ಕಡಬ, ಮೇ 22: ಕಡಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡಿರುವ ಎರಡು ವಾಹನಗಳನ್ನು ಬಹಿರಂಗ ಹರಾಜು ಮೂಲಕ ಮಾರಾಟ ಮಾಡಲು ಕಡಬ ಪೊಲೀಸ್ ಠಾಣೆ ಪ್ರಕಟಣೆ ಹೊರಡಿಸಿದೆ.

ಹರಾಜು ಪ್ರಕ್ರಿಯೆಯು ಮೇ 27, 2026ರಂದು ಬೆಳಿಗ್ಗೆ 11 ಗಂಟೆಗೆ ಕಡಬ ಪೊಲೀಸ್ ಠಾಣೆ ಆವರಣದಲ್ಲಿ ನಡೆಯಲಿದ್ದು, ಸಾರ್ವಜನಿಕರು ಹಾಗೂ ಆಸಕ್ತರು ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹರಾಜಿಗೆ ಒಳಪಡಿಸಲಾದ ವಾಹನಗಳ ವಿವರಗಳು ಈ ಕೆಳಗಿನಂತಿವೆ:
KA 03 MQ 2418 – ಹ್ಯುಂಡೈ ವರ್ಣಾ ಕಾರು
KA 21 U 6224 – ಹೀರೋ ಪ್ಯಾಷನ್ ಪ್ರೋ ಬೈಕ್
ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವವರು ನಿಗದಿತ ದಿನ ಹಾಗೂ ಸಮಯಕ್ಕೆ ಠಾಣೆಗೆ ಹಾಜರಾಗುವಂತೆ ಕಡಬ ಪೊಲೀಸ್ ಠಾಣೆಯ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.