

ಮಂಗಳೂರು: ನವ ಮಂಗಳೂರು ಬಂದರು ಒಳಗಡೆ ಇಂದು ಸುಂಟರ ಗಾಳಿ ಕಾಣಿಸಿಕೊಂಡಿದೆ.

ಪಣಂಬೂರುನಲ್ಲಿರುವ ನವ ಮಂಗಳೂರು ಬಂದರಿನಲ್ಲಿ ಕಲ್ಲಿದ್ದಲು ರಾಶಿ ಹಾಕಿರುವ ಸ್ಥಳದಲ್ಲಿ ಭಾರೀ ಸುಂಟರಗಾಳಿ ಎದ್ದಿತ್ತು.


ಕಪ್ಪು ಮಿಶ್ರಿತ ಮಣ್ಣಿನೊಂದಿಗೆ ನೆಲದಿಂದ ಆಕಾಶದೆತ್ತರಕ್ಕೆ ಸುಂಟರಗಾಳಿ ಹೋಗಿತ್ತು. ಬುಗುರಿ ತಿರುಗಿದಂತೆ ತಿರುಗಿದ ಸುಂಟರಗಾಳಿಯ ದೃಶ್ಯವನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
