ಪುತ್ತೂರು ವಿಧಾನಸಭಾ ವ್ಯಾಪ್ತಿ ಹಾಗೂ ಇನ್ನಿತರ ಕಡೆಗಳಲ್ಲಿ ಕಳೆದ ಕೆಲವು ಕಡೆಗಳಲ್ಲಿ ವಾಹನ ಅಪಘಾತ ಹಾಗೂ ಮೃತ್ಯು ಪ್ರಕರಣಗಳು ನಿರಂತರ ನಡೆಯುತ್ತಿದ್ದು ,ಮುಂದೆ ಯಾವುದೇ ಅನಾಹುತ,ಮೃತ್ಯು ಕಂಠಕಗಳು ಆಗದಂತೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾಸಕ ಅಶೋಕ್ ರೈ ಸೂಚನೆ ಮೇರೆಗೆ ಮೃತ್ಯುಂಜಯ ಜಪ ಹಾಗೂ ಪೂಜೆ ನಡೆಯಿತು.

ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸರ್ವ ಜನರಿಗಾಗಿ ವಿಶೇಷ ಪ್ರಾರ್ಥನೆಯನ್ನೂ ನಡೆಸಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಈಶ್ವರ ಭಟ್ ಪಂಜಿಗುಡ್ಡೆ, ಅರ್ಚಕರು ಮತ್ತು ಭಕ್ತರು ಉಪಸ್ಥಿತರಿದ್ದರು.