ಪುತ್ತೂರು: ಚಿಕ್ಕಪುತ್ತೂರು ನಿವಾಸಿ ಚಿಂತನ್ ಎಂಬವರ ಪತ್ನಿ 7 ತಿಂಗಳ ಗರ್ಭಿಣಿ ರೇಷ್ಮಾ ಅವರು ಜೂ.15 ರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ ವರದಿಯಾಗಿದೆ.ಪುತ್ತೂರು ಕಸಬಾದ ಚಿಕ್ಕಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ಚಿಂತನ್, ಅವರ ಪತ್ನಿ ಹಾಗು ಪುತ್ರಿ ವಾಸ್ತವ್ಯ ಹೊಂದಿದ್ದರು. 4 ವರ್ಷಗಳ ಹಿಂದೆಯಷ್ಟೆ ಚಿಂತನ್ ಅವರ ವಿವಾಹ ಸುರತ್ಕಲ್ ನ. ರೇಷ್ಮಾ ಅವರ ಜೊತೆ ನಡೆದಿತ್ತು.

ಜೂ.15 ರ ರಾತ್ರಿ ರೇಷ್ಮಾ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.