ಕಾರ್ಕಳ: ವಿವಾಹಿತ ಹಿಂದೂ ಮಹಿಳೆಯ ಜೊತೆ ಸುತ್ತಾಡುತ್ತಿದ್ದ ಅನ್ಯಮತೀಯ ಎರಡು ಮಕ್ಕಳ ತಂದೆ ಹಾಗೂ ವರುಣ್ ಬಸ್ಸಿನ ಚಾಲಕನನ್ನು ಶೃಂಗೇರಿ ಭಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಶೃಂಗೇರಿ ಮಠದ ಬಳಿ ಅನುಮಾನಸ್ಪದವಾಗಿ ನಡೆದಾಡುತ್ತಿದ್ದ ಜೋಡಿಯನ್ನು ಭಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಹಿಂದೂ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಶೃಂಗೇರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಸೂಕ್ತ ತನಿಖೆ ಮತ್ತು ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.