ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್‌ ಅವರು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್‌ ಅವರನ್ನು ಭೇಟಿಯಾಗಿದ್ದಾರೆ.

ಇಂದಿನ ಸಭೆಯಲ್ಲಿ ಇಬ್ಬರು ನಾಯಕರು ಏನು ಚರ್ಚಿಸಿದರು ಎಂಬುದು ತಿಳಿದಿಲ್ಲ. ಕಪ್ಪು ಸೂಟ್ ಧರಿಸಿದ ವಿಜಯ್, ಡಿಎಂಕೆ ಮುಖ್ಯಸ್ಥರನ್ನು ಭೇಟಿಯಾಗಿದ್ದಾರೆ. ಪರಸ್ಪರರು ಕೈಮುಗಿದು ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಈ ವೇಳೆ ಉದಯನಿಧಿ ಸ್ಟಾಲಿನ್‌ ಕೂಡ ಇದ್ದರು.ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸಹಾಯದಿಂದ ವಿಜಯ್ ಹೊಸ ಸರ್ಕಾರವನ್ನು ರಚಿಸುವಲ್ಲಿ ಯಶಸ್ವಿಯಾದರು. ಭಾನುವಾರ ರಾಜ್ಯದ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.