Tamanvi Silk
Darbe Salon
Mahalingeshwara Car Air Condition

ಮಂಗಳೂರು, ಮೇ. 30: ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ತಾಯಿ ಮತ್ತು ಮಗುವನ್ನು ಹಿಂದಿನಿಂದ ಬರುತ್ತಿದ್ದ ಇನ್ನೊಂದು ಸಿಟಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಅಸ್ಪತ್ರೆಗೆ ಸಾಗಿಸಲು ಸಹಾಯ ಮಾಡುವ ಮೂಲಕ ಹೃದಯಸ್ಪರ್ಶಿ ಮಾನವೀಯತೆ ಮೆರೆದಿದ್ದಾರೆ.

Out Look Fashion

ಕಾವೂರಿನಿಂದ ಕುಂಜತ್‌ಬೈಲ್‌ಗೆ ರೂಟ್ ನಂ. 13B ನಲ್ಲಿ ಪ್ರಯಾಣಿಸುತ್ತಿದ್ದ ಮಾಸ್ಟರ್ ಬಸ್‌ ಚಾಲಕ ದಯಾನಂದ್‌ ಮತ್ತು ಕಂಡಕ್ಟರ್ ಸಂದೀಪ್ ಮೆರೆದು ಸಮಾಜಕ್ಕೆ ಮಾದರಿಯಾಗಿದ್ದಾರೆ

Jaya Refrigeration and Air Condition

ಮರಕಡ ಜಂಕ್ಷನ್ ಬಳಿ, ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಬಸ್ಸಿನಿಂದ ತಾಯಿ ಮತ್ತು ಮಗು ಬಿದ್ದಿದ್ದಾರೆ ಎಂದು ವರದಿಯಾಗಿದೆ. ಬಿದ್ದ ನಂತರ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ, ಸಾರ್ವಜನಿಕರು ಆತಂಕಗೊಂಡಿದ್ದರು. ಇದೇ ವೇಳೆ, ಸ್ಥಳದಲ್ಲಿದ್ದ ಇನ್ನೊಂದು ಖಾಸಗಿ ಬಸ್ ನ ದಯಾನಂದ ಮತ್ತು ಸಂದೀಪ್ ಗಮನಿಸಿ, ತಕ್ಷಣವೇ ತಮ್ಮ ಬಸ್ ನಿಲ್ಲಿಸಿ ಗಾಯಗೊಂಡ ತಾಯಿ ಮತ್ತು ಮಗುವಿಗೆ ಸಹಾಯ ಮಾಡಲು ಧಾವಿಸಿದ್ದಾರೆ.

ತಾಯಿ-ಮಗುವನ್ನು ಸ್ಥಳದಲ್ಲೇ ಉಪಚರಿಸಿ, ತಕ್ಷಣ ತಮ್ಮ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಇಳಿಯುವಂತೆ ಹೇಳಿದರು. ನಂತರ ಗಾಯಗೊಂಡ ಇಬ್ಬರನ್ನು ತಕ್ಷಣವೇ ವೈದ್ಯಕೀಯ ಚಿಕಿತ್ಸೆಗಾಗಿ ಅದೇ ಬಸ್‌ನಲ್ಲಿ ನೇರವಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ತಾಯಿ-ಮಗುವಿನ ಆರೈಕೆಗಾಗಿ ತಮ್ಮ ಬಸ್ಸನ್ನೇ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

ಬಸ್ ಚಾಲಕ, ನಿರ್ವಾಹಕರ ಸಕಾಲಿಕ ಮಾನವೀಯ ಕಾರ್ಯವನ್ನು ಸಾರ್ವಜನಿಕರು ವ್ಯಾಪಕವಾಗಿ ಮೆಚ್ಚಿಕೊಂಡಿದ್ದಾರೆ.