


ರಾಜ್ಯದ ಪ್ರಮುಖ ನಗರಗಳಲ್ಲಿ ಮಾತ್ರ ಅಳವಡಿಕೆಯಾಗಿದ್ದ Al ಸಿ.ಸಿ ಕ್ಯಾಮೆರಾ ಇದೀಗ ಸುಳ್ಯಕ್ಕೂ ಕಾಲಿರಿಸಿದ್ದು, ಸಂಚಾರ ನಿಯಮಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಪೋಲೀಸ್ ಇಲಾಖೆ ಸಜ್ಜಾಗಿದ್ದು ವಾಹನ ಸವಾರರು ಎಚ್ಚರಿಕೆ ವಹಿಸಬೇಕಾಗಿದೆ.
ಸುಳ್ಯ ನಗರದಲ್ಲಿ ಎಐ ಕ್ಯಾಮೆರಾ ಅಳವಡಿಸಿ ಮೂಲಕ ಸಂಚಾರ ನಿಯಮದ ಪಾಲಿಸದ ವಾಹನ ಸವಾರರ ಮೇಲೆ ಪೋಲೀಸರು ಹದ್ದಿನ ಕಣ್ಣನ್ನು ಇರಿಸಿದ್ದಾರೆ. ಸೀಟ್ ಬೆಲ್ಟ್ ಧರಿಸದಿರುವುದು, ಹೆಲ್ಮಟ್ ಹಾಕದೇ ಸಂಚರಿಸುವ, ತ್ರಿಬಲ್ ರೈಡ್ ಚಾಲನೆ, ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ, ಅತಿ ವೇಗದ ಚಾಲನೆ ಸೇರಿದಂತೆ ನಿಯಮ ಪಾಲಿಸದ ಸವಾರರಿಗೆ ಕೇಸು ದಾಖಲಾಗಿ ನೋಟೀಸ್ ಜಾರಿಯಾಗಲಿದೆ. ಆನ್ ಲೈನ್ ಮೂಲಕವು ಸಂದೇಶ ರವಾನೆಯಾಗಲಿದ್ದು ದಂಡ ಪಾವತಿ ಮಾಡಬೇಕಾಗಿದೆ. ಈ ನಿಯಮವು ಬಹಳ ಕಠಿಣವಾಗಿದ್ದು ಯಾವುದೇ ವಿನಾಯಿತಿ ಇಲ್ಲದೆ ಚಾಲಕರು ದಂಡವನ್ನು ಕಟ್ಟಬೇಕಾಗುತ್ತದೆ.


ದಿನದಲ್ಲಿ ಎಷ್ಟು ಬಾರಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಮಾಹಿತಿ ಕಲೆ ಹಾಕಿ ಅಷ್ಟು ಬಾರಿ ದಂಡ ವಿಧಿಸಲಾಗುತ್ತದೆ. ಈಗಾಗಲೇ ಕ್ಯಾಮರಾ ಅಳವಡಿಕೆಯಾಗಿದ್ದು ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ. ಹಿಟ್ & ರನ್ ಪ್ರಕರಣಗಳನ್ನು ಪತ್ತೆ ಹಚ್ಚಲು ಇದು ಸಹಕಾರಿಯಾಗಲಿದೆ. ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತ ಚಾಲನೆ ನಡೆಸಬೇಕು ಎಂದು ಸುಳ್ಯ ಠಾಣೆಯ ಎಸ್.ಐ ಸಂತೋಷ್ ರವರು ತಿಳಿಸಿದ್ದಾರೆ.
