ಶಿಬಾಜೆ : ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಿ ಸಿ ರೋಡ್ ನ ಸ್ಪರ್ಶ ಕಲಾಮಂದಿರದಲ್ಲಿ ನಡೆಯುತ್ತಿದ್ದು ಮಾರ್ಚ್ 27 ರಂದು ತುಳು ಮತ್ತು ಕನ್ನಡ ವಿದ್ವಾಂಸರು ವಿಶ್ರಾಂತ ಕುಲಪತಿಗಳು ಆಗಿರುವ ಪ್ರೊಫೆಸರ್ ಚಿನ್ನಪ್ಪ ಗೌಡರವರು ಹಲವಾರು ನೂತನ ಕೃತಿಗಳನ್ನು ಲೋಕಾರ್ಪಣೆಗೊಳಿಸಿದ್ದು ಇದರಲ್ಲಿ ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ಪೆರ್ಲ ಖಂಡಿ್ ನಿವಾಸಿ ಸಂಜೀವ ಶೆಟ್ಟಿಗಾರ್ ಮತ್ತು ಗೀತಾ ಎಸ್ ಶೆಟ್ಟಿಗಾರ್ ಮಗಳಾಗಿರುವ ಸಂಪ್ರೀತ ಎಸ್ ಶೆಟ್ಟಿಗಾರ್ ರಚಿಸಿರುವ ” ಅಂತರಾಳದ ಧ್ವನಿ ” ಕೃತಿಯು ಬಿಡುಗಡೆಗೊಂಡಿತು.


ಸಂಪ್ರೀತ ಎಸ್ ಶೆಟ್ಟಿಗಾರ್ ರವರು ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ ಸಿ ಎ ವಿದ್ಯಾರ್ಥಿನಿಯಾಗಿದ್ದು ಕಲೆ , ಸಾಹಿತ್ಯ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಉಳ್ಳವರಾಗಿದ್ದಾರೆ