ಚಿಕ್ಕಬಳ್ಳಾಪುರ: ಕೆಂಪು ಗುಲಾಬಿ ಕಂಡ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಇನ್ನೂ ಫೆಬ್ರವರಿ 14 ಪ್ರೆಮಿಗಳ ದಿನ. ಪ್ರೀತಿಯ ಹುಡುಗಿಯನ್ನು ಓಲೈಸಿಕೊಳ್ಳಲು, ಗೆಳೆಯನ ಅಪ್ಪುಗೆ ಬಯಸುವ ಪ್ರತಿಯೊಂದು ಮನಸ್ಸು ಮೊದಲು ಕೊಡೋದು ಈ ಕೆಂಪು ಗುಲಾಬಿಯನ್ನೇ. ಇದೇ ಕಾರಣಕ್ಕೆ ಕಲರ್‌ಫುಲ್‌ ರೆಡ್‌ರೋಸ್‌ಗಳಿಎಗ ಸಖತ್ ಡಿಮ್ಯಾಂಡ್.

ತಲಾ ಒಂದೊಂದು ಹೂಗಳಿಗೆ 20 ರೂಪಾಯಿ ಕೊಟ್ಟು ಹೂ ವರ್ತಕರು ಹೂ ಖರೀದಿ ಮಾಡಲು ಮುಗಿಬಿದ್ದಿದ್ದಾರೆ. ಇತ್ತ ರೆಡ್ ರೋಸ್‌ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಬೀರಿದೆ.