ಪುತ್ತೂರು : ಕೆಯ್ಯುರು ಗ್ರಾಮದ ಯುವಕನೋರ್ವ ಬಾಂಬೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 21ರಂದು ಸಂಭವಿಸಿದೆ.

Screenshot

ಕೆಯ್ಯುರು ಗ್ರಾಮ ಪಂಚಾಯತ್ ಕಚೇರಿ ಬಳಿಯ ನಿವಾಸಿಯಾಗಿದ್ದ ದಿವಂಗತ ರಘುನಾಥ ಪೂಜಾರಿ ಅವರ ಪುತ್ರ ಕಾರ್ತಿಕ್ (27) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಕಾರ್ತಿಕ್ ಅವರು ಕಳೆದ ಹಲವು ವರ್ಷಗಳಿಂದ ಬಾಂಬೆಯ ಉರ್ಲ ಪ್ರದೇಶದಲ್ಲಿ ಹೋಟೆಲ್ ಉದ್ಯೋಗ ಮಾಡಿಕೊಂಡು ಅಲ್ಲೇ ವಾಸವಾಗಿದ್ದರು. ಮೇ 21ರಂದು ತಮ್ಮ ವಾಸದ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.