


ಮುಂಬೈ: ಭಾರ್ತಿ ಏರ್‌ಟೆಲ್ (Bharti Airtel) ಕಂಪನಿಯು ಮಾರುಕಟ್ಟೆ ಮೌಲ್ಯದಲ್ಲಿ (Market Capitalization) ಹೆಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಹಿಂದಿಕ್ಕಿ ಭಾರತದ ಎರಡನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದೆ.
ಷೇರು ಮಾರುಕಟ್ಟೆಯ ಇತ್ತೀಚಿನ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮೊದಲ ಸ್ಥಾನದಲ್ಲಿದ್ದರೆ, ಏರ್‌ಟೆಲ್ ದ್ವಿತೀಯ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್ ತೃತೀಯ ಸ್ಥಾನಕ್ಕೆ ಕುಸಿದಿದೆ.ಏರ್‌ಟೆಲ್‌ನ ಒಟ್ಟು ಮಾರುಕಟ್ಟೆ ಮೌಲ್ಯವು ಸುಮಾರು 11.8 ಲಕ್ಷ ಕೋಟಿ ರೂ. ದಾಟಿದರೆ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಹೆಚ್‌ಡಿಎಫ್‌ಸಿ ಪ್ರಸ್ತುತ ಸುಮಾರು 11.7 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದೆ.


