

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರಾಗಿರುವ ಜಯ್ ಶಾ ಅವರ ಸಹಕಾರದೊಂದಿಗೆ WCC ಆಯೋಜನೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ವಿಶ್ವದ ವಿವಿಧೆಡೆ ನಡೆಯುವ ಟಿ20 ಲೀಗ್‌ಗಳಲ್ಲಿ ಗೆದ್ದ ತಂಡಗಳು ಇದರಲ್ಲಿ ಭಾಗವಹಿಸಲಿವೆ.

ಆದರೆ, ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ (ಪಿಎಸ್ಎಲ್) ಗೆದ್ದ ತಂಡಕ್ಕೆ ಆಹ್ವಾನ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
‘ಲಂಡನ್‌ನಲ್ಲಿ ಕಳೆದ ತಿಂಗಳು ನಡೆದ ಸಭೆಗೆ ಪಿಎಸ್ಎಲ್‌ನ ಸಿಇಒ ಅವರನ್ನು ಕಳುಹಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಆಹ್ವಾನ ನೀಡಲಾಗಿತ್ತು. ಆದರೆ, ಯಾರೊಬ್ಬರೂ ಸಭೆಯಲ್ಲಿ ಭಾಗವಹಿಸಿರಲಿಲ್ಲ’ ಎಂದು ಬೆಳೆವಣಿಗೆಗಳ ಬಗ್ಗೆ ತಿಳಿದಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.


ಐಸಿಸಿ ಬೆಂಬಲದೊಂದಿಗೆ ಇಂಗ್ಲೆಂಡ್ ಅಂಡ್ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ನೇತೃತ್ವದಲ್ಲಿ ನಡೆದ ಸಭೆಗೆ ವಿಶ್ವದ ಪ್ರಮುಖ ಟಿ20 ಫ್ರಾಂಚೈಸ್‌ಗಳ ಸಿಇಒಗಳು ಹಾಜರಾಗಿದ್ದರು ಎಂದಿರುವ ಅವರು, ‘ಪ್ರಸ್ತಾವಿತ WCC ಆಯೋಜನೆ, ಮಾದರಿ, ವೇಳಾಪಟ್ಟಿ, ವಿದೇಶಿ ಆಟಗಾರರಿಗೆ ನಿರಾಕ್ಷೇಪಣಾ ಪತ್ರ ಲಭ್ಯತೆ ಇತ್ಯಾದಿ ವಿಚಾರಗಳ ಬಗ್ಗೆ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಗಿದೆ. ಎಮಿರೇಟ್ಸ್ ಲೀಗ್, ಬಿಗ್ ಬಾಸ್ ಲೀಗ್, ದಿ ಹಂಡ್ರೆಡ್, ಎಸ್ಎ20, ಮೇಜರ್ ಲೀಗ್ ಕ್ರಿಕೆಟ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಸಿಇಒಗಳು ಹಾಜರಾಗಿದ್ದರು. ಪಾಕಿಸ್ತಾನಕ್ಕೂ ಆಹ್ವಾನ ನೀಡಲಾಗಿತ್ತು’ ಎಂದು ಖಚಿತಪಡಿಸಿದ್ದಾರೆ.
