

ಅಂಜನಾದ್ರಿ ದೇವಸ್ಥಾನಕ್ಕೆ ಉದ್ಯಮಿ ಮಹೇಶ್ ರೆಡ್ಡಿ ನೀಡಿದ 2.50 ಕೋಟಿ ರೂ. ಮೌಲ್ಯದ ಬಂಗಾರದ ಕವಚಗಳ ತೂಕದಲ್ಲಿ ವ್ಯತ್ಯಾಸ ಕಂಡುಬಂದಿದೆ. ದಾನಿಗಳು ನೀಡಿದ 1280 ಗ್ರಾಂ ಬಂಗಾರದ ತೂಕದ ಹೇಳಿಕೆ ಮತ್ತು ಮೌಲ್ಯಮಾಪಕರ ಅಂದಾಜಿನ ನಡುವೆ ಗೊಂದಲ ಉಂಟಾಗಿದ್ದು, ಜಿಲ್ಲಾಧಿಕಾರಿಗಳು ದಾಖಲೆಗಳ ಪುನರ್ ಪರಿಶೀಲನೆಗೆ ಆದೇಶಿಸಿದ್ದಾರೆ.

ಕೊಪ್ಪಳ, ಮೇ 12: ಹನುಮ ಜನ್ಮಸ್ಥಳ ಎಂದೇ ಪ್ರಸಿದ್ಧವಾಗಿರುವ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ನೀಡಿದ ಸುಮಾರು 2.50 ಕೋಟಿ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳ ವಿಚಾರದಲ್ಲಿ ಈಗ ಗೊಂದಲ ಮೂಡಿದ್ದು, ಜಿಲ್ಲಾಡಳಿತವು ದಾಖಲೆಗಳ ಮರುಪರಿಶೀಲನೆಗೆ ಮುಂದಾಗಿದೆ. ಪಂಚನಾಮ ಪ್ರಕ್ರಿಯೆಯ ನಂತರ ಎಲ್ಲಾ ಆಭರಣಗಳನ್ನು ದೇವಸ್ಥಾನದ ಸಮಿತಿಯ ಸುಪರ್ದಿಗೆ ತೆಗೆದುಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.


