Tamanvi Silk
Darbe Salon
Mahalingeshwara Car Air Condition

ಬೆಳ್ತಂಗಡಿ, ಜೂನ್ 5: ಅಕ್ರಮ ಜಾನುವಾರು ಸಾಗಾಟದ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಜಾನುವಾರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿದ್ದಾರೆ.

Out Look Fashion

ದಿನಾಂಕ 03-06-2026 ರಂದು ರಾತ್ರಿ, ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಮರ್ಥ ಆರ್. ಗಾಣಿಗೇರ ಅವರಿಗೆ ಅಕ್ರಮ ಜಾನುವಾರು ಸಾಗಾಟದ ಕುರಿತು ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಠಾಣಾ ಸಿಬ್ಬಂದಿಗಳೊಂದಿಗೆ ಬೆಳ್ತಂಗಡಿ ತಾಲೂಕಿನ ಸೋಮಂತಡ್ಕ ಮಂಜುಶ್ರೀ ಬಸ್ ನಿಲ್ದಾಣದ ಸಮೀಪ ದಾಳಿ ನಡೆಸಿದರು.

Jaya Refrigeration and Air Condition

ಈ ವೇಳೆ ಬೆಳ್ತಂಗಡಿ ತೋಟತ್ತಾಡಿ ನಿವಾಸಿ ಅನಿಲ್ ಪಿ (34) ಎಂಬಾತ ಯಾವುದೇ ಪೂರ್ವಾನುಮತಿ ದಾಖಲೆಗಳಿಲ್ಲದೆ ಪಿಕ್‌ಅಪ್ ವಾಹನದಲ್ಲಿ ಒಂದು ಜಾನುವಾರನ್ನು ಸಾಗಿಸುತ್ತಿರುವುದು ಪತ್ತೆಯಾಯಿತು.

ಪೊಲೀಸರ ವಿಚಾರಣೆಯ ವೇಳೆ, ಸದರಿ ಜಾನುವಾರನ್ನು ರಾಘವೇಂದ್ರ ಭಟ್ (45) ಅವರಿಂದ ಖರೀದಿಸಿದ್ದು, ಮಾಂಸಕ್ಕಾಗಿ ತಾನು ಹಾಗೂ ತೋಮಸ್ ತೋಟತ್ತಾಡಿ (30) ಮತ್ತು ಕಕ್ಕಿಂಜೆ ಕಬೀರ್ (28) ಸೇರಿ ಸಾಗಿಸುತ್ತಿರುವುದಾಗಿ ಅನಿಲ್ ತಿಳಿಸಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 9/2026ರಡಿ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ-2020ರ ಕಲಂ 5, 7 ಹಾಗೂ 12ರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.