Akshaya Sharadhotsava
Darbe Salon
Mahalingeshwara Car Air Condition
New Dot Dress Mart

ಬಂಟ್ವಾಳದ ಬಿಸಿ ರೋಡ್‌ನಲ್ಲಿ ನಡುಹಗಲಲ್ಲೇ ನಡೆದ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Out Look Fashion

“ಇಂದು ನಡುಹಗಲಲ್ಲೇ ಹೆಣ್ಣುಮಗಳೊಬ್ಬಳಿಗೆ ರಕ್ಷಣೆ ಇಲ್ಲ ಎಂದರೆ ನಮ್ಮ ವ್ಯವಸ್ಥೆ ಮತ್ತು ಸಮಾಜದ ಬಗ್ಗೆ ತೀವ್ರ ನಾಚಿಕೆ ಹಾಗೂ ದುಃಖವಾಗುತ್ತಿದೆ. ಬಿಸಿ ರೋಡ್‌ನಲ್ಲಿ ನಡೆದ ಈ ಬರ್ಬರ ಹತ್ಯೆ ಇಡೀ ಮಾನವ ಧರ್ಮಕ್ಕೇ ಕಳಂಕ” ಎಂದು ಅವರು ಹೇಳಿದ್ದಾರೆ.

Jaya Refrigeration and Air Condition

ಘಟನೆಯ ವೇಳೆ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿದ್ದಾಗ, ರಕ್ಷಿಸಲು ಧಾವಿಸುವ ಬದಲು ಕೆಲವರು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ವಿಚಾರವನ್ನು ಉಲ್ಲೇಖಿಸಿದ ಅವರು, “ಅಲ್ಲಿದ್ದವರು ಒಗ್ಗಟ್ಟು ಪ್ರದರ್ಶಿಸಿ ಆರೋಪಿಯನ್ನು ತಡೆದಿದ್ದರೆ ಆ ಅಮಾಯಕ ಜೀವ ಉಳಿಯುವ ಸಾಧ್ಯತೆ ಇತ್ತು. ನಮ್ಮ ಸಮಾಜದ ಈ ನಿರ್ಲಕ್ಷ್ಯ ಮತ್ತು ಜಡತ್ವ ತಲೆ ತಗ್ಗಿಸುವಂತಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆಗೆ ನೇರ ಮನವಿ ಮಾಡಿದ ಅವರು, “ಆರೋಪಿ ಯಾವುದೇ ಧರ್ಮ, ಜಾತಿ ಅಥವಾ ಸಮುದಾಯಕ್ಕೆ ಸೇರಿದವನಾಗಿರಲಿ, ಆತ ಎಸಗಿರುವುದು ಕ್ಷಮಿಸಲಾಗದ ಘೋರ ಅಪರಾಧ. ಕಾನೂನು ವ್ಯಾಪ್ತಿಯಲ್ಲೇ ಅತ್ಯಂತ ಕಠಿಣ ಕ್ರಮ ಕೈಗೊಂಡು, ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಬೇಕು. ಇಂತಹ ದಿಟ್ಟ ಕ್ರಮಕ್ಕೆ ನಮ್ಮ ಹಾಗೂ ಇಡೀ ನಾಗರಿಕ ಸಮಾಜದ ಸಂಪೂರ್ಣ ಬೆಂಬಲವಿದೆ” ಎಂದು ತಿಳಿಸಿದ್ದಾರೆ.