ನವದೆಹಲಿ: ಪೆಟ್ರೋಲ್‌, ಡೀಸೆಲ್‌ (Petrol, Diesel) ಬಳಿಕ ಇದೀಗ ದೆಹಲಿಯಲ್ಲಿ ಸಿಎನ್‌ಜಿ ದರವನ್ನು (CNG Rate) ಪ್ರತಿ ಕೆಜಿಗೆ 2 ರೂ.ಗಳಷ್ಟು ಏರಿಕೆ ಮಾಡಲಾಗಿದೆ.

ದೆಹಲಿಯಲ್ಲಿ (Delhi) ಇಂದು ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರುವಂತೆ ಸಂಕುಚಿತ ನೈಸರ್ಗಿಕ ಅನಿಲ (CNG) ಬೆಲೆಯನ್ನು 2 ರೂ. ಗಳಷ್ಟು ಹೆಚ್ಚಿಸಲಾಗಿದೆ.ಹೊಸ ಬೆಲೆಯ ಅನ್ವಯ ದೆಹಲಿಯಲ್ಲಿ ಪ್ರತಿ ಕೆಜಿ ಸಿಎನ್‌ಜಿ ಬೆಲೆ 8.09 ರೂ.ಗಳಿಗೆ ತಲುಪಿದೆ. ಜಾಗತಿಕ ಮತ್ತು ತೈಲ ಬಿಕ್ಕಟ್ಟಿನಿಂದ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ನಡುವೆಯೇ ಸಿಎನ್‌ಜಿ ಬೆಲೆ ಹೆಚ್ಚಳ ಕಂಡುಬಂದಿದೆ.

ಇತ್ತೀಚಿನ ದಿನಗಳಲ್ಲಿ ಸಿಎನ್‌ಜಿ ಬೆಲೆಗಳನ್ನು ಎರಡು ಬಾರಿ ಹೆಚ್ಚಿಸಲಾಗಿದೆ. ಒಟ್ಟಾರೆಯಾಗಿ, ಕಳೆದ 12 ದಿನಗಳಲ್ಲಿ ಪ್ರತಿ ಕೆಜಿಗೆ 6 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. ಒಟ್ಟಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಿಕ ಸಿಎನ್‌ಜಿ ಈಗ ಸಾಮಾನ್ಯ ಜನರ ಜೇಬಿನ ಕತ್ತರಿ ಹಾಕುತ್ತಿದೆ.