ಜುಲೈ 1, 2025 ರಿಂದ ರೈಲಿನಲ್ಲಿ ಪ್ರಯಾಣಿಸುವವರು ಎರಡು ಹೊಸ ಬದಲಾವಣೆಗಳಿಗೆ ಸಾಕ್ಷಿಯಾಗಲಿದ್ದಾರೆ. ಮೊದಲನೆಯದಾಗಿ, ತತ್ಕಾಲ್ ಟಿಕೆಟ್ ಬುಕ್ ಮಾಡಲು ಅವರಿಗೆ ಇ-ಆಧಾರ್ ದೃಢೀಕರಣದ ಅಗತ್ಯ ಇರುತ್ತದೆ.

ಎರಡನೆಯದಾಗಿ ಟಿಕೆಟ್ ಸ್ವಲ್ಪ ದುಬಾರಿ ಆಗಬಹುದು ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಎಸಿ ಅಲ್ಲದ ವರ್ಗದ ದರವನ್ನು ಪ್ರತಿ ಕಿ.ಮೀ.ಗೆ 1 ಪೈಸೆ ಹೆಚ್ಚಿಸಲಾಗಿದೆ. ಇನ್ನು ಎಸಿ ತರಗತಿಗಳಲ್ಲಿ ಪ್ರಯಾಣಿಸುವ ಟಿಕೆಟ್‌ಗಳು ಪ್ರತಿ ಕಿ.ಮೀ.ಗೆ 2 ಪೈಸೆ ದುಬಾರಿಯಾಗಲಿವೆ. 500 ಕಿ.ಮೀ.ವರೆಗಿನ ಎರಡನೇ ದರ್ಜೆಯ ಪ್ರಯಾಣ ದರವು ಬದಲಾಗದೇ ಉಳಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 500 ಕಿ.ಮೀ.ಗಿಂತ ಹೆಚ್ಚಿನ ದೂರಕ್ಕೆ, ದರಗಳನ್ನು ಪ್ರತಿ ಕಿ.ಮೀ.ಗೆ ಅರ್ಧ ಪೈಸೆ ಹೆಚ್ಚಿಸಬಹುದು.