Akshaya Sharadhotsava
Darbe Salon
Mahalingeshwara Car Air Condition
New Dot Dress Mart

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಆರೋಪಿಸಿದ್ದಾರೆ.

Out Look Fashion

ಕಳೆದ ಒಂದು ವಾರದಲ್ಲಿ ಪುತ್ತೂರು ಹಾಗೂ ಸುತ್ತಮುತ್ತ ನಡೆದಿರುವ ಘಟನೆಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ ರಾಜಕೀಯದ ಕೈಗೊಂಬೆಯಾಗದೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದ್ದರೆ ಇಂತಹ ದುರ್ಘಟನೆಗಳು ನಡೆಯುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

Jaya Refrigeration and Air Condition

“ಒಬ್ಬ ತಾಯಿ ತನ್ನ ಮಗಳನ್ನು ಹೊರಗೆ ಕಳುಹಿಸುವಾಗ, ‘ನನ್ನ ಮಗಳು ಸುರಕ್ಷಿತವಾಗಿ ಮನೆಗೆ ವಾಪಸ್ ಬರುತ್ತಾಳೆ’ ಎಂಬ ನಂಬಿಕೆಯೊಂದಿಗೆ ಕಳುಹಿಸುತ್ತಾಳೆ. ಆದರೆ ಇಂದು ನಡೆದಂತಹ ದುರ್ಘಟನೆಗಳ ಬಳಿಕ ಆ ತಾಯಿಗೆ ಏನು ಉತ್ತರ ಕೊಡುತ್ತೀರಿ? ಎಂದು ಕಾಂಗ್ರೆಸ್ ಸರ್ಕಾರವನ್ನು ಅವರು ಪ್ರಶ್ನಿಸಿದರು.

ಇದರಿಂದ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.

ಬಿಜೆಪಿ ಈ ಘಟನೆಯಲ್ಲಿ ಬಂಟ್ವಾಳದಲ್ಲಿ ಮೃತಪಟ್ಟ ಯುವತಿಯ ಕುಟುಂಬದೊಂದಿಗೆ ಸಂಪೂರ್ಣವಾಗಿ ನಿಲ್ಲಲಿದೆ. ಪ್ರಕರಣದ ಆರೋಪಿಯನ್ನು ತಕ್ಷಣ ಬಂಧಿಸಿ, ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು.