ಪುತ್ತೂರು: ಇಂಧನ ಉಳಿತಾಯ ಹಾಗೂ ಸಾರ್ವಜನಿಕ ಸಾರಿಗೆ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು ಸ್ಪಂದಿಸಿದ್ದು. ಪುತ್ತೂರಿನಲ್ಲಿ ನಡೆದ ವಿವಾಹ ಸಮಾರಂಭವೊಂದಕ್ಕೆ ಅವರು ಮಂಗಳೂರಿನಿಂದ ಸರ್ಕಾರಿ ಬಸ್ ಮತ್ತು ಆಟೋ ಮೂಲಕ ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಪಕ್ಷದ ಪುತ್ತೂರು ನಗರ ಮಂಡಲದ ಕಾರ್ಯದರ್ಶಿಯವರ ವಿವಾಹ ಅರತಕ್ಷತೆ ಕಾರ್ಯಕ್ರಮಕ್ಕೆ ತೆರಳಲು ಸತೀಶ್ ಕುಂಪಲ ಅವರು ತಮ್ಮ ವೈಯಕ್ತಿಕ ಕಾರನ್ನು ಬಳಸದೆ, ಮಂಗಳೂರಿನ ಕೆ.ಎಸ್‌.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಸಾಮಾನ್ಯ ಪ್ರಯಾಣಿಕರಂತೆ ಬಸ್‌ನಲ್ಲಿ ಪ್ರಯಾಣಿಸಿದರು. ಪುತ್ತೂರು ನಿಲ್ದಾಣಕ್ಕೆ ತಲುಪಿದ ಬಳಿಕ ಅಲ್ಲಿಂದ ಆಟೋ ರಿಕ್ಷಾ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ತಲುಪಿದರು.