ಕರ್ನಾಟಕ ರಾಜ್ಯದ ಹಾವೇರಿಯಿಂದ ಕೇರಳ ರಾಜ್ಯದ ತಲಿಪರಂಬು ಎಂಬಲ್ಲಿಗೆ ಯಾವುದೇ ದಾಖಲಾತಿ ಇಲ್ಲದೆ ಸುಮಾರು 27 ಕೋಣಗಳನ್ನು ಈಚರ್ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದನ್ನು ಕಂಕನಾಡಿ ನಗರ ಪೊಲಿಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗೆರಿ ಇಂಡಿಯಾನ ಹಾಲ್ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದಿನಾಂಕ 16-05-2026 ರಂದು ಬೆಳಿಗ್ಗೆ 6-00 ಗಂಟೆಗೆ ಮಂಗಳೂರು ಹೈವೇ ಪೆಟ್ರೋಲ್ ಪೊಲೀಸರು ಮತ್ತು ಮಾರ್ನಿಂಗ್ ಗಸ್ತು ಕರ್ತವ್ಯದಲ್ಲಿದ್ದ ಕಂಕನಾಡಿ ನಗರ ಪೊಲೀಸರು ಪತ್ತೆ ಮಾಡಿ 27 ಕೋಣಗಳನ್ನು ರಕ್ಷಿಸಿರುತ್ತಾರೆ. ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 4 ಜನ ಆರೋಪಿಗಳನ್ನು ಸಾಗಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆಯಲಾಗಿರುತ್ತದೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ 59/2026 ಕಲಂ Sec 11(A),11(D) Prevention of Cruelty to Animals Act, 1960, Sec 6 The Karnataka Prevention of Slaughter and Preservation of Cattle Act-2020 r/w 3(5) BNS ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ದಸ್ತಗಿರಿಯಾದ ಆರೋಪಿತರ ಹೆಸರು ಮತ್ತು ವಿಳಾಸ:

  1. ಸಯ್ಯದ್ ಮೆಹಬೂಬ್ ಅಲಿ ಪ್ರಾಯ 28 ವರ್ಷ ತಂದೆ ರಾಜೇಸಾಬ ವಾಸ: ಡೋರ್ ನಂ. 81 ಅಶ್ರಯ ಬಡಾವಣೆ ಬೊಮ್ಮನಕಟ್ಟೆ ಶಿವಮೊಗ್ಗ
  2. ಅರುಣ ಚಂದ್ರಪ್ಪ ಜಾವಳಿ ಪ್ರಾಯ 32 ವರ್ಷ ತಂದೆ: ಚಂದ್ರಪ್ಪ ವಾಸ: ನಿಟ್ಟೂರು ಅಡವಿ ಮಾಡ್ಲುರು ಅಂಚೆ, ಹಿರೇಕೆರೂರು ತಾಲೂಕು ಹಾವೇರಿ ಜಿಲ್ಲೆ
  3. ಹಿರಿಯಣ್ಣ ಗೌಡ ಪ್ರಾಯ 46 ವರ್ಷ ತಂದೆ: ರಂಗಸ್ವಾಮಿ ವಾಸ: ಮಾದೇವರಳ್ಳಿ ಗ್ರಾಮ ಅರಸಿಕೇರೆ ತಾಲೂಕು ಹಾಸನ ಜಿಲ್ಲೆ
  4. ಸುನೀಲ್ ಲಕ್ಷ್ಮಪ್ಪ ಜಾವಳ್ಳಿ ಪ್ರಾಯ 24 ವರ್ಷ ತಂದೆ: ಲಕ್ಷ್ಮಪ್ಪ ವಾಸ: ನಿಟ್ಟೂರು ಅಡವಿ ನಿಟ್ಟೂರು ಗ್ರಾಮ ಮಡ್ಲೂರು ಅಂಚೆ, ಹಿರೆಕೇರೂರು ತಾಲೂಕು ಹಾವೇರಿ ಜಿಲ್ಲೆ

ಪ್ರಕರಣದಲ್ಲಿನ ಆರೋಪಿತರ ಮೇಲೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಮತ್ತು ಪ್ರಾಣಿ ಹಿಂಸಾ ತಡೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಕೋಣಗಳನ್ನು ಮಾನ್ಯ ನ್ಯಾಯಾಲಯದ ಆದೇಶದಂತೆ ಗೋ ಶಾಲೆಯ ವಶಕ್ಕೆ ನೀಡಲಾಗಿದೆ. ಪ್ರಕರಣ ತನಿಖೆಗೆ ಮೂಂದುವರೆದಿರುತ್ತದೆ.