Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬೆಂಗಳೂರು: ಬೌರಿಂಗ್ ಆಸ್ಪತ್ರೆ (Bowring Hospital) ಗೋಡೆ ಕುಸಿದು ಏಳು ಜನರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜಗದೀಶ್ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ ಮಾಡಿದ್ದಾರೆ.

Out Look Fashion

ತನಿಖೆಯ ಸಂಪೂರ್ಣ ವರದಿ ಸಲ್ಲಿಕೆ ಮಾಡಿದ್ದು, ಇದರಲ್ಲಿ ಏಳು ಜನರ ಸಾವಿಗೆ ಆರೋಗ್ಯ ಇಲಾಖೆ (Health Department) ಇಂಜಿನಿಯರ್ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿ, ನಿರ್ಲಕ್ಷ್ಯವೇ ಕಾರಣ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯವಿರುವುದು ಬಯಲಾಗಿದೆ.

Jaya Refrigeration and Air Condition

ವರದಿಯಲ್ಲಿ ಏನಿದೆ?
1.ಗೋಡೆ ಪಕ್ಕದಲ್ಲಿ ಮಣ್ಣು ಸುರಿದಿರೋದು ದುರಂತಕ್ಕೆ ಮೂಲ ಕಾರಣ
2.ಗೋಡೆ ಪಕ್ಕ ಸುರಿದಿರುವ ಮಣ್ಣನ್ನ ಸೂಕ್ತ ಸಮಯಕ್ಕೆ ಗುತ್ತಿಗೆದಾರ ಮತ್ತು ಆರೋಗ್ಯ ಇಲಾಖೆ ಇಂಜಿನಿಯರ್ ತೆರವು ಮಾಡಿಲ್ಲ
3.ಆರೋಗ್ಯ ಇಲಾಖೆ ಇಂಜಿನಿಯರ್ ಮತ್ತು ಗುತ್ತಿಗೆದಾರ ಕಾರಣ
4.8 ಅಡಿ ಗೋಡೆ ಇದ್ದರೆ 6 ಅಡಿ ಮಣ್ಣು ಸುರಿದಿದ್ದಾರೆ.
5.ಗೋಡೆ ಪಕ್ಕದಲ್ಲಿ ಕ್ರಿಕೆಟ್ ಆಡುವುದಕ್ಕೆ ನೆಟ್ ಸೃಷ್ಟಿ ಮಾಡಲಾಗಿದೆ
5.ಸಿಎಸ್‌ಆರ್ ಫಂಡ್ ಕೊಟ್ಟಿದ್ದಾರೆ, ದಾನಿಯೊಬ್ಬರಿಗೆ ಗೋಡೆ ಪಕ್ಕದಲ್ಲಿ ಸ್ಟೇಡಿಯಂ ರೀತಿ ಆಸ್ಪತ್ರೆ ಆಡಳಿತ ಮಂಡಳಿ ಸೃಷ್ಟಿಮಾಡಿದೆ
6.ಕ್ರಿಕೆಟ್ ನೆಟ್ ಸೃಷ್ಟಿ ಮಾಡೋಕೆ ಮಣ್ಣು ಸುರಿದಿದ್ದಾರೆ, ಇದರಲ್ಲಿ ಆಸ್ಫತ್ರೆ ನಿರ್ಲಕ್ಷ್ಯವಿದೆ

ಈ ಕುರಿತು `ಪಬ್ಲಿಕ್ ಟಿವಿ’ ಜೊತೆ ಬೆಂಗಳೂರು ಡಿಸಿ ಜಗದೀಶ್ ಮಾತನಾಡಿ, ಸರ್ಕಾರ ತನಿಖೆಗೆ ಸೂಚಿಸಿತ್ತು, ಕೂಲಂಕುಷವಾಗಿ ತನಿಖೆಯನ್ನ ಮಾಡಿ, ವರದಿ ಸಲ್ಲಿಕೆ ಮಾಡಿದ್ದೇವೆ. ಏನು ಸಲ್ಲಿಕೆ ಆಗಿದೆ ಅಂತಾ ಡಿಸ್ಕ್ಲೋಸ್ ಮಾಡಲ್ಲ. ಮುಚ್ಚಿದ ಲಕೋಟೆಯಲ್ಲಿ ನೀಡಿದ್ದೇನೆ. ಸರ್ಕಾರ ಏನು ಕ್ರಮ ವಹಿಸುತ್ತೋ ಕಾದು ನೋಡಬೇಕು ಎಂದಿದ್ದಾರೆ.