ಇಸ್ಲಾಮಾಬಾದ್‌: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧ ಭೀತಿಯ ಹಿನ್ನೆಲೆಯಲ್ಲಿ ರಕ್ಷಣಾ ಒಪ್ಪಂದದ ಭಾಗವಾಗಿ ಪಾಕಿಸ್ತಾನವು (Pakistan) ಸೌದಿ ಅರೇಬಿಯಾಕ್ಕೆ(Saudi Arabia) ಸಾವಿರಾರು ಸೈನಿಕರು ಹಾಗೂ ಯುದ್ಧ ವಿಮಾನಗಳನ್ನು ನಿಯೋಜಿಸಿದೆ.

ಪಾಕಿಸ್ತಾನವು ಸೌದಿ ಅರೇಬಿಯಾದ ಭದ್ರತೆಗಾಗಿ 8 ಸಾವಿರ ಸೈನಿಕರ ಬೃಹತ್ ಪಡೆಯನ್ನು ನಿಯೋಜಿಸಿದೆ. ಸೈನಿಕರ ಜೊತೆಗೆ ಪಾಕಿಸ್ತಾನ ವಾಯುಪಡೆಯ 10 ರಿಂದ 18 ಅತ್ಯಾಧುನಿಕ ಯುದ್ಧ ವಿಮಾನಗಳು (Fighter Jets) ಮತ್ತು ಸಹಾಯಕ ವಿಮಾನಗಳನ್ನು ಕಳುಹಿಸಿಕೊಡಲಾಗಿದೆ.ಚೀನಾ (China) ನಿರ್ಮಿತ ಜೆಎಫ್-17 (JF-17) ಯುದ್ಧ ವಿಮಾನಗಳು, ಡ್ರೋನ್ ದಳಗಳು ಮತ್ತು ಅತ್ಯಾಧುನಿಕ ಚೀನಾ ನಿರ್ಮಿತ ಎಚ್‌ಕ್ಯೂ-9 (HQ-9) ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ. ಅಗತ್ಯ ಬಿದ್ದರೆ ಹೆಚ್ಚಿನ ಸೈನಿಕರನ್ನು ಕಳುಹಿಸುವುದಾಗಿಯೂ ಪಾಕಿಸ್ತಾನ ಭರವಸೆ ನೀಡಿದೆ.