


ಮಂಗಳೂರು, ಮೇ 14: ಹವಾಮಾನ ವೈಪರಿತ್ಯ ಹಾಗೂ ಗುಡುಗು ಸಹಿತ ಭಾರೀ ಮಳೆಯ ಪರಿಣಾಮ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ವಿಮಾನಗಳ ಲ್ಯಾಂಡಿಂಗ್ ವ್ಯತ್ಯಯಗೊಂಡಿತು. ಕೆಳಗಿಳಿಯಲು ಸಾಧ್ಯವಾಗದೆ ಕೆಲವು ಸಮಯ ವಿಮಾನಗಳು ಆಗಸದಲ್ಲೇ ಸುತ್ತಾಡಿದ ಪರಿಣಾಮ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್ 2 2 2 2924 ( 737 ಮ್ಯಾಕ್ಸ್ 8) ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಗೆ ಪ್ರಯತ್ನಿಸಿದರೂ ಪ್ರತಿಕೂಲ ಹವಾಮಾನದಿಂದಾಗಿ ತಕ್ಷಣ ಇಳಿಯಲು ಸಾಧ್ಯವಾಗಲಿಲ್ಲ. ಪರಿಣಾಮ ವಿಮಾನವು ‘ಹೋಲ್ಡಿಂಗ್ ಪ್ಯಾಟರ್ನ್’ನಲ್ಲಿ ಹಲವು ಸುತ್ತುಗಳನ್ನು ಆಗಸದಲ್ಲೇ ಹೊಡೆಯಿತು.


