


ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಶಾಸಕರ ಚುಕ್ಕೆ ಗುರುತಿನ ಪ್ರಶ್ನೆಗೆ ಅರಣ್ಯ ಸಚಿವರ ಉತ್ತರಕ್ಕೆ ಪ್ರತಿಯಾಗಿ ಮಾತನಾಡಿದ ಶಾಸಕರು,ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಅರಣ್ಯ ಮತ್ತು ಕಂದಾಯ ಜಮೀನಿನ ಗಡಿಗಳು ಸ್ಪಷ್ಟವಾಗಿ ಗುರುತಿಸದೇ ಇರುವುದರಿಂದ ಸ್ಥಳೀಯ ರೈತರು ಹಾಗೂ ಗ್ರಾಮೀಣ ಜನತೆ ಅನೇಕ ವರ್ಷಗಳಿಂದ ಕಾನೂನು ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅನೇಕ ರೈತರು ಹಲವು ದಶಕಗಳಿಂದ ಕಂದಾಯ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದ ಭೂಮಿಯನ್ನು , ಸರ್ಕಾರವು ಅಕ್ರಮ–ಸಕ್ರಮದಡಿಯಲ್ಲಿ ಶಾಸಕರ ನೇತೃತ್ವದ ಬಗರ್ ಹುಕುಂ ಸಮಿತಿಯ ಮೂಲಕ ಸದರಿ ಅರ್ಜಿದಾರ ರೈತರಿಗೆ ಹಕ್ಕುಪತ್ರ ಮೂಲಕ ಮಂಜೂರು ಮಾಡಿದ್ದರೂ ಸಹ ಅರಣ್ಯ ಜಮೀನಿನ ಹತ್ತಿರದಲ್ಲಿರುವ ಕೃಷಿ ಜಮೀನು ಪೋಡಿಯಾಗದ (ಪ್ಲಾಟಿಂಗ್ )ಕಾರಣ ಪಹಣಿ ಪತ್ರಿಕೆಯಲ್ಲಿ (RTC ) ಭಾಗಶಃ ಅರಣ್ಯ ಪ್ರದೇಶವೆಂದು ತೋರಿಸಲಾಗುತ್ತಿದೆ.
ಈ ಕಾರಣದಿಂದಾಗಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳಲ್ಲಿ ಪ್ರಮುಖವಾಗಿ


ಹಕ್ಕುಪತ್ರ ಇದ್ದರೂ ಜಮೀನಿನ ಮೇಲೆ ಸಂಪೂರ್ಣ ಹಕ್ಕು ಉಪಯೋಗಿಸಲು ಆಗದಿರುವುದು
ಕೃಷಿ ಅಭಿವೃದ್ಧಿಗೆ ಬ್ಯಾಂಕ್ ಸಾಲ, ಬೆಳೆ ವಿಮೆ, ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ಸೌಲಭ್ಯಗಳು ಸಿಗದಿರುವುದು
ಜಮೀನು ದಾಖಲೆಗಳಲ್ಲಿ ವ್ಯತ್ಯಾಸದಿಂದ ಅನಗತ್ಯ ಕಾನೂನು ವಿವಾದಗಳು ಉಂಟಾಗುತ್ತಿದೆ
94-C ಹಕ್ಕುಪತ್ರ ಕೋರಿ ಅರ್ಜಿ ಸಲ್ಲಿಸಿರುವ ಆರ್ಥಿಕ ಬಡವರ್ಗದ ಫಲಾನುಭವಿಗಳಿಗೆ ಅರಣ್ಯ ಇಲಾಖೆಯ ಅಕ್ಷಪಣೆಯಿಂದಾಗಿ ಹಕ್ಕು ಪತ್ರ ದೊರೆಯುತ್ತಿಲ್ಲ
ಸದರಿ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ಕೆಳಗಿನ ಕ್ರಮಗಳನ್ನು ಕೈಗೊಳ್ಳುವುದು ಅತ್ಯಾವಶ್ಯಕವಾಗಿದೆ ಎಂದು ಅಗ್ರಹಿಸಿದರು
- ಸಂಯುಕ್ತ ಗಡಿ ಸರ್ವೇ (Joint Survey) ನಡೆಸುವುದು
ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸೇರಿ ಡ್ರೋನ್, GIS ತಂತ್ರಜ್ಞಾನ ಬಳಸಿ ಅರಣ್ಯ–ಕಂದಾಯ ಗಡಿಯನ್ನು ಸರ್ವೇ ನಡೆಸಬೇಕು.ಸದರಿ ಸರ್ವೆ ಕಾರ್ಯವನ್ನು ಕಾಲಮಿತಿಯೊಳಗೆ ಮುಕ್ತಾಯಗೊಳಿಸುವುದು - ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ರಚನೆ (ಪ್ರತಿ ಜಿಲ್ಲೆಯಲ್ಲಿ)
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ
ಅರಣ್ಯ ಸಂರಕ್ಷಕ (DCF)
ಉಪವಿಭಾಗಾಧಿಕಾರಿ (AC)
ತಹಶೀಲ್ದಾರ್
ಸರ್ವೇ ಇಲಾಖೆ ಅಧಿಕಾರಿಗಳು
ವಲಯ ಅರಣ್ಯ ಅಧಿಕಾರಿ (RFO)
ಇವರನ್ನೊಳಗೊಂಡ ಸಮನ್ವಯ ಸಮಿತಿ ರಚಿಸಿ ಗಡಿ ಸಮಸ್ಯೆಗಳನ್ನು ವೇಗವಾಗಿ ಪರಿಹರಿಸಬೇಕು. - ಅಕ್ರಮ–ಸಕ್ರಮದಡಿ ಮಂಜೂರಾದ ಜಮೀನಿನ ರಕ್ಷಣೆ
ಅಕ್ರಮ–ಸಕ್ರಮ ಯೋಜನೆಯಡಿ ಕಂದಾಯ ಇಲಾಖೆ ನೀಡಿದ ಹಕ್ಕುಪತ್ರಗಳನ್ನು ಅಂತಿಮ ದಾಖಲೆ ಎಂದು ಪರಿಗಣಿಸಿ, ಅರಣ್ಯ ಇಲಾಖೆಯ ದಾಖಲೆಗಳನ್ನು ಅದಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡುವ ಕ್ರಮ ಕೈಗೊಳ್ಳಬೇಕು. - ರೈತರ ಮೇಲಿನ ಕಾನೂನು ಕ್ರಮಗಳನ್ನು ನಿಲ್ಲಿಸುವುದು
ಗಡಿ ಸರ್ವೆ ಮತ್ತು ಪರಿಶೀಲನೆ ಪೂರ್ಣಗೊಳ್ಳುವವರೆಗೆ ರೈತರ ವಿರುದ್ಧ ಅರಣ್ಯ ಇಲಾಖೆ ಕೈಗೊಳ್ಳುತ್ತಿರುವ ಒತ್ತುವರಿ ತೆರವು ಅಥವಾ ಕಾನೂನು ಕ್ರಮಗಳನ್ನು ಸ್ಥಗಿತಗೊಳಿಸಬೇಕು
5) ಅರಣ್ಯ ಇಲಾಖೆಯ ಕಾರ್ಯ ಯೋಜನೆ ಮತ್ತು ಮೋಜಣಿ ವಿಭಾಗಕ್ಕೆ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಗಡಿ ಗುರುತಿಸುವ ಕೆಲಸಕ್ಕೆ ವೇಗ ನೀಡುವುದು
ಸದರಿ ಗಡಿ ಸಮಸ್ಯೆಯನ್ನು ಕೂಡಲೇ ನೀವಾರಿಸುವಂತೆ ಪ್ರತ್ಯೇಕವಾದ ಮನವಿಯನ್ನು ಸಹ ಶಾಸಕರು ಅರಣ್ಯ ಸಚಿವರಿಗೆ ನೀಡಿದರು ಸಚಿವರಿಗೆ ಅಭಿನಂದನೆ *ಸಲ್ಲಿಕೆ = ಪುತ್ತೂರು, ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು ಸದರಿ ಆನೆ ಹಾವಳಿಯನ್ನು ತಡೆಯಲು ಆನೆ ನಿಗ್ರಹ ಪಡೆ (ETF) ರಚಿಸಿರುವುದಕ್ಕೆ ಜಿಲ್ಲೆಯ ರೈತರು ಮತ್ತು ಭಾರತೀಯ ಕಿಸಾನ್ ಸಂಘದ ಪರವಾಗಿ ಶಾಸಕರು ಅರಣ್ಯ ಸಚಿವರಿಗೆ ಅಭಿನಂದನೆಯನ್ನು ತಿಳಿಸಿದರು.
