



ಪುತ್ತೂರು: ಸೌಂದರ್ಯ ಕ್ಷೇತ್ರದಲ್ಲಿ ವೃತ್ತಿ ನಿರ್ಮಿಸಿಕೊಳ್ಳಲು ಆಸಕ್ತಿ ಹೊಂದಿರುವ ಯುವತಿಯರಿಗೆ ಸುವರ್ಣಾವಕಾಶ ಒದಗಿಸಿರುವ ಪುತ್ತೂರು ಪಡೀಲಿನಲ್ಲಿ ಇರುವ ಔಟ್ ಲುಕ್ ಬ್ಯೂಟಿ ಸಲೂನ್, ವೃತ್ತಿಪರ ಬ್ಯೂಟಿಷಿಯನ್ ಕೋರ್ಸ್‌ಗೆ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ.

ಈ ಕೋರ್ಸ್‌ನಲ್ಲಿ ಬೇಸಿಕ್ ಹಾಗೂ ಅಡ್ವಾನ್ಸ್ ಬ್ಯೂಟಿಷಿಯನ್ ತರಬೇತಿ, ಬ್ರೈಡಲ್ ಮೇಕಪ್, ಹೇರ್ ಸ್ಟೈಲಿಂಗ್ ಮತ್ತು ಹೇರ್ ಕೇರ್, ಫೇಶಿಯಲ್ ಮತ್ತು ಸ್ಕಿನ್ ಕೇರ್, ಮೆಹೆಂದಿ, ಸೀರೆ ಡ್ರೇಪಿಂಗ್ ಸೇರಿದಂತೆ ಹಲವು ವಿಷಯಗಳಲ್ಲಿ ಪ್ರಾಯೋಗಿಕ ಹಾಗೂ ತಜ್ಞರಿಂದ ಮಾರ್ಗದರ್ಶನ ನೀಡಲಾಗುತ್ತದೆ. ಇಂತಹ ಕೋರ್ಸ್‌ಗಳು ಸಾಮಾನ್ಯವಾಗಿ ಸ್ಕಿನ್ ಕೇರ್, ಹೇರ್ ಕೇರ್, ಮೇಕಪ್ ಹಾಗೂ ಸಲೂನ್ ಕೌಶಲ್ಯಗಳ ಮೇಲೆ ಕೇಂದ್ರೀಕರಿಸುತ್ತವೆ.

ಸಂಸ್ಥೆಯು ಅನುಭವಿ ತರಬೇತುದಾರರಿಂದ ಪ್ರಾಯೋಗಿಕ ತರಬೇತಿ, ಸರ್ಟಿಫಿಕೆಟ್ ಹಾಗೂ ಉದ್ಯೋಗ ಮಾರ್ಗದರ್ಶನ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉಪ್ಪಿನಂಗಡಿ ರಸ್ತೆಯ ಪಡೀಲ್‌ನ ವಿಘ್ನೇಶ್ವರ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಔಟ್ ಲುಕ್ ಬ್ಯೂಟಿ ಸಲೂನ್‌ನಲ್ಲಿ ಪ್ರವೇಶ ಪಡೆಯಲು ಆಸಕ್ತರು 95915 66672 ಸಂಖ್ಯೆಯನ್ನು ಸಂಪರ್ಕಿಸಬಹುದು.
