ಮಂಗಳೂರು : ಮಳೆಗಾಲದಲ್ಲಿ ಹಾವುಗಳು ಬೆಚ್ಚಗಿನ ತಾಣವನ್ನು ಅರಸಿಕೊಂಡು ಸಾಗುತ್ತವೆ. ಮನೆಯೊಳಗೆ, ಶೂಗಳ ಒಳಗೆ, ಬೈಕ್, ಕಾರಿನ ಒಳಗೆ ಸೇರಿಕೊಳ್ಳುತ್ತವೆ. ಹಾಗಾಗಿ ಜನತೆ ಆದಷ್ಟು ಎಚ್ಚರಿಕೆಯಿಂದ ಇರುವುದು ಅತೀ ಅಗತ್ಯ.

ಅದರಲ್ಲೂ ಬೈಕ್ ಸವಾರರಂತೂ ವಾಹನವನ್ನೇರುವ ಮುನ್ನ ಬಹಳ ಎಚ್ಚರವಾಗಿರೋದು ಅತೀ ಅಗತ್ಯ. ಮಂಗಳೂರಿನ ಪಂಪ್‌ವೆಲ್‌ನಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್‌ ಸವಾರ ದೊಡ್ಡ ದುರಂ*ತದಿಂದ ಪಾರಾಗಿದ್ದಾರೆ.

ಬೈಕ್‌ನಲ್ಲಿದ್ದ ನಾಗಪ್ಪ!

ಶ್ರೀನಿವಾಸ ಭಟ್ ಎಂಬವರು ತಮ್ಮ ದ್ವಿಚಕ್ರ ವಾಹನವನ್ನು ಚಾಲನೆ ಮಾಡಲು ಹೋದ ಸಂದರ್ಭದಲ್ಲಿ ವಾಹನದಲ್ಲಿ ನಾಗರಹಾವಿನ ಮರಿ ಕುಳಿತುಕೊಂಡಿರುವುದನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಉರಗ ತಜ್ಞರನ್ನು ಕರೆಸಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ ಗೌತಮ್, ಬೈಕಿನ ಕವರ್ ಓಪನ್ ಮಾಡಿ ನಾಗರ ಹಾವಿನ ಮರಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಳೆಗಾಲದಲ್ಲಿ ಹಾವಿನ ಮರಿಗಳು ಶೂ, ಹೆಲ್ಕೆಟ್, ಗಾಡಿಗಳಲ್ಲಿ ಕುಳಿತುಕೊಳ್ಳುತ್ತವೆ. ಜನ ಎಚ್ಚರಿಕೆಯಿಂದ ಇರಬೇಕು ಎಂದು ಉರಗ ತಜ್ಞ ಗೌತಮ್ ಕಿವಿಮಾತು ಹೇಳಿದ್ದಾರೆ.