

ರುದ್ರಪ್ರಯಾಗ: ಅಲಕನಂದಾ ನದಿಗೆ ಟೆಂಪೋ ಟ್ರಾವೆಲರ್ ಉರುಳಿ ಬಿದ್ದು ಕಾಣೆಯಾಗಿದ್ದ 9 ಮಂದಿ ಯಾತ್ರಿಕರಲ್ಲಿ ಇಬ್ಬರ ಮೃತದೇಹಗಳು ಇಂದು ಪತ್ತೆಯಾಗಿವೆ.
ಗುರುವಾರ ಬದರಿನಾಥಕ್ಕೆ ಯಾತ್ರಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಬಸ್ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಘೋಲ್ತಿರ್ ಬಳಿ ಅಲಕನಂದಾ ನದಿಗೆ ಉರುಳಿ ಬಿದ್ದಿತ್ತು. ಅಪಘಾತದಲ್ಲಿ ಚಾಲಕ ಸೇರಿದಂತೆ 20 ಜನರಲ್ಲಿ 10 ಜನರು ಹೊರಗೆ ಎಸೆಯಲ್ಪಟ್ಟು ಕಾಣೆಯಾಗಿದ್ದರು.



ತಕ್ಷಣವೇ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಕಾಣೆಯಾದವರ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಶೋಧ ಎರಡನೇ ದಿನವೂ ಮುಂದುವರಿದಿದ್ದು, ಇಂದು ಇಬ್ಬರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ.
