ಕಲಬುರಗಿ: ಇಲ್ಲಿನ ಪಂಡಿತ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಗ್‌ಬಾಸ್ (Bigg Boss) ಸ್ಪರ್ಧಿ ಕಾವ್ಯಾ (Kavya Shaiva) ಅವರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಾರ್ಯಕ್ರಮದ ವೇಳೆ ಆಯೋಜಕರು ಅಭಿಮಾನಿಗಳ ಮೇಲೆ ಕೈ ಮಾಡಿದ ಹಿನ್ನೆಲೆಯಲ್ಲಿ ಬೇಸರಗೊಂಡ ಕಾವ್ಯಾ, ಕಾರ್ಯಕ್ರಮವನ್ನು ಅರ್ಧದಲ್ಲೇ ಬಿಟ್ಟು ತೆರಳಿದ್ದಾರೆ.

ಕಾವ್ಯಾ ಅವರು ನಟಿ ಹಾಗೂ ಕಿರುತರೆ ಕಲಾವಿದೆಯಾಗಿದ್ದು, ಬಿಗ್‌ಬಾಸ್ ಸೀಸನ್ 12ರ (Bigg Boss Season 12) ಬಳಿಕ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅವರನ್ನು ಹಲವು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಆಹ್ವಾನಿಸಲಾಗುತ್ತಿದೆ. ಇತ್ತೀಚೆಗೆ ಅವರು ಭಾಗವಹಿಸಿದ್ದ ಕಲಬುರಗಿಯ ಖಾಸಗಿ ಕಾರ್ಯಕ್ರಮದಲ್ಲಿ ಹೈಡ್ರಾಮಾ ನಡೆದಿದೆ.