ಡೆಹ್ರಾಡೂನ್: ಆರು ತಿಂಗಳ ಚಳಿಗಾಲದ ವಿರಾಮದ ನಂತರ ಅಕ್ಷಯ ತೃತೀಯ ಸಂದರ್ಭದಲ್ಲಿ ಉತ್ತರಾಖಂಡದ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳ ದ್ವಾರಗಳು ತೆರೆದಿದ್ದು, ಚಾರ್ ಧಾಮ್ ಯಾತ್ರೆ ಭಾನುವಾರ ಪ್ರಾರಂಭವಾಗಿದೆ.

ಗಂಗೋತ್ರಿ ದೇವಾಲಯದ ದ್ವಾರಗಳು ಮಧ್ಯಾಹ್ನ 12:15 ಕ್ಕೆ ಮತ್ತು ಯಮುನೋತ್ರಿ ದೇವಾಲಯದ ದ್ವಾರಗಳು ಮಧ್ಯಾಹ್ನ 12:35 ಕ್ಕೆ ವೇದ ಮಂತ್ರಗಳ ಪಠಣದೊಂದಿಗೆ ತೆರೆದವು. ಬಾಗಿಲುಗಳು ತೆರೆದಾಗ ನೂರಾರು ಭಕ್ತರು ಘೋಷಣೆ ಕೂಗಿ ಭಕ್ತಿ ಪ್ರದರ್ಶಿಸಿದರು.

ಉತ್ತರಕಾಶಿ ಜಿಲ್ಲೆಯ ಎರಡೂ ದೇವಾಲಯಗಳಲ್ಲಿ ಮೊದಲ ಪ್ರಾರ್ಥನೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಸಲ್ಲಿಸಲಾಯಿತು. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಗಂಗೋತ್ರಿ ದೇಗುಲದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ದೇಶದ ಸಮೃದ್ಧಿಗಾಗಿ ಪ್ರಾರ್ಥಿಸಿದರು.