ಗುತ್ತಿಗಾರು ಪೇಟೆಯ ಮುಖ್ಯ ರಸ್ತೆಯಲ್ಲಿರುವ ಗ್ರಾಮ ಪಂಚಾಯತ್ ಕಟ್ಟಡದಲ್ಲಿರುವ ಇಜಾಮ್ ಮಾಲೀಕತ್ವದ ಅಡಿಕೆ ಅಂಗಡಿಯಲ್ಲಿ ಹಾಡಹಗಲೇ ₹1 ಲಕ್ಷ ನಗದು ಕಳ್ಳತನವಾದ ಘಟನೆ ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.