ಬೆಳ್ತಂಗಡಿ : ಮೇ 17ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ವಿಷುಕಣಿ 5.0–2026 ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಅಂತರಾಷ್ಟ್ರೀಯ ಕಲಾವಿದರ ಸಾಂಸ್ಕೃತಿಕ ಪ್ರದರ್ಶನ ಹಾಗೂ 33 ಬಗೆಯ ಕೇರಳ ಮಾದರಿಯ ವಿಶೇಷ ಖಾದ್ಯಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ಬೆಳ್ತಂಗಡಿ ತಾಲೂಕಿನ ಹಿಂದೂ ಮಲಯಾಳಿ ಬಂಧುಗಳ ಭಾರೀ ಭಾಗವಹಿಸುವಿಕೆಯಲ್ಲಿ ನಡೆದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ ಹಿನ್ನೆಲೆ, ಕಾರ್ಯಕ್ರಮದ ಆಯೋಜಕರಾದ ಶಾಸಕ ಹರೀಶ್ ಪೂಂಜ ಅವರಿಗೆ ಹಿಂದೂ ಮಲಯಾಳಿ ಬಂಧುಗಳ ಪರವಾಗಿ ಹಾಗೂ ವಿಷುಕಣಿ ಆಚರಣಾ ಸಮಿತಿ ಬೆಳ್ತಂಗಡಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಕ್ಷರ ಅನಿಲ್ ಕುಮಾರ್, ರಮ್ಯಾ, ಒನ್ ಗ್ರಾಮ್ ಗೋಲ್ಡ್ ಮಾಲಕರಾದ ಪ್ರಸಾದ್ ಬಿ.ಎಸ್., ಬಾಲಕೃಷ್ಣ, ನೈಮಿಶಾ, ವುಡ್ಹೌಸ್ ಮಾಲಕರಾದ ಅನಿಜಿತ್, ದಿವಿನೇಶ್ ಚಾರ್ಮಾಡಿ, ಅಖಿಲ್ ಸುರೇಶ್, ಸಚಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.