ಬೆಂಗಳೂರು: ಬಿಜೆಪಿ-ಜೆಡಿಎಸ್ (BJP JDS) ನಡುವೆ ಯಾವುದೇ ಬಿಕ್ಕಟ್ಟು ಬರೋದಿಲ್ಲ ಅಂತ ಮಾಜಿ ಪ್ರಧಾನಿ ಹೆಚ್‌.ಡಿ ‌ದೇವೇಗೌಡ (HD DeveGowda) ತಿಳಿಸಿದರು.

2028 ರ ಚುನಾವಣೆ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವು NDA ಅಲ್ಲಿ‌ ಪಾರ್ಟನರ್‌ ಆಗಿದ್ದೇವೆ. ಮೋದಿ, ಅಮಿತ್ ಶಾ (Modi – Amit Shah) ಅವರ ಜೊತೆ ನಮ್ಮ ಸಂಬಂಧವಿದೆ. ಇದರಲ್ಲಿ ಯಾವುದೇ ಬಿಕ್ಕಟ್ಟು ಬರೋದಿಲ್ಲ.ಈ ಹೋರಾಟದಲ್ಲಿ ಯಾವುದೇ ಕ್ಲಿಷ್ಟ ಸಮಸ್ಯೆ ಬಂದರೂ ಕೂತು ಬಗೆಹರಿಸಿಕೊಂಡು ಹೋರಾಟ ಮಾಡ್ತೀನಿ ಅಂತ ದೃಢ ವಿಶ್ವಾಸ ಇದೆ ಎಂದರು.

ಮೋದಿ-ಅಮಿತ್‌ ಶಾ ಅವರ ಬಳಿ ನಮ್ಮ ಸಂಬಂಧ ಇರೋದ್ರೀಂದ ನನಗೆ ಯಾವುದೇ ಆತಂಕವಿಲ್ಲ. ದಕ್ಷಿಣದಲ್ಲಿ ಕಾಂಗ್ರೆಸ್ ಕೇರಳಂ, ತೆಲಂಗಾಣ, ಕರ್ನಾಟಕ ಇದೆ ಅಂತ ಹೇಳ್ತಾ ಇದ್ದರು. ಮುಂದೆ ಏನಾಗುತ್ತೆ ಅಂತ ನೋಡೋಣ. ಈಗ ನಾನು ಮಾತಾಡೊಲ್ಲ. ಆ ಸಮಯ ಬಂದಾಗ ಮಾತಾಡ್ತೀನಿ ಅಂತ ತಿಳಿಸಿದರು.

ಇದೇ ವೇಳೆ ಕಾರ್ಯಕರ್ತರಿಗೆ ಸಂದೇಶ ಕೊಟ್ಟ ದೊಡ್ಡಗೌಡರು, ನಾವು ನಿಷ್ಟೆಯಿಂದ ನಮ್ಮ ಪಕ್ಷದ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಾಗಿ ಪಕ್ಷದ ಕೆಲಸವನ್ನ ನಿಷ್ಠೆಯಿಂದ ಮಾಡಿ. ಕುಮಾರಸ್ವಾಮಿ ಅವರು ವಹಿಸುವ ಜವಾಬ್ದಾರಿಯನ್ನ ತಾಲೂಕು, ಜಿಲ್ಲಾ ಮಟ್ಟದಲ್ಲಿ ನಿಷ್ಠೆಯಿಂದ ಮಾಡಬೇಕು. ಕಾರ್ಯಕರ್ತರು, ಶಾಸಕರಲ್ಲಿ ನಾನು ವಿನಂತಿ ಮಾಡ್ತೀನಿ ಎಂದರು.