ ಕೃಷ್ಣಪ್ಪ ಎಂಬವರ ದೂರಿನಡಿ ಸ್ವಯಂಪ್ರೇರಿತ ಎಫ್ಐಆರ್…
ಬೆಳ್ತಂಗಡಿ: ಬಂಗ್ಲೆಗುಡ್ಡದ ಬಳಿ ಇನ್ನಷ್ಟು ಅಸ್ಥಿಪಂಜರ…! ವಿಠಲಗೌಡ ಸ್ಫೋಟಕ ಹೇಳಿಕೆ – ನ್ಯೂಸ್ ಫೋಕಸ್
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಯುತ್ತಿದ್ದಂತೆ ಸ್ಥಳ ಮಹಜರು ಬಗ್ಗೆ ಸೌಜನ್ಯಾ ಮಾವ ವಿಠಲಗೌಡ ಅವರ ಸ್ಫೋಟಕ ಹೇಳಿಕೆಯ ವೀಡಿಯೋ ವೈರಲ್ ಆಗಿದೆ. ಬಂಗ್ಲೆಗುಡ್ಡೆಕ್ಕೆ ತನ್ನನ್ನು ಎರಡು ಸಲ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಅಸ್ಥಿಪಂಜರ ದೊರಕಿತ್ತು. ಮೊದಲನೇ…
ಬಂಟ್ವಾಳ: ಅಪ್ರಾಪ್ತೆ ಮೇಲೆ ಅತ್ಯಾಚಾರಗೈದ ಕಾಮುಕನ ಕಂಬಕ್ಕೆ ಕಟ್ಟಿ ಥಳಿತ- ಆರೋಪಿ ಅರೆಸ್ಟ್
ಬಂಟ್ವಾಳ: ಆಟವಾಡುತ್ತಿದ್ದ ಬಾಲಕಿಯ ವಾಸ್ತವ್ಯವಿರದ ಮನೆಯೊಂದರ ಹಿಂದೆ ಕರೆದೊಯ್ದು ಬಲಾತ್ಕಾರವಾಗಿ ಅತ್ಯಾಚಾರಗೈದ ಆರೋಪಿತನನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಇರಾ ಗ್ರಾಮದ ಸೂತ್ರಬೈಲು ನಿವಾಸಿ ಅಬೂಬಕರ್ (50) ಬಂಧಿತ ಆರೋಪಿ. ಬಾಲಕಿ ಆಟವಾಡುತ್ತಿದ್ದ ಸಂದರ್ಭ ಅಲ್ಲಿಗೆ ಬಂದ ನೆರೆಮನೆಯ ನಿವಾಸಿ ಅಬೂಬಕರ್…
ಅರುಣ್ ಕುಮಾರ್ ಪುತ್ತಿಲರಿಗೆ ನೀಡಿದ್ದ ಭರವಸೆ ವಿಚಾರ : ಈ ವಿಚಾರ ಪಕ್ಷದ ಸಭೆಯಲ್ಲಿ ಚರ್ಚೆಗೆ ಬಂದ ಸಂದರ್ಭ ಉತ್ತರ ನೀಡುತ್ತೇನೆ ಹೊರತು ಯಾರೋ ಎಲ್ಲೆಲ್ಲಿಯೋ ಕುಳಿತು ಸಭೆ ಮಾಡಿದ್ದಕ್ಕೆಲ್ಲ ಉತ್ತರ ನೀಡಲಾಗುವುದಿಲ್ಲ – ಸತೀಶ್ ಕುಂಪಲ -ನ್ಯೂಸ್ ಫೋಕಸ್
ಪುತ್ತೂರು: ಅರುಣ್ ಕುಮಾರ್ ಪುತ್ತಿಲರಿಗೆ ನೀಡಿದ್ದ ಭರವಸೆ ಈಡೇರಿಸದ ವಿಚಾರದಲ್ಲಿ ಕಾರ್ಯಕರ್ತರಲ್ಲಿ ಉಂಟಾಗಿರುವ ಅಸಮಾಧಾನ ಕುರಿತು, ಪಕ್ಷದ ಸಭೆಯಲ್ಲಿ ಚರ್ಚೆಯಾದಾಗ ಉತ್ತರ ನೀಡುತ್ತೇನೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ಇದು ರಾಜ್ಯ ಮಟ್ಟದ ನಿರ್ಧಾರ ಎಂದು ಗ್ರಾಮಾಂತರ…
ʼಪ್ರತಾಪ್ ಸಿಂಹ ಜೊತೆ ಸೇರಿ ಹೊಸ ಸರ್ಕಾರ ತರುತ್ತೇನೆ..ಜೆಸಿಬಿ ನಮ್ಮ ಪಕ್ಷದ ಚಿಹ್ನೆʼ; ಮದ್ದೂರಲ್ಲಿ ಯತ್ನಾಳ್ ಭಾಷಣಕ್ಕೆ ಹುಚ್ಚೆದ್ದು ಕೂಗಿದ ಜನರು – ನ್ಯೂಸ್ ಫೋಕಸ್
ಮಂಡ್ಯ- ಮಂಡ್ಯದ ಮದ್ದೂರಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿರುವಾಗ ಮುಸ್ಲಿಮರು ಕಲ್ಲು ಎಸೆದಿದ್ದರು. ಅದಾದ ಬಳಿಕ ದೊಡ್ಡ ಗಲಾಟೆಯೇ ನಡೆಯಿತು. ಅದರ ಬೆನ್ನಲ್ಲೇ ಇಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮದ್ದೂರಿಗೆ ಭೇಟಿ ನೀಡಿದ್ದರು. ʼಇಡೀ ಕರ್ನಾಟಕದಲ್ಲಿ ಗಂಡು…
ಉಡುಪಿ: ಲಾರಿಯಲ್ಲಿ ಸಾಗಿಸುತ್ತಿದ್ದ 65 ಕೆ.ಜಿ ಗಾಂಜಾ ವಶ – ನ್ಯೂಸ್ ಫೋಕಸ್
ಉಡುಪಿ: ಉಡುಪಿ ಕಿನ್ನಿಮೂಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ 65 ಕೆ.ಜಿ ಗಾಂಜಾವನ್ನು ಉಡುಪಿ ಸೆನ್ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಪೊಲೀಸರ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ನಡೆಸಿದ ತಪಾಸಣೆಯಲ್ಲಿ ಗಾಂಜಾ ಸಾಗಿಸುತ್ತಿದ್ದ ಲಾರಿಗೆ ತಡೆ ನೀಡಲಾಗಿದ್ದು, ಪರಿಶೀಲನೆಯ ವೇಳೆ…
ಮದ್ದೂರು ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ ಕಡಬದಲ್ಲಿ ಪ್ರತಿಭಟನೆ – ನ್ಯೂಸ್ ಫೋಕಸ್
ಹಿಂದೂಗಳೊoದಿಗೆ ಸೌಹಾರ್ದಯುತವಾಗಿ ಬದುಕಲು ಸಾಧ್ಯವಿಲ್ಲದಿದ್ದರೆ ೭೫ ವರ್ಷಗಳ ಹಿಂದೆ ನಿಮಗೆ ಬೇರೆಯೇ ಕೊಟ್ಟಾಗಿದೆ, ಅಲ್ಲಿಗೆ ಹೋಗಬಹುದು: ಸುರೇಶ್ ಕುಮಾರ್ ಕೂಡೂರು ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣೆಗೆ ಮೇಲೆ ಕಲ್ಲು ತೂರಾಟ ಮಾಡಿ ಗಲಬೆ ಸೃಷ್ಠಿಸಿದ ಘಟನೆಯನ್ನು ಖಂಡಿಸಿ ಕಡಬ ಪ್ರಖಂಡ ವಿಶ್ವ ಹಿಂದೂ…
ಕಬಡ್ಡಿ ಪಂದ್ಯಾಟ ಸಾಂದೀಪನಿ ಪ್ರಥಮ ಸ್ಥಾನದೊಂದಿಗೆ ತಾಲ್ಲೂಕು ಮಟ್ಟಕ್ಕೆ ಆಯ್ಕೆ – ನ್ಯೂಸ್ ಫೋಕಸ್
ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಹಿ. ಪ್ರಾ. ಶಾಲೆ ಸವಣೂರು ನಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ಕಬಡ್ಡಿ ಪಂದ್ಯಾಟ 2025-26 ಇದರಲ್ಲಿ 17ರ ವಯೋಮಾನದ ಬಾಲಕರ ವಿಭಾಗ ದಲ್ಲಿ ಕೃಪಾನ್ , ತೀಕ್ಷಣ್, ತನುಶ್ ಶ್ಲೋಕ್,ಮನೀಶ್,ಗುರುಕಿರಣ್,ತುಷಾರ್,…
ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ – ಸಿ.ಟಿ ರವಿ ವಿರುದ್ಧ ಕೇಸ್ ದಾಖಲು – ನ್ಯೂಸ್ ಫೋಕಸ್
ಮಂಡ್ಯ: ಮದ್ದೂರಿನ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಎಂಎಲ್ಸಿ ಸಿ.ಟಿ ರವಿ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಾಗಿದೆ. ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟದ ಬಳಿಕ ಬುಧವಾರ (ಸೆ.10) ಸಾಮೂಹಿಕ…
ಧರ್ಮಸ್ಥಳ : ನೂರಾರು ಶವ ಹೂತಿಟ್ಟ ಪ್ರಕರಣ – ವಿಠಲ ಗೌಡರನ್ನು ಬಂಗ್ಲಗುಡ್ಡಕ್ಕೆ ಕರೆತಂದ ಎಸ್ಐಟಿ – ನ್ಯೂಸ್ ಫೋಕಸ್
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಇಂದು (ಸೆಪ್ಟೆಂಬರ್ 10ರಂದು) ಸಂಜೆ 4:30ಕ್ಕೆ ಸೌಜನ್ಯಾ ಮಾವ ವಿಠಲ್ ಗೌಡನನ್ನು ಧರ್ಮಸ್ಥಳ ಗ್ರಾಮದ ನೇತ್ರಾವತಿಯಲ್ಲಿರುವ ಬಂಗ್ಲಗುಡ್ಡ ಪ್ರದೇಶಕ್ಕೆ ಕರೆದತಂದಿದ್ದಾರೆ. ಎಸ್ಪಿ ಸಿ.ಎ.ಸೈಮನ್ ನೇತೃತ್ವದಲ್ಲಿ ಇಲ್ಲಿ ಸ್ಥಳ ಮಹಜರು…
ಅಕ್ರಮ ಮದ್ಯ ಮಾರಾಟದ ಆರೋಪಿ ಬಂಧನ – ನ್ಯೂಸ್ ಫೋಕಸ್
ಬ್ರಹ್ಮಾವರ ತಾಲ್ಲೂಕಿನ ಹಿಲಿಯಾಣ ಗ್ರಾಮದ ಆಮ್ರಕಲ್ಲು ಪ್ರದೇಶದಲ್ಲಿನ ಸರ್ಕಾರಿ ಹಾದಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಸೆಪ್ಟೆಂಬರ್ 10, 2025 ರಂದು ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಶಂಕರನಾರಾಯಣ ಠಾಣಾ ಪೊಲೀಸರು, ಆರೋಪಿತ ನಾರಾಯಣ…
ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ – ನ್ಯೂಸ್ ಫೋಕಸ್
ಚಾರ್ಮಾಡಿ : ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ನೇತೃತ್ವದಲ್ಲಿ ಸಂಘಟನಾ ದೃಷ್ಟಿಯಿಂದ ಸೆ 09 ರಂದು ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಸಭಾಭವನದಲ್ಲಿ ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ ಶಕ್ತಿಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ ಸಭೆ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು…
ಧರ್ಮಸ್ಥಳ ವಿರುದ್ದ ಅಪಪ್ರಚಾರ,ಷಡ್ಯಂತ್ರ ಹಾಗೂ ಇದರ ಹಿಂದೆ ಇರುವ ಕಾಣದ ಕೈಗಳನ್ನು ಸೂಕ್ತ ತನಿಖೆಗೆ ಆಗ್ರಹಿಸಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾರವರನ್ನು ಭೇಟಿ ಮಾಡಿದ ರಾಜ್ಯ ಬಿಜೆಪಿ ನಾಯಕರ ನಿಯೋಗ – ನ್ಯೂಸ್ ಫೋಕಸ್
ಧರ್ಮಸ್ಥಳದ ಷಡ್ಯಂತರದ ಬಗ್ಗೆ ಸೆಪ್ಟೆಂಬರ್ 08 ರಂದು ಬಿಜೆಪಿ ರಾಜ್ಯ ಅಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಸೂಕ್ತವಾದ ಕಾನೂನು ಕ್ರಮ ಕೈಗೊಂಡು ಧರ್ಮಸ್ಥಳ ಕ್ಷೇತ್ರದ ಮೇಲೆ ಆಗುತ್ತಿರುವ ಷಡ್ಯಂತ್ರದ ಹಿಂದೆ…
ಸಾಂದೀಪನಿ ವಿದ್ಯಾಸಂಸ್ಥೆಯ ಅಜಿತೇಶ್ ಜೆ ಎನ್ ದಕ್ಷಿಣ ಭಾರತ ಪ್ರಾಂತ್ಯ ಮಟ್ಟಕ್ಕೆ ಆಯ್ಕೆ – ನ್ಯೂಸ್ ಫೋಕಸ್
ವಿದ್ಯಾಭಾರತಿ ಕರ್ನಾಟಕ ದ. ಕ ರಾಜ್ಯ ಮಟ್ಟದಜ್ಞಾನ – ವಿಜ್ಞಾನ ಮೇಳ- 2025-26ಮೈಸೂರು ನಲ್ಲಿ ಆಯೋಜಿಸಿದಕ್ಲೇ-ಮಾಡೆಲಿಂಗ್ ನಲ್ಲಿನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯವಿದ್ಯಾರ್ಥಿ ಅಜಿತೇಶ್ ಜೆ ಎನ್ ( ದಿ. ಜತ್ತಪ್ಪ ಗೌಡ ಹಾಗೂ ಶೀಮತಿ ಬೇಬಿ ರೇಖಾ ರವರ ಪುತ್ರ) ಇವರು ಪ್ರಥಮಸ್ಥಾನ…
ದೇಶಭಕ್ತಿ ಗೀತ ಗಾಯನ ಸ್ಪರ್ಧೆ ಯಲ್ಲಿ ಸಾಂದೀಪನಿ ವಿದ್ಯಾಸಂಸ್ಥೆ ಜಿಲ್ಲಾ ಮಟ್ಟಕ್ಕೆ ಆಯ್ಕೆ – ನ್ಯೂಸ್ ಫೋಕಸ್
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಪುತ್ತೂರು ಇದರ ವತಿಯಿಂದ ಜರುಗಿದ ಪುತ್ತೂರು ತಾಲೂಕು ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳು(ರಿ) ನರಿಮೊಗರು ಇಲ್ಲಿನ ಸ್ಕೌಟ್ಸ್ ವಿದ್ಯಾರ್ಥಿಗಳ ವಿಭಾಗವು ಪ್ರಥಮ ಸ್ಥಾನ ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳ…
ಕಡಬ: ಅಪಘಾತದಿಂದಾಗಿ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ ವಾಟರ್ ಬೆಡ್ಡ್ ವಿತರಣೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ನೆಟ್ಟಣ ಬಾಲಕೃಷ್ಣ ರವರಿಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ನೀಡಿರುವ ವಾಟರ್ ಬೆಡ್ಡ್ ವಿತರಣೆ ಮಾಡಲಾಯಿತು. ಬಿಳಿನೆಲೆ ಒಕ್ಕೂಟದ ಸ್ವಸಹಾಯ ಸಂಘದ ಸದಸ್ಶೆ ಚಂದ್ರಾವತಿಯವರ ಪತಿ ಬಾಲ ಕೃಷ್ಣ ರವರು…
ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್ ಆಯ್ಕೆ – ನ್ಯೂಸ್ ಫೋಕಸ್
ದೆಹಲಿ: ಉಪರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿಂದು ಎನ್ಡಿಎ ಅಭ್ಯರ್ಥಿ ಸಿ.ಪಿ ರಾಧಕೃಷ್ಣನ್ ಗೆಲುವು ಸಾಧಿಸಿದ್ದಾರೆ.ಜಗದೀಪ್ ಧನ್ಮರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಸಿ.ಪಿ ರಾಧಾಕೃಷ್ಣನ್ ಗೆಲುವು ಸಾಧಿಸಿದರು. ರಾಧಾಕೃಷ್ಣನ್ ಅವರು 452…
ಹಿಂ.ಜಾ.ವೇ.ಮುಖಂಡ ನರಸಿಂಹ ಮಾಣಿಗೆ ಜಾಮೀನು ಮಂಜೂರು – ನ್ಯೂಸ್ ಫೋಕಸ್
ಬೆಳ್ಳಂ ಬೆಳಿಗ್ಗೆ ಮೈಸೂರಿಗೆ ಹೊರಟಿದ್ದ ಪೆರ್ನೆಯ ಗೋವು ಕಳ್ಳತನದ ವಿರುದ್ಧ ಪ್ರತಿಭಟನೆ ನಡೆಸಿದ ಕಾರಣಕ್ಕೆ ಸಂಪಾಜೆಯಲ್ಲಿ ಬಂಧನಕ್ಕೆ ಬಳಗಾಗಿದ್ದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ನರಸಿಂಹ ಮಾಣಿಗೆ ಜಾಮಿನು ಮಂಜೂರಾಗಿದೆ. ಪೆರ್ನೆಯಲ್ಲಿ ನಡೆದ ಹಟ್ಟಿಯಲ್ಲಿ ದನ ಕದ್ದು ಮಾಂಸ ಮಾಡಿ…
ಚಾಮರಾಜನಗರ: ಹುಲಿ ಸೆರೆ ಹಿಡಯಲು ವಿಫಲರಾದ ಅರಣ್ಯ ಸಿಬ್ಬಂದಿಗಳನ್ನೇ ಹುಲಿಗೆ ಇಟ್ಟ ಬೋನ್ ನೊಳಗೆ ಕೂಡಿ ಹಾಕಿದ ಗ್ರಾಮಸ್ಥರು – ನ್ಯೂಸ್ ಫೋಕಸ್
ಚಾಮರಾಜನಗರ :ಗ್ರಾಮದ ಸಮೀಪ ಕಾಡಿನಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಸೆರೆ ಹಿಡಯಲು ವಿಫಲರಾದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ಸಿಬ್ಬಂದಿಗಳನ್ನು ಹುಲಿಗೆ ಇಟ್ಟ ಬೋನ್ ನೊಳಗೆ ಗ್ರಾಮಸ್ಥರೇ ಕೂಡಿ ಹಾಕಿದ ಅಪರೂಪದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲ್ಲೂಕಿನ…
ಬದುಕಲು ಸಾಧ್ಯವಾಗುತ್ತಿಲ್ಲ, ದಯಮಾಡಿ ನನಗೆ ವಿಷ ಕೊಡಿ: ಜಡ್ಜ್ ಮುಂದೆ ದರ್ಶನ್ ಮನವಿ -ನ್ಯೂಸ್ ಫೋಕಸ್
ಬೆಂಗಳೂರು: ದಯಮಾಡಿ ನನಗೆ ವಿಷ ಕೊಡಿ ಎಂದು ನಟ ದರ್ಶನ್ ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾಗಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಸೇರಿ ಇನ್ನಿತರ ಆರೋಪಿಗಳನ್ನು ರಾಜ್ಯದ ಇತರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡುವಂತೆ…
ಪುತ್ತೂರಿನಿಂದ ಮೈಸೂರು ಚಲೋಗೆ ತೆರಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸ್ ವಶಕ್ಕೆ – ನ್ಯೂಸ್ ಫೋಕಸ್
ಪುತ್ತೂರು: ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಖ್ಯಾತ ಸಾಹಿತಿ ಬಾನು ಮುಷ್ಕಾಕ್ ಪರ ಹಾಗೂ ವಿರೋಧ ವ್ಯಕ್ತಪಡಿಸಿ, ಇದೇ ಸೆ.9ರಂದು ಎರಡು ಸಂಘಟನೆಗಳು ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಪೊಲೀಸ್ ಇಲಾಖೆ ಬ್ರೇಕ್ ನೀಡಿದ್ದು, ಪುತ್ತೂರಿನಿಂದು ತೆರಳಿದ ನೂರಾರು ಕಾರ್ಯಕರ್ತರನ್ನು ಮೈಸೂರಿನಲ್ಲಿ…
ಹಿಂದೂ ಜಾಗರಣ ವೇದಿಕೆ ಮುಖಂಡ ನರಸಿಂಹ ಮಾಣಿ ಸಂಪಾಜೆಯಲ್ಲಿ ಪೊಲೀಸ್ ವಶಕ್ಕೆ – ನ್ಯೂಸ್ ಫೋಕಸ್
ಪುತ್ತೂರು ಸೆಪ್ಟೆಂಬರ್ 09: ಹಿಂದೂ ಜಾಗರಣ ವೇದಿಕೆ ಮಂಗಳೂರು ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರನ್ನು ಸಂಪಾಜೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಪೆರ್ನೆಯಲ್ಲಿ ನಡೆದ ಹಟ್ಟಿಯಲ್ಲಿ ದನ ಕದ್ದು ಮಾಂಸ ಮಾಡಿ ಸಾಗಾಟ ವಿಚಾರದಲ್ಲಿ ಸುಳ್ಳು ಸುದ್ಧಿ ಹರಡಿರುವ…
ಪೆರ್ನೆ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ ಗಣರಾಜ್ ಭಟ್ ಕೆದಿಲ ವಿರುದ್ದ ಪ್ರಕರಣ ದಾಖಲು – ನ್ಯೂಸ್ ಫೋಕಸ್
ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಕಡಂಬು ಕಾರ್ಲ ರಾಮಧ್ವಾರದ ಬಳಿ ಸೆ 6 ರಂದು “ಗೋ ಮಾತಾ ಸಂರಕ್ಷಣಾ ಚಳುವಳಿ ಪೆರ್ನೆ” ವತಿಯಿಂದ ಗೋ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಆರೋಪಿ ಗಣರಾಜ್ ಭಟ್ ಕೆದಿಲ ಭಾಗವಹಿಸಿ…
ಮಂಗಳೂರು: ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟ ಯುವತಿ – ನ್ಯೂಸ್ ಫೋಕಸ್
ಮಂಗಳೂರು: “ನನ್ನ ಮನೆಯವರೇ ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ, ಬೇರೆಯವರಿಂದ ನಿರೀಕ್ಷಿಸುವುದೇ ಸಾಧ್ಯವೇ?” ಎಂದು ಸಾಮಾಜಿಕ ಮಾಧ್ಯಮದಲ್ಲಿ ಸ್ಟೇಟಸ್ ಹಾಕಿ, ಯುವತಿಯೋರ್ವಳು ಗೋಲ್ಡನ್ ಚೇಂಬರ್ ಸಮೀಪದ ಕಟ್ಟಡದಿಂದ ಜಿಗಿದು ಪ್ರಾಣ ತ್ಯಾಗ ಮಾಡಿರುವ ಘಟನೆ ನಿನ್ನೆ ಮಧ್ಯಾಹ್ನ ನಡೆದಿದ್ದು, ಸ್ಥಳೀಯರ ಆಘಾತಕ್ಕೆ ಕಾರಣವಾಗಿದೆ.…
ಬೈಕ್ ಅಪಘಾತ – ರಸ್ತೆಗೆ ಬಿದ್ದ ಯುವತಿ ಮೇಲೆ ಹರಿದ ಬಸ್; 15 ದಿನದಲ್ಲಿ ಹಸೆಮಣೆ ಏರಬೇಕಾಗಿದ್ದವಳ ದುರಂತ ಅಂತ್ಯ – ನ್ಯೂಸ್ ಫೋಕಸ್
ಶಿವಮೊಗ್ಗ: ನಗರದ ಮಲವಗೊಪ್ಪದ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಇನ್ನೇನು 15 ದಿನಗಳಲ್ಲಿ ಹನೆಮಣೆ ಏರಬೇಕಿದ್ದ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಮೃತ ಯುವತಿಯನ್ನು ಕವಿತಾ (26) ಎಂದು ಗುರುತಿಸಲಾಗಿದೆ. ಆಕೆ ತನ್ನ ಸಹೋದರನ ಜೊತೆ ಬೈಕ್ನಲ್ಲಿ ಹೋಗುತ್ತಿದ್ದಾಗ ಈ ಆಫಘಾತ ಸಂಭವಿಸಿದೆ. ಇನ್ನೊಂದು…
ದ.ಕ.ಜಿ.ಪ ಸರಕಾರಿ ಪ್ರೌಢಶಾಲೆ ಪುತ್ತಿಲದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಉದ್ಘಾಟನೆ – ನ್ಯೂಸ್ ಫೋಕಸ್
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಗುರುವಾಯನಕೆರೆ ತಾಲೂಕು ತಣ್ಣೀರುಪಂತ ವಲಯ ದ.ಕ.ಜಿ.ಪ ಸರಕಾರಿ ಪ್ರೌಢಶಾಲೆ ಪುತ್ತಿಲದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಉದ್ಘಾಟನೆಯನ್ನು ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಜಯರಾಜ್ ಹೆಗ್ಡೆ ಪುತ್ತಿಲರವರು ನೆರವೇರಿಸಿ,…
ಸೆ. 9 ರಂದು ಉಪರಾಷ್ಟ್ರಪತಿ ಚುನಾವಣೆ – ನ್ಯೂಸ್ ಫೋಕಸ್
ದೆಹಲಿ : ಉಪರಾಷ್ಟ್ರಪತಿ ಚುನಾವಣೆಯು ಸೆ. 09ರಂದುನಡೆಯಲಿದೆ. ಎನ್ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಹಾಗೂ ಇಂಡಿ ಒಕ್ಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ ಮಾಜಿ ನ್ಯಾ. ಬಿ. ಸುದರ್ಶನ್ ರೆಡ್ಡಿ ಕಣದಲ್ಲಿದ್ದಾರೆ. ರಾಧಾಕೃಷ್ಣನ್ ತಮಿಳುನಾಡಿನವರಾಗಿದ್ದರೆ, ರೆಡ್ಡಿ ತೆಲಂಗಾಣದವರಾಗಿರುವುದರಿಂದ ಉಪರಾಷ್ಟ್ರಪತಿ ಸ್ಥಾನಕ್ಕೆ ದಕ್ಷಿಣದವರ ನಡುವೆಯೇ…
ವಿಟ್ಲ,ಉಪ್ಪಿನಂಗಡಿಗೆ ಅಗ್ನಿ ಶಾಮಕ ಠಾಣೆ ನಿರ್ಮಾಣ: 15 ದಿವಸದೊಳಗೆ ಜಾಗ ಮಂಜೂರಾತಿಗೆ ಶಾಸಕ ಅಶೋಕ್ ರೈ ಸೂಚನೆ – ನ್ಯೂಸ್ ಫೋಕಸ್
ಪುತ್ತೂರು: ವಿಟ್ಲ ಮತ್ತು ಉಪ್ಪಿನಂಗಡಿಗೆ ಅಗ್ನಿ ಶಾಮಕ ಠಾಣೆಯ ಅಗತ್ಯವಿದ್ದು ,ಈ ವಿಚಾರವನ್ನು ಅಧಿವೇಶನದಲ್ಲೂ ಸರಕಾರದ ಗಮನಕ್ಕೆ ತಂದಿದ್ದೇನೆ 15 ದಿವಸದೊಳಗೆ ಜಾಗ ಮಂಜೂರಾತಿಗೆ ಶಾಸಕ ಅಶೋಕ್ ರೈ ಕಂದಾಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಸೋಮವಾರ ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ…
ದಸರಾ ಕ್ರೀಡಾ ಕೂಟದ ಯೋಗಾಸನ ಸ್ಪರ್ಧೆಯಲ್ಲಿ ವಿಧಾತ್ ಮುಡೂರು ವಿಭಾಗ ಮಟ್ಟಕ್ಕೆ ಆಯ್ಕೆ – ನ್ಯೂಸ್ ಫೋಕಸ್
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಮಹಾನಗರ ಪಾಲಿಕೆ, ಮೈ ಭಾರತ್ ದಕ್ಷಿಣ ಕನ್ನಡ, ಜಿಲ್ಲಾ ಯುವಜನ ಒಕ್ಕೂಟ (ರಿ.) ಹಾಗೂ ವಿವಿಧ ಸಂಘ ಸಂಸ್ಥೆಗಳು ಇವರ ಸ0ಯುಕ್ತ…
ಕುಕ್ಕಳ, ಪಾರೆಂಕಿ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ – ನ್ಯೂಸ್ ಫೋಕಸ್
ಪಾರೆಂಕಿ :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷದ ಸಂಘಟನಾ ದೃಷ್ಟಿಯಿಂದ ಸೆ 07 ರಂದು ಪಾರೆಂಕಿ ಕುಕ್ಕಳ ಶಕ್ತಿಕೇಂದ್ರದ ಕಾರ್ಯಕರ್ತರ ಅಭ್ಯಾಸ ವರ್ಗ ಕಾರ್ಯಕ್ರಮ ಬಸವನಗುಡಿ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.ಪಕ್ಷದ ಹಿರಿಯ ಕಾರ್ಯಕರ್ತರಾದ ಪರಮೇಶ್ವರ ಗೌಡ ಹಟ್ಟತ್ತೋಡಿ ದೀಪ…
ನೆರಿಯ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ – ನ್ಯೂಸ್ ಫೋಕಸ್
ನೆರಿಯ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಸಪ್ಟೆಂಬರ್ 7 ರಂದು ನಡೆದ ನೆರಿಯ ಶಕ್ತಿ ಕೇಂದ್ರ ಮಟ್ಟದ ಅಭ್ಯಾಸ ವರ್ಗ ಸಭೆ ಸೇವಾ ಸಹಕಾರಿ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಹಿರಿಯ ಕಾರ್ಯಕರ್ತರಾದ…
ಬಂಟ್ವಾಳದಲ್ಲಿ ಅಕ್ರಮ ಧ್ವನಿವರ್ಧಕ ಬಳಕೆ ಆರೋಪ ಪ್ರಕರಣ ದಾಖಲು – ಪ್ರಕರಣದ ಬಗ್ಗೆ ಪೊಲೀಸ್ ಸ್ಪಷ್ಟನೆ – ನ್ಯೂಸ್ ಫೋಕಸ್
ಬಂಟ್ವಾಳ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಇಸಾಕ್ ಎಂಬವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಧಾರ್ಮಿಕ ಶಿಕ್ಷಣದ ಕಟ್ಟಡದಲ್ಲಿ ಅಕ್ರಮವಾಗಿ ಧ್ವನಿವರ್ಧಕ ಅಳವಡಿಸಿ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಶಬ್ದದಲ್ಲಿ ದಿನಕ್ಕೆ ಐದು ಬಾರಿಯಂತೆ ಅಜಾನ್ ಕೂಗುತ್ತಿರುವುದರಿಂದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಈ…
ಟೀಮ್ SMK ವತಿಯಿಂದ ಪ್ರಥಮ ವರ್ಷದ `ಹುಲಿವೇಷ ‘ದ ಆಮಂತ್ರಣ ಪತ್ರಿಕೆ ಬಿಡುಗಡೆ ಬಿಡುಗಡೆ – ನ್ಯೂಸ್ ಫೋಕಸ್
*ಟೀಮ್ SMK ವತಿಯಿಂದ ಪ್ರಥಮ ವರ್ಷದ `ಹುಲಿವೇಷ ‘ದ ಆಮಂತ್ರಣಪತ್ರಯನ್ನು ಕಬಕ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ದಿನಾಂಕ :22/09/2025ರಂದು ರಾತ್ರಿ 8 ಗಂಟೆಗೆ ಊದು ಪೂಜೆ ಹಾಗೂ 23/09/2025ರಂದು ಹುಲಿವೇಶ ಪ್ರದರ್ಶನ ಕಾರ್ಯಕ್ರಮ ಊರಿನ ಎಲ್ಲಾ ಹಿಂದೂ…
ಬೆಳ್ತಂಗಡಿ :ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ತ್ರೋಬಾಲ್ ಪಂದ್ಯಾಟದಲ್ಲಿ ಬೆಳ್ತಂಗಡಿ ತಂಡ ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆ – ನ್ಯೂಸ್ ಫೋಕಸ್
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಮಹಾನಗರ ಪಾಲಿಕೆ,MY Bharat ದಕ್ಷಿಣ ಕನ್ನಡ, ಜಿಲ್ಲಾ ಯುವಜನ ಒಕ್ಕೂಟ (ರಿ.)ಹಾಗೂ ವಿವಿಧ ಸಂಘ ಸಂಸ್ಥೆಗಳು ಇವುಗಳ ಸಂಯುಕ್ತ…
ಗ್ರಹಣದ ವೇಳೆ ಶುಭಕಾರ್ಯಗಳು ನಿಷಿದ್ಧ – ಸೂತಕದ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು?
ಪುತ್ತೂರು : ನಭೋಮಂಡಲದ ವಿಸ್ಮಯದ ಅದ್ಭುತ ಕಣ್ತುಂಬಿಕೊಳ್ಳಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಹುಣ್ಣಿಮೆ ಬೆಳಂದಿಗಳಲ್ಲಿ ಕೆಂಪು ಕೆಂಪಾಗಿ ಚಂದ್ರ ಬದಲಾಗಲಿದ್ದಾನೆ. ಹಾಗಿದ್ರೇ ಚಂದ್ರಗ್ರಹಣ (Lunar Eclipse) ಅವಧಿಯಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಗ್ರಹಣ ಯಾಕೆ ಸೂತಕ ಕಾಲ ಅಂತಾ ಕರೆಯುತ್ತಾರೆ?…
ಕುಂದಾಪುರ | ಪ್ರವಾಸಕ್ಕೆ ಬಂದಿದ್ದ ಬೆಂಗ್ಳೂರಿನ ಮೂವರು ಯುವಕರು ಸಮುದ್ರ ಪಾಲು – ನ್ಯೂಸ್ ಫೋಕಸ್
ಕಾರವಾರ: ಬೆಂಗಳೂರಿನಿಂದ ಕುಂದಾಪುರಕ್ಕೆ ಪ್ರವಾಸಕ್ಕೆ ಬಂದಿದ್ದ ಮೂವರು ಯುವಕರು ಸಮುದ್ರದ ಪಾಲಾಗಿದ್ದಾರೆ. ಕುಂದಾಪುರ ತಾಲೂಕಿನ ಗೋಪಾಡಿ ಚರ್ಕಿಕಡು ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಹತ್ತು ಜನ ಯುವಕರು ಬಂದಿದ್ದರು. ಇದರಲ್ಲಿ 7 ಜನ ಜನ ಯುವಕರು ಸಮುದ್ರದ ತೀರದಲ್ಲಿ ಆಟವಾಡುತ್ತಾ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬಗೆಹರಿಯದ ಕೆಂಪು ಕಲ್ಲು ಗಣಿಗಾರಿಕೆ ಸಮಸ್ಯೆ , ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಸೆ.16ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ: ಸಂಸದ ಕ್ಯಾ. ಚೌಟ – ನ್ಯೂಸ್ ಫೋಕಸ್
ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಭಾಗದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಸಂಬಂಧ ರಾಯಲ್ಟಿ ಹೆಚ್ಚಳ ಮಾಡಿ ಕಠಿಣ ನಿಯಮ ರೂಪಿಸಿರುವುದರಿಂದ ಎದುರಾಗಿರುವ ಗಂಭೀರ ಸಮಸ್ಯೆಗೆ ಇನ್ನು ಕೂಡ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಸೂಕ್ತ ಪರಿಹಾರ ದೊರೆಯದಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಘಟಕದಿಂದ…
ಅನುಕರಣೀಯ ವ್ಯಕ್ತಿತ್ವ -ಆದರ್ಶ ಮಹಿಳೆ -ಶ್ರೀಮತಿ ಗಾಯತ್ರಿ ನಾಗೇಶ್ -ಕೃತಿ ಬಿಡುಗಡೆ – ನ್ಯೂಸ್ ಫೋಕಸ್
ಕಾಸರಗೋಡು : ಕನ್ನಡ ಭವನದ ಸಂದ್ಯಾ ರಾಣಿ ಟೀಚರ್ ಸಾರತ್ಯದ ಕನ್ನಡ ಭವನ ಪ್ರಕಾಶನದ ಒಂಬತ್ತನೇ ಕೃತಿ “ಆದರ್ಶ ಮಹಿಳೆ ಗಾಯತ್ರಿ ನಾಗೇಶ್ “ಎಂಬ ವ್ಯಕ್ತಿ ಚಿತ್ರಣ ಕೃತಿ ಸೆಪ್ಟೆಂಬರ್ 9 ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನಲ್ಲಿ ಶರವು ದೇವಸ್ಥಾನ…
ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ :ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ-ನ್ಯೂಸ್ ಫೋಕಸ್
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಧಿಕಾರಿಗಳ ಕಛೇರಿ ಪುತ್ತೂರು ಮತ್ತು ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ಶಾಲೆ ನರಿಮೊಗರು ಪುತ್ತೂರು ಇದರ ಆಶ್ರಯದಲ್ಲಿ 2025-26 ನೇ ಸಾಲಿನ ಪುತ್ತೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ ಪ್ರಾಥಮಿಕ…
ಕಡಬ: ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವಿಧ್ಯಾರ್ಥಿಗಳು ವಿಧ್ಯಾರ್ಜನೆಯೊಂದಿಗೆ ನೈತಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಸಂಪನ್ಮೂಲ ವ್ಯಕ್ತಿ , ಶಿಕ್ಷಕ ಕಿಶಾನ್ ಸವಣೂರು ಅಭಿಪ್ರಾಯ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇಧಿಕೆಯ ಕಡಬ ತಾಲೂಕಿನ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆಯ ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉಧ್ಘಾಟಿಸಿದ ಶ್ರೀ ಸುಬ್ರಹ್ಮಣ್ಯ…
ಶ್ರೀ ಮಹಾದೇವಿ ದೇವಸ್ಥಾನ ಕಬಕ ಇದರ 56ನೇ ವರ್ಷದ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ – ನ್ಯೂಸ್ ಫೋಕಸ್
ಶ್ರೀ ಮಹಾದೇವಿ ದೇವಸ್ಥಾನ ಕಬಕ ಇದರ 56ನೇ ವರ್ಷದ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ದಿನಾಂಕ :22/09/2025 ರಿಂದ 02/10/2025ರ ವಿಜಯದಶಮಿಯ ವರೆಗೆ ದಿನನಿತ್ಯ ದೇವರಿಗೆ ವಿಶೇಷ ಹೂವಿನ ಪೂಜೆ, ದುರ್ಗಾ ಪೂಜೆ,…
ಕಳಿಯ, ನ್ಯಾಯತರ್ಪು ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ – ನ್ಯೂಸ್ ಫೋಕಸ್
ಕಳಿಯ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಸೆ 06 ರಂದು ನಡೆದ ಕಳಿಯ, ನ್ಯಾಯತರ್ಪು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ ಸಭೆ ಗೇರುಕಟ್ಟೆ ಸಿ ಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು…
ಕೊಕ್ಕಡ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ – ನ್ಯೂಸ್ ಫೋಕಸ್
ಕೊಕ್ಕಡ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಕೊಕ್ಕಡ ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ ಸಭೆ ಸೆ 06 ರಂದು ಶ್ರೀರಾಮ ಭಜನಾ ಮಂದಿರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪಕ್ಷದ ಹಿರಿಯ ಕಾರ್ಯಕರ್ತರಾದ…
ದ. ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು – ನ್ಯೂಸ್ ಫೋಕಸ್
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮ ಪಂಚಾಯಿತಿಗೆ ಇಂದು ಭೇಟಿ ನೀಡಿ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಇವರೊಂದಿಗೆ, ಕೇಂದ್ರ ಸರ್ಕಾರದ ಯೋಜನೆಯಾದ MGNREGA, ಪ್ರಧಾನ ಮಂತ್ರಿ ಆವಾಸ್ ಯೋಜನೆ,…
ಪೆರ್ನೆ ಗ್ರಾಮ ದೇಜಪ್ಪ ಮೂಲ್ಯರವರ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ – ನ್ಯೂಸ್ ಫೋಕಸ್
ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಪೆರ್ನೆ ಗ್ರಾಮದ ದೇಜಪ್ಪ ಮೂಲ್ಯರವರ ಹಟ್ಟಿಯಲ್ಲಿದ್ದ ದನವನ್ನು ಕದ್ದು ಅವರ ತೋಟದಲ್ಲಿ ಹತ್ಯೆಗೈದು ಸಾಗಾಟ ಮಾಡಿದ ದುರುಳರ ಹೇಯ ಕೃತ್ಯವನ್ನು ಒಪ್ಪಲಸಾಧ್ಯ,ದುಃಖತಪ್ತಾರಾಗಿರುವ ದೇಜಪ್ಪ ಮೂಲ್ಯರವರ ಮನೆಗೆ ಸೆ 06 ರಂದು ಭೇಟಿ ನೀಡಿ ಸಾಂತ್ವನ ತಿಳಿಸಿದರು.…
ವಿಟ್ಲ : ಲಂಚ ಸ್ವೀಕರಿಸುತ್ತಿದ್ದ ವೇಳೆ ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ನಫೀಸ ಮತ್ತು ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ – ನ್ಯೂಸ್ ಫೋಕಸ್
ಮಂಗಳೂರು: 2024 ರ ಆ.15ರಂದು ನಡೆದ ನವದೆಹಲಿಯ ಕೆಂಪುಕೋಟೆಯ ಸ್ವಾತಂತ್ರೋತ್ಸವ ಸಮಾರಂಭಕ್ಕೆ ಆಹ್ವಾನಿತರಾಗಿದ್ದ ಪೆರುವಾಯಿ ಗ್ರಾಪಂ ಅಧ್ಯಕ್ಷೆ ನಫೀಸಾ ಲಂಚ ಸ್ವೀಕಾರ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದೂರುದಾರರು ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದಲ್ಲಿ ತಮ್ಮ ಮಾವನ 1ಎಕರೆ ಕೃಷಿ ಜಮೀನಿನಲ್ಲಿ…
ಅಕ್ರಮ ಗೋ ಸಾಗಟ ಸಮಯ ಪೊಲೀಸರ ಹತ್ಯೆ ಮಾಡಲು ಪ್ರಯತ್ನಿಸಿದ ಆರೋಪಿಗಳ ಬಂಧನ – ನ್ಯೂಸ್ ಫೋಕಸ್
ದಿನಾಂಕ 05-08-2025 ರಂದು ಮುಂಜಾನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಹೆಜಮಾಡಿ ಟೋಲ್ ಗೇಟ್ ಬಳಿ ಗಂಗೊಳ್ಳಿ ಪೊಲೀಸ್ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿಯವರು ಅಲ್ಲಿನ ದನ ಕಳವು ಪ್ರಕರಣ ಒಂದರಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾಯುತ್ತಿರುವಾಗ ಉಡುಪಿ…
ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಮತ್ತು ಸೇವಾಭಾರತಿಯಿಂದ 2025 ರ “ಸೇವಾ ಶ್ರೇಷ್ಠ” ಪುರಸ್ಕಾರ – ನ್ಯೂಸ್ ಫೋಕಸ್
ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಉಚಿತ ವೈದ್ಯಕೀಯ ತಪಾಸಣೆ ಮಾಹಿತಿ ಹಾಗೂ ಮನೋರಂಜನಾ ಕಾರ್ಯಕ್ರಮದ ಉದ್ಘಾಟನ ಸಮಾರಂಭವು ಸಪ್ಟೆಂಬರ್ 05 ರಂದು ಸೌತಡ್ಕ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೇವಾಧಾಮದಲ್ಲಿ ನಡೆಯಿತು. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಮತ್ತು ಪ್ರಗತಿಪರ…
ಖೋ ಖೋ ಪಂದ್ಯಾಟದಲ್ಲಿ ಸಾಂದೀಪನಿ ತಾಲೂಕು ಮಟ್ಟಕ್ಕೆ ಆಯ್ಕೆ – ನ್ಯೂಸ್ ಫೋಕಸ್
ಸವಣೂರು ನಲ್ಲಿ ಜರುಗಿದ ವಲಯಮಟ್ಟದ ಖೋ ಖೋ ಪಂದ್ಯಾಟದಲ್ಲಿನಮ್ಮ ಶಾಲಾ ವಿದ್ಯಾರ್ಥಿಗಳಾದಕುಶಾಲ್ ಗೌಡ, ಕುಶಾಲ್ ಕುಮಾರ್,ವಿಶಾಲ್ ಗೌಡ, ಕುಶಿಕ್ ಗೌಡ, ಪ್ರಣವ್, ಲೇಖನ್, ಯಶಮಿತ್ ,ಗುರುದೀಪ್, ವಿಶ್ವಾಸ, ಈರಪ್ಪ, ವಿನೀತ್, ಕೌಶಿಕ್, ಅಕುಲ್ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ…
ಪುತ್ತೂರು: ಪಿಲಿ ರಾಧಣ್ಣ ಎಂದೇ ಹೆಸರುವಾಸಿಯಾಗಿದ್ದ ರಾಧಾಕೃಷ್ಣ ಶೆಟ್ಟಿ ನಿಧನ – ನ್ಯೂಸ್ ಫೋಕಸ್
ಪುತ್ತೂರು: ಪಿಲಿ ರಾಧಣ್ಣ ಎಂದೇ ಹೆಸರುವಾಸಿಯಾಗಿದ್ದ ರಾಧಾಕೃಷ್ಣ ಶೆಟ್ಟಿ(60) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ನಿನ್ನೆ ಸಂಜೆ ವೇಳೆಗೆ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿತ್ತು ಆದರೆ ಇಂದು ಮುಂಜಾನೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು…
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗೋ ಹತ್ಯೆ ಪ್ರಕರಣ ಆರೋಪಿಗಳಿಗೆ ಕಠಿಣ ಶಿಕ್ಷೆ, ಗಡಿಪಾರು ಮಾಡುವಂತೆ ಪುತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆ ಆಗ್ರಹ – ನ್ಯೂಸ್ ಫೋಕಸ್
ಪುತ್ತೂರು: ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಕಡಂಬು ಎಂಬಲ್ಲಿ ಗೋವನ್ನು ಕದ್ದೊಯ್ದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಿ, ಅವರನ್ನು ಗಡಿಪಾರು ಮಾಡಬೇಕು. ಗೋವನ್ನು ಕಳೆದು ಕೊಂಡ ಸಂತ್ರಸ್ತರಿಗೆ ಗರಿಷ್ಟ ಪರಿಹಾರ ಒದಗಿಸಬೇಕು. ಜೊತೆಗೆ ಆರೋಪಿಗಳನ್ನು 24 ಗಂಟೆಯೊಳಗೆ…
ಉಜಿರೆಯಲ್ಲಿ ಲಾರಿ ಹಾಗೂ ಬೈಕ್ ಅಪಘಾತ – ನ್ಯೂಸ್ ಫೋಕಸ್
ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ಉಜಿರೆ – ಚಾರ್ಮಾಡಿ ರಸ್ತೆಯಲ್ಲಿ ಬುಧವಾರ ಲಾರಿ ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದಾರೆ. ಮೃತರನ್ನು ಕಡಿರುದ್ಯಾವರ ಗ್ರಾಮದ ಮಲ್ಲಡ್ಕ ಸಮೀಪದ ನಿವಾಸಿ ಪುರುಷೋತ್ತಮ ಯಾನೆ…
ಮಂಗಳೂರು: ಚಿನ್ನಯ್ಯನ ಕಸ್ಟಡಿ ನಾಳೆಗೆ ಅಂತ್ಯ- ಬೆಳ್ತಂಗಡಿ ಠಾಣೆಗೆ ಆಗಮಿಸಿದ ಪ್ರಣಬ್ ಮೊಹಂತಿ – ನ್ಯೂಸ್ ಫೋಕಸ್
ಮಂಗಳೂರು: ಬೆಳ್ತಂಗಡಿ ಠಾಣೆಗೆ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಶುಕ್ರವಾರ ಬೆಳಗ್ಗೆ ಆಗಮಿಸಿದ್ದಾರೆ. ನಾಳೆ ಸಿ.ಎಸ್. ಚಿನ್ನಯ್ಯನ ಕಸ್ಟಡಿ ಅವಧಿ ಅಂತ್ಯಗೊಂಡಿದೆ. ಇದರೊಂದಿಗೆ ಜಯಂತ್ ಹಾಗೂ ಗಿರೀಶ್ ಮಟ್ಟಣ್ಣನವರ್ ಅವರ ವಿಚಾರಣೆಯೂ ನಡೆಯುತ್ತಿದೆ. ಆದ್ದರಿಂದ ಸದ್ಯದ ತನಿಖೆಯ ಪ್ರಗತಿಯ ಬಗ್ಗೆ ಮಾಹಿತಿ…
ಪೊಲೀಸರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ – ನ್ಯೂಸ್ ಫೋಕಸ್
ಮಂಗಳೂರು: ಗಸ್ತು ಕರ್ತವ್ಯದಲ್ಲಿದ್ದ ಕಂಕನಾಡಿ ನಗರ ಠಾಣೆ ಎಎಸ್ಐ ಅಶೋಕ್ ಕೆ. ಮತ್ತು ಸಿಬಂದಿ ಸುರೇಂದ್ರ ಕುಮಾರ್ ಅವರಿಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಹಾಸನ ಜಿಲ್ಲೆ ಸಕಲೇಶಪುರದ ಹಲಸೋಗೆ ಗ್ರಾಮದ ನಿವಾಸಿ…
