

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಮಹಾನಗರ ಪಾಲಿಕೆ, ಮೈ ಭಾರತ್ ದಕ್ಷಿಣ ಕನ್ನಡ, ಜಿಲ್ಲಾ ಯುವಜನ ಒಕ್ಕೂಟ (ರಿ.) ಹಾಗೂ ವಿವಿಧ ಸಂಘ ಸಂಸ್ಥೆಗಳು ಇವರ ಸ0ಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ 2025-26. ಯೋಗಾಸನ ಸ್ಪರ್ಧೆಯನ್ನು 07 ಸೆಪ್ಟೆಂಬರ್ 2025 ರಂದು ಮಂಗಳ ಕ್ರೀಡಾಂಗಣ, ಮಂಗಳೂರು ನಲ್ಲಿ ಆಯೋಜಿಸಲಾಗಿತ್ತು.

ಸಾಂಪ್ರದಾಯಕ ಮತ್ತು ಕಲಾತ್ಮಕ ವೈಯಕ್ತಿಕ ವಿಭಾಗದಲ್ಲಿ ವಿಧಾತ್ ಗೌಡ. ಎಂ. ಟಿ. ಚಿನ್ನದ ಪದಕ ದೊಂದಿಗೆ ವಿಭಾಗ ಮಟ್ಟಕ್ಕೆ ಆಯ್ಕೆ.
ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿನೋಬನಗರ ಜಾಲ್ಸುರು ನಲ್ಲಿ 04 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಅಜ್ಜಾವರ ಗ್ರಾಮದ ಶ್ರೀಯುತ ತೀರ್ಥರಾಮ ಮುಡೂರು ಮತ್ತು ಪೂರ್ಣಿಮಾ. ಎ.ಜೆ. ರವರ ಪುತ್ರ.
ನಿರಂತರ ಯೋಗ ಕೇಂದ್ರ ಸುಳ್ಯದಲ್ಲಿ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.


