ಸಾಮಾಜಿಕ ಮಾಧ್ಯಮದ (Social Media) ಜಗತ್ತಿನಲ್ಲಿ ಇತ್ತೀಚೆಗೆ ಒಂದು ಹೊಸ ಹೆಸರು ಎಲ್ಲರ ಗಮನ ಸೆಳೆಯುತ್ತಿದೆ. ಅದೇ ‘ಕಾಕ್ರೋಚ್ ಜನತಾ ಪಕ್ಷ’ (Cockroach Janta Party). ಇದು ನಿಜವಾದ ರಾಜಕೀಯ ಪಕ್ಷವಲ್ಲ, ಆನ್‌ಲೈನ್‌ನಲ್ಲಿ ಹುಟ್ಟಿದ ಒಂದು ವಿಡಂಬನಾತ್ಮಕ ಅಭಿಯಾನ. ಆದರೆ ಕೇವಲ ಕೆಲವು ದಿನಗಳಲ್ಲಿ ಇದಕ್ಕೆ ದೊರೆತ ಜನಪ್ರಿಯತೆ ರಾಜಕೀಯ ವಲಯದಲ್ಲಿಯೇ ಚರ್ಚೆಗೆ ಕಾರಣವಾಗಿದೆ. ಇದು ಯುವ ರಾಜಕೀಯ ವೇದಿಕೆ ಎನ್ನಲಾಗುತ್ತಿದ್ದು, ಕೇವಲ 4 ದಿನಗಳಲ್ಲಿ 9.8 ಮಿಲಿಯನ್ ಫಾಲೋವರ್‌ಗಳನ್ನು (9.8 Million Followers) ಪಡೆದುಕೊಂಡಿದೆ.

Instagram ನಲ್ಲಿ @cockroachjantaparty ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಖಾತೆ ಈವರೆಗೆ ವೇಳೆಗೆ 9.6 ಮಿಲಿಯನ್‌ಗಿಂತ ಹೆಚ್ಚು ಅನುಯಾಯಿಗಳನ್ನು ಗಳಿಸಿದೆ. ಇದು ಯುವಜನರನ್ನು ಹೆಚ್ಚಾಗಿ ಆಕರ್ಷಿಸಿದೆ ಎಂದು ಹೇಳಲಾಗಿದೆ.

ಸೋಷಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ ಕಾಕ್ರೋಚ್ ಜನತಾ ಪಕ್ಷ

ಈ ಕಾಕ್ರೋಚ್ ಜನತಾ ಪಕ್ಷ ಭಾರತದಲ್ಲಿ ದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಯ ಅಧಿಕೃತ Instagram ಖಾತೆ @bjp4india (ಸುಮಾರು 8.7 ಮಿಲಿಯನ್ ಫಾಲೋವರ್‌ಗಳು) ಅನ್ನು ಫಾಲೋವರ್‌ಗಳ ಸಂಖ್ಯೆಯಲ್ಲಿ ಮೀರಿಸಿದೆ. ಆದರೆ ಒಟ್ಟಾರೆ ನೋಡಿದರೆ, ಕಾಂಗ್ರೆಸ್ ಪಕ್ಷದ Instagram ಖಾತೆ @incindia ಇನ್ನೂ ಮೊದಲ ಸ್ಥಾನದಲ್ಲಿದೆ. ಅದಕ್ಕೆ ಸುಮಾರು 13.2 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ Instagram ಖಾತೆಯ ಫಾಲೋವರ್‌ಗಳು ಸುಮಾರು 1.9 ಮಿಲಿಯನ್ ಎಂದು ತಿಳಿಸಲಾಗಿದೆ.