ಬಲ್ನಾಡು ಗ್ರಾಮ ಪಂಚಾಯತ್ ಅರಿವು ಕೇಂದ್ರದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಪ್ಪ ಪಿ. ಆರ್ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀ, ಗ್ರಂಥಾಲಯ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಭಟ್, ಸುಗಮಗಾರರಾದ ಶ್ರೀಮತಿ ವಿನಯ, ಕೃಷ್ಣಪ್ಪ ಕೂಟೇಲು, ಶ್ರೀಮತಿ ಸುಮತಿ ಸಾಜ, ರಚನಾ, ಅನೀಕ್ಷಾ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಇಲ್ಲಿನ ವಿದ್ಯಾರ್ಥಿಗಳಾದ ಸನತ್, ಪ್ರತಿಕ್, ಅಜಿತ್ ಸುಗಮಗಾರಗಿದ್ದು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.


ಶಿಬಿರಾರ್ಥಿಗಳಾದ ತನುಕೃಪಾ ಕಾರ್ಯಕ್ರಮ ನಿರೂಪಿಸಿದರು. ಕ್ಷಮ್ಯಾ ಪ್ರಾರ್ಥಿಸಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ತನುಕೃಪಾ, ಕ್ಷಮ್ಯ, ಚರಿತ ಬೇಸಿಗೆ ಶಿಬಿರದ ಅನಿಸಿಕೆ ವ್ಯಕ್ತಪಡಿಸಿದರು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಾಯಿತು. ನೆನಪಿನ ಶಕ್ತಿ ಆಟ ಪ್ರಥಮ ವಿವಾನ್ ದ್ವಿತೀಯ ಫಾ ತಿಮತ್ ಅಪ್ರಿನ
ಆಟಗಳ ಹೆಸರು ಹೇಳುವ ಆಟ ಪ್ರಥಮ ವಿವಾನ್ ದ್ವಿತೀಯ ಪ್ರಣೀತ
ಗಟ್ಟಿ ಓದು ಪ್ರಥಮ ಕ್ಷಮ್ಯ ದ್ವಿತೀಯ ಕೌಶಿಕ್ ಚಿತ್ರ ರಚನೆ ಪ್ರಥಮ ಚಿರಾಗ್ ದ್ವಿತೀಯ ತನುಕೃಪಾ
ನೀರಿನ ಮೂಲಗಳ ಬಗ್ಗೆ ಚಿತ್ರ ರಚನೆ ಪ್ರಥಮ ಫಾತಿಮತ್ ಅಪ್ರಿನ ದ್ವಿತೀಯ ಅನೀಕ್ಷಾ
ಸುಗಮಗಾರರಿಗೆ ಪ್ರಶಾಂಸೆ ಪತ್ರ ಮಕ್ಕಳಿಗೆ ಪ್ರಮಾಣಪತ್ರ ಮತ್ತು ಬಹುಮಾನ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಸಿಬ್ಬಂದಿ ವರ್ಗ ವಿದ್ಯಾ , ಸುಪ್ರಿಯಾ, ರಮೇಶ್ ನಾಯ್ಕ, ಜಗನ್ನಾಥ, vrw ಶಶಿಕಲಾ, ಮಕ್ಕಳ ಪೋಷಕರು , ಐಕ್ ಸಮೃದ್ಧಿ ಸಂಜೀವಿನಿ ಗ್ರಾಮ ಒಕ್ಕೂಟದ mbk ಅಂಬಿಕಾ lcrp ಗಳು ಉಪಸ್ಥಿತರಿದ್ದು ,
ಗ್ರಂಥಾಲಯ ಮೇಲ್ವಿಚಾರಕಿ ಶಿಬಿರದ ಕುರಿತು ಅಭಿಪ್ರಾಯ ವ್ಯಕ್ತಿಪಡಿಸಿ ಧನ್ಯವಾದಗಳೊಂದಿಗೆ ಸಭೆಯನ್ನು ಮುಕ್ತಾಯ ಗೊಳಿಸಲಾಯಿತು.