


ಬೆಂಗಳೂರು: ಸಿಲಿಕಾನ್ ಸಿಟಿಯ ಹಲವೆಡೆ ಇಂದು ಕೂಡ ಮಳೆ ಸುರಿದಿದೆ. ಕಾರ್ಪೋರೇಷನ್, ಶಾಂತಿನಗರ, ಕೆ.ಆರ್. ಮಾರ್ಕೆಟ್ ಸೇರಿ ಹಲವೆಡೆ ಮಳೆಯಾಗಿದೆ.
ಟೌನ್ ಹಾಲ್ ಭಾಗದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಮಳೆಗೆ ವಾಹನ ಸವಾರರು ಪರದಾಡಿದ್ದಾರೆ. ಇಂದು ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿತ್ತು.


ಎಡಬಿಡದೆ ಸುರಿದ ಮಳೆಗೆ ರಸ್ತೆ ಕೆರೆಯಂತಾಗಿದೆ. ಜಯನಗರದ ಅಶೋಕ್ ಫಿಲ್ಲರ್ ಬಳಿ ಮಳೆ ನೀರು ತುಂಬಿ ಹರಿದಿದೆ. ಅರವಿಂದ ಜಂಕ್ಷನ್‌ನಲ್ಲಿ ಧರೆಗೆ ಮರ ಉರುಳಿದೆ. ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿ ವಾಹನ ಸಂಚಾರ ನಿಧಾನಗತಿಯಾಯಿತು.
ಮೆಜೆಸ್ಟಿಕ್ ಭಾಗದಲ್ಲೂ ಭಾರೀ ಮಳೆಯಾಗಿದೆ. ಮಳೆಗೆ ವಾಹನ ಸವಾರರು ಪರದಾಡಿದರು. ಸೆಂಟ್ ಮಾರ್ಕ್ಸ್ ರಸ್ತೆ ಮಳೆ ನೀರಿನಿಂದ ಆವೃತವಾಗಿದೆ. 24ನೇ ಮುಖ್ಯ ರಸ್ತೆ ಜೆಪಿ ನಗರದಲ್ಲಿ ಮಳೆ ನೀರು ನಿಂತಿರುವುದರಿಂದ 33ನೇ ಮುಖ್ಯ ರಸ್ತೆ ಮತ್ತು 14ನೇ ಮುಖ್ಯ ರಸ್ತೆ ಜೆಪಿ ನಗರದ ಕಡೆಗೆ ನಿಧಾನಗತಿಯ ಸಂಚಾರವಿದೆ.
