

ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ವಾಟ್ಸಪ್‌ನಲ್ಲಿ ವಾಯ್ಸ್ ಮೆಸೇಜ್ ಕಳಿಸಿ ಬೆದರಿಕೆ ಹಾಕಲಾಗಿದೆ. ದುಷ್ಕರ್ಮಿಗಳು ಕೋಟ್ಯಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬೆದರಿಕೆ ಬಂದ ನಂತರ ಮುಂಬೈ ಪೊಲೀಸರಿಗೆ ಅವರು ಮಾಹಿತಿ ನೀಡಿದ್ದು, ಅವರ ಮನೆಯ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ. ಬೆದರಿಕೆ ಸಂದೇಶ ಕಳಿಸಿದವರು ತಮ್ಮನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನವರು ಎಂದು ಹೇಳಿಕೊಂಡಿದ್ದಾರೆ.

ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದು, ವಾಯ್ಸ್ ಮೆಸೇಜ್‌ನಲ್ಲಿರೋ ಧ್ವನಿ ಯಾರದ್ದೂ ಎಂದು ಪತ್ತೆಹಚ್ಚಲು ಮುಂದಾಗಿದ್ದಾರೆ. ಬೆದರಿಕೆ ಬಂದ ನಂತರ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿ ವಾಸಿಸುವ ಹೌಸಿಂಗ್ ಸೊಸೈಟಿಯ ನಿವಾಸದ ಬಳಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೌಸಿಂಗ್ ಸೊಸೈಟಿ ಆಡಳಿತ ಮಂಡಳಿಯು ಪೊಲೀಸ್ ಸಿಬ್ಬಂದಿ ಮತ್ತು ಖಾಸಗಿ ಅಂಗರಕ್ಷಕರ ನಿಯೋಜನೆಯ ಬಗ್ಗೆ ಸ್ಪಷ್ಟೀಕರಣ ಕೋರಿ ಪೊಲೀಸರಿಗೆ ಪತ್ರ ಬರೆದಿದೆ. ಇದರಿಂದ ಹಲವಾರು ನಿವಾಸಿಗಳು ಅನಾನುಕೂಲತೆ ಉಂಟಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.


