ಮಂಗಳೂರು ನಗರದ ಲಾಲ್‌ಬಾಗ್‌ನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ಪಾದಚಾರಿ ಮಾರ್ಗದ ಬದಿಯಲ್ಲೇ ಕಡಿಮೆ ಎತ್ತರದಲ್ಲಿ ಅಳವಡಿಸಲಾಗಿರುವ ಟ್ರಾನ್ಸಾರ್ಮ‌ರ್ ಹಾಗೂ ಅದಕ್ಕೆ ಸಂಬಧಿಸಿದ ಹೈ ವೋಲ್ವೇಜ್, ಲೋ ವೋಲ್ವೇಜ್ ವಿದ್ಯುತ್‌ ಕೇಬಲ್‌ಗಳು ಇದ್ದು ಇದು ಅಪಾಯಕ್ಕೆ ಆಹ್ವಾನವನ್ನು ನೀಡುವಂತಿವೆ.

ಮುಂಗಾರು ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಅವಘಡ ಸಂಭವಿಸುವ ಭೀತಿ ಹೆಚ್ಚಿದ್ದು ಪ್ರತಿನಿತ್ಯ ಆ ಭಾಗದಲ್ಲಿ ಸಂಚರಿಸುವ ಪಾದಚಾರಿಗಳು ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ಪ್ರಶ್ನಾರ್ಥಕವಾಗಿದೆ. ಅಪಾಯದ ಸೂಚನಾ ಫಲಕಗಳು ಅಥವಾ ಮುನ್ನೆಚ್ಚರಿಕಾ ವ್ಯವಸ್ಥೆಗಳು ಅಲ್ಲಿ ಇಲ್ಲದಿರುವುದು ಅಪಾಯಕ್ಕೆ ಆಸ್ಪದವನ್ನು ನೀಡುತ್ತದೆ. ವಿದ್ಯುತ್ ಸಾಧನಗಳು ಪಾದಚಾರಿ ಮಾರ್ಗಕ್ಕೆ ಅತೀ ಸಮೀಪದಲ್ಲಿರುವುದರಿಂದ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ.

ತಕ್ಷಣವೇ ಸಂಬಂಧಿತ ಇಲಾಖೆ ಹಾಗೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮುಂದೆ ನಡೆಯಬಹುದಾದ ಅಪಾಯವನ್ನು ತಡೆಗಟ್ಟಬೇಕು ಎಂಬುದು ಸಾರ್ವಜನಿಕ ಕಳಕಳಿಯಾಗಿದೆ.