


ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಂಘಟನೆಗಳು ಮೇ 20 ರಂದು (ನಾಳೆ) ಕರೆ ನೀಡಿದ್ದ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ಅಂಕುಶ ಹಾಕಿದೆ. ಇದರಿಂದ ಸಾರ್ವಜನಿಕರು ನಿಟ್ಟುಸಿರುವ ಬಿಡುವಂತಾಗಿದೆ.
ಕಟ್ಟಡ ಕಾರ್ಮಿಕರು ಹಾಗೂ ಮನೆಕೆಲಸದ ಮಹಿಳೆ ಇಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PLI) ವಿಚಾರಣೆ ನಡೆಸಿದ ಕೋರ್ಟ್, ಮುಷ್ಕರ ನಡೆಸದಂತೆ ಸೂಚಿಸಿದೆ. ಸರ್ಕಾರದ ಜೊತೆಗೆ ಮಾತುಕತೆ ನಡೆಸುವಂತೆ ಸೂಚನೆ ನೀಡಿ, ಗುರುವಾರಕ್ಕೆ (ಮೇ 21) ವಿಚಾರಣೆ ಮುಂದೂಡಿದೆ. ಸಾರಿಗೆ ನೌಕರರೊಂದಿಗೆ ಸಭೆ ನಡೆಸುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೂ (Karnataka Government) ನೋಟಿಸ್ ಜಾರಿಗೊಳಿಸಿದೆ.


ರಾಜ್ಯ ಸರ್ಕಾರ 12.5% ವೇತನ ಹೆಚ್ಚಳ ಮಾಡಿದೆ. ಮತ್ತೆ ಮುಷ್ಕರ ಮಾಡೋದು ಸರಿಯಲ್ಲ. ಮುಷ್ಕರ ಮಾಡದಂತೆ ಇಂದು ತಡೆಹಿಡಿಯುತ್ತೇವೆ. ಸರ್ಕಾರದ ಜೊತೆಗೆ ಮಾತುಕತೆ ನಡೆಸಿ, ಗುರುವಾರ ಮತ್ತೆ ವಿಚಾರಣೆ ನಡೆಸೋಣ ಎಂದು ಹೇಳಿದೆ.ಇನ್ನೂ ಹೈಕೋರ್ಟ್ ಸೂಚನೆ ಬೆನ್ನಲ್ಲೇ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರ ವಾಪಸ್ ಪಡೆಯುವ ನಿರ್ಧಾರ ಮಾಡಿದೆ. ಇಂದು ಸಂಜೆ 4 ಗಂಟೆ ವೇಳೆಗೆ ಅಧಿಕೃತ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.
