Tamanvi Silk
Darbe Salon
Mahalingeshwara Car Air Condition

ಸುಳ್ಯ, ಮೇ 30: ಸುಳ್ಯ ಪೊಲೀಸ್ ಠಾಣೆಗೆ ನೂತನ ಹೆಡ್ ಕಾನ್ಸ್ಟೇಬಲ್ ಆಗಿ ಸ್ಕರಿಯ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Out Look Fashion
Screenshot

ಸುಮಾರು 29 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಕರಿಯ ಅವರು 2005ರಿಂದ 2011ರವರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಮಂಗಳೂರು ಪೂರ್ವ ಪೊಲೀಸ್ ಠಾಣೆ, ಪುತ್ತೂರು ಸಂಚಾರ ಪೊಲೀಸ್ ಠಾಣೆ, ಡಿ.ಸಿ.ಬಿ ಮಂಗಳೂರು ಹಾಗೂ ಪುತ್ತೂರು ನಗರ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

Jaya Refrigeration and Air Condition

ಇದೀಗ ವರ್ಗಾವಣೆಗೊಂಡು ಮತ್ತೆ ಸುಳ್ಯ ಪೊಲೀಸ್ ಠಾಣೆಗೆ ಆಗಮಿಸಿರುವ ಸ್ಕರಿಯ ಅವರ ಸೇವಾನುಭವವು ಠಾಣೆಯ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಬಲ ತುಂಬಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಕಡಬ ತಾಲೂಕಿನ ಬಲ್ಯ ಗ್ರಾಮದ ಮಾತ್ರಡಿ ಮನೆ ನಿವಾಸಿಗಳಾದ ದಿವಂಗತ ಎಂ.ಜಿ. ಅಬ್ರಾಹಂ ಹಾಗೂ ದಿವಂಗತ ಸಾರಮ್ಮ ಅಬ್ರಾಹಂ ದಂಪತಿಯ ಪುತ್ರರಾಗಿರುವ ಸ್ಕರಿಯ ಅವರು ತಮ್ಮ ಸುದೀರ್ಘ ಪೊಲೀಸ್ ಸೇವೆಯ ಮೂಲಕ ಗುರುತಿಸಿಕೊಂಡಿದ್ದಾರೆ.