


ಲಕ್ನೋ: ಈದ್ ಅಲ್-ಅಧಾ ದಿನದಂದು ರಸ್ತೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದು ಅಥವಾ ‘ಕುರ್ಬಾನಿ’ (ಪ್ರಾಣಿ ಬಲಿ)ಗೆ ಅವಕಾಶ ನೀಡದಂತೆ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಆದೇಶಿಸಿದ್ದಾರೆ. ಜೊತೆಗೆ ಬಕ್ರೀದ್ (Bakrid) ಹಬ್ಬಕ್ಕೆ ಸಂಬಂಧಿಸಿದಂತೆ 10 ಕಟ್ಟುನಿಟ್ಟಿನ ನಿರ್ದೇಶನಗಳನ್ನು ಹೊರಡಿಸಿದ್ದಾರೆ.
ಮಸೀದಿ ಆವರಣದೊಳಗೆ ಮಾತ್ರ ನಮಾಜ್ ಮಾಡಬೇಕು. ತೆರೆದ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ರಸ್ತೆಗಳಲ್ಲಿ ಪ್ರಾರ್ಥನೆಗಳನ್ನು ನಡೆಸಬಾರದು. ಪ್ರಾರ್ಥನೆ ಸಲ್ಲಿಸಲು ರಸ್ತೆಗಳನ್ನು ನಿರ್ಬಂಧಿಸಬಾರದು ಮತ್ತು ಭಕ್ತರ ಸಂಖ್ಯೆ ಹೆಚ್ಚಿದ್ದರೆ, ಪಾಳಿಯಲ್ಲಿ ಪ್ರಾರ್ಥನೆಗಳನ್ನು ನಡೆಸಬೇಕೆಂದು ನಿರ್ದೇಶಿಸಲಾಗಿದೆ.


ತೆರೆದ ಪ್ರದೇಶಗಳಲ್ಲಿ ಯಾವುದೇ ಪ್ರಾಣಿ ಬಲಿ ನೀಡಬಾರದು ಮತ್ತು ನಿಷೇಧಿತ ಪ್ರಾಣಿಗಳ ಬಲಿ ತಡೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರಾಣಿ ಬಲಿಯ ನಂತರ ಯಾವುದೇ ಅನೈರ್ಮಲ್ಯದ ಪರಿಸ್ಥಿತಿಗಳು ಉದ್ಭವಿಸದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಸರಿಯಾದ ನೈರ್ಮಲ್ಯ ವ್ಯವಸ್ಥೆಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಅದೇಶಿಸಿದ್ದಾರೆ.
