ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರೇ ಅಧಿಕೃತವಾಗಿ ಘೋಷಣೆ ಆಗುವುದು ಬಹುತೇಕ ಫಿಕ್ಸ್ ಆಗಿದೆ. ಆಂತರಿಕ ಅಭಿಪ್ರಾಯ ಸಂಗ್ರಹದಲ್ಲೂ ವಿಜಯೇಂದ್ರ ಪರವಾದ ಒಲವು ವ್ಯಕ್ತವಾಗಿದೆ. ಕೆಲವರ ಭಿನ್ನಾಭಿಪ್ರಾಯದ ಹೊರತಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿಜಯೇಂದ್ರ ಅವರೇ ಸಾರಥಿ ಆಗಲಿ ಎಂಬ ಬೆಂಬಲ ವ್ಯಕ್ತವಾಗಿದೆ. ಈ ಆಂತರಿಕ ವರದಿ ರಾಷ್ಟ್ರೀಯ ಅಧ್ಯಕ್ಷರಿಗೆ ಸಲ್ಲಿಕೆ ಆಗಲಿದೆ. ದೆಹಲಿ ಮಟ್ಟದಲ್ಲಿ ಚರ್ಚೆ ನಡೆದ ಬಳಿಕ ಅಧಿಕೃತ ಘೋಷಣೆಯೂ ಹೊರಬೀಳಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಘೋಷಣೆ ವಿಚಾರವಾಗಿ ಗೊಂದಲದ ವಾತಾವರಣ ಇತ್ತು. ಈ ಹಿನ್ನಲೆಯಲ್ಲಿ ಪಕ್ಷದ ಚಟುವಟಿಕೆಗೆಗೂ ಇದು ಹಿನ್ನಡೆ ಉಂಟು ಮಾಡಿತ್ತು. ಈ ಕಾರಣಕ್ಕಾಗಿ ಗೊಂದಲ ಬಗೆಹರಿಸಬೇಕು ಎಂಬ ಬೇಡಿಕೆ ತೀವ್ರಗೊಂಡಿತ್ತು. 

ಹೀಗಾಗಿ ಕೆಲವು ಹಿರಿಯ ನಾಯಕರಿಂದ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಮತ್ತು ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಬೈಜಯಂತ್ ಪಾಂಡಾ ಅವರು ಅಭಿಪ್ರಾಯ ಸಂಗ್ರಹ ಮಾಡಿದ್ದರು. ಭಾನುವಾರದಂದು ನಿತಿನ್ ನಬಿನ್ ರಾಜ್ಯಕ್ಕೆ ಬಂದು ಹೋದ ಬಳಿಕ ವರದಿ ಸಲ್ಲಿಕೆ ಸಾಧ್ಯತೆ ಇದೆ. ಸೋಮವಾರದ ಬಳಿಕ ರಾಷ್ಟ್ರೀಯ ಅಧ್ಯಕ್ಷರಿಗೆ ಅಭಿಪ್ರಾಯ ಸಂಗ್ರಹಣಾ ವರದಿ ಸಲ್ಲಿಕೆ ಆಗಲಿದೆ. 

ಬಹುತೇಕ ವಿಜಯೇಂದ್ರ ಫಿಕ್ಸ್ !

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಹುತೇಕ ಬಿ.ವೈ. ವಿಜಯೇಂದ್ರ ಅವರೇ ಮುಂದುವರಿಯುವ ಸಾಧ್ಯತೆಇದೆ. ವಿಜಯೇಂದ್ರ ನಾಯಕತ್ವದ ಬಗ್ಗೆ ಧ್ವನಿ ಎತ್ತಿದ್ದ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರಿಂದಲೂ ಅಭಿಪ್ರಾಯ ಸಂಗ್ರಹಿಸಲಾಗಿದೆ. ರಾಜ್ಯಾಧ್ಯಕ್ಷ ಬದಲಾವಣೆ ಬೇಕಾ? ಬದಲಿಸಿದರೆ ಯಾರನ್ನು ಮಾಡಬೇಕು ಎಂದು ಸಂಗ್ರಹಿಸಲಾಗಿರುವ ಅಭಿಪ್ರಾಯ ಸಂಗ್ರ ಮಾಡಲಾಗಿದೆ.