


ಚೆನ್ನೈ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ತಮಿಳುನಾಡು ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊಮ್ಮಿರುವ ಟಿವಿಕೆ ಸರ್ಕಾರ ರಚಿಸಲು ಅಗತ್ಯ ಸಂಖ್ಯಾಬಲ ಹೊಂದಿದೆ ಎಂಬುದನ್ನ ಮನವರಿಕೆ ಮಾಡಲು ನಟ ವಿಜಯ್ ಹೆಣಗಾಡುತ್ತಿದ್ದಾರೆ. ಇಂದು ಬೆಳಗ್ಗೆ ರಾಜ್ಯಪಾಲ ಆರ್. ವಿ ಅರ್ಲೇಕರ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಲೋಕಭವನದಲ್ಲಿ ರಾಜ್ಯಪಾಲರನ್ನ ಭೇಟಿಯಾದ ವಿಜಯ್ ಪದಗ್ರಹಣಕ್ಕೆ ಅವಕಾಶ ಕೇಳಿದ್ದಾರೆ. ಮೊದಲು ಪ್ರಮಾಣವಚನ ಸ್ವೀಕರಿಸಿ ಬಹುಮತ ಸಾಬೀತುಪಡಿಸುವುದಾಗಿ ಹೇಳಿದ್ದಾರೆ. ಆದ್ರೆ ವಿಜಯ್ ಅವರ ವಾದ ಒಪ್ಪದ ಗವರ್ನರ್ 118 ಶಾಸಕರ ಸಹಿಯೊಂದಿಗೆ ಬನ್ನಿ ಅಂತ ಹೇಳಿ 2ನೇ ದಿನವು ವಾಪಸ್ ಕಳಿಸಿದ್ದಾರೆ.


ಕಾನೂನು ಏನು ಹೇಳುತ್ತೆ?
* ರಾಜ್ಯಪಾಲರು ಬಹುಮತ ಪಡೆದ ಪಕ್ಷಕ್ಕೆ ಮೊದಲು ಸರ್ಕಾರ ರಚನೆಗೆ ಅವಕಾಶ ನೀಡಬೇಕು
* ಒಂದು ವೇಳೆ ಬಹುಮತ ಬರದಿದ್ದರೆ, ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ನೀಡಬಹುದು
* ವಿಧಾನಸಭೆಯಲ್ಲಿ ಯಾರು ಬಹುಮತ ಸಾಬೀತುಪಡಿಸಬಹುದು ಎಂದು ಯೋಚಿಸುವ ವಿವೇಚನಾ ಅಧಿಕಾರ ರಾಜ್ಯಪಾಲರಿಗೆ ಇರುತ್ತೆ
* ಆದರೆ ಎಸ್‌ಆರ್ ಬೊಮ್ಮಾಯಿ V/s ಕೇಂದ್ರ ಸರ್ಕಾರ ಪ್ರಕರಣದಲ್ಲಿ ಬಹುಮತದ ಪರೀಕ್ಷೆ ರಾಜಭವನದಲ್ಲಿ ಅಲ್ಲ, ವಿಧಾನಸಭೆಯಲ್ಲಿ ನಡೆಯಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
* ರಾಮೇಶ್ವರ್ ಪ್ರಸಾದ್ V/s ಕೇಂದ್ರ ಸರ್ಕಾರ ಪ್ರಕರಣದಲ್ಲಿ ರಾಜ್ಯಪಾಲರು ಊಹೆಗಳ ಆಧಾರದಲ್ಲಿ ಸರ್ಕಾರ ರಚನೆ ತಡೆಯಬಾರದು ಎಂದು ಕೋರ್ಟ್ ಹೇಳಿದೆ
* ಶಿವರಾಜ್ ಸಿಂಗ್ ಚೌಹಾನ್ V/s ಮಧ್ಯಪ್ರದೇಶ ಸ್ಪೀಕರ್ ಪ್ರಕರಣದಲ್ಲಿ ಸಂಖ್ಯಾಬಲದ ಅನುಮಾನ ಇದ್ದರೆ ತ್ವರಿತ ಫ್ಲೋರ್ ಟೆಸ್ಟ್ ಅಗತ್ಯ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಹೀಗಾಗೀ ಅತಿದೊಡ್ಡ ಪಕ್ಷವಾಗಿರುವುದೇ ಸರ್ಕಾರ ರಚನೆಗೆ ಖಚಿತ ಹಕ್ಕು ಅಲ್ಲ. ಆದರೆ ಸರ್ಕಾರ ರಚನೆಗೆ ಮೊದಲ ಅವಕಾಶ ಕೇಳುವ ಬಲವಾದ ರಾಜಕೀಯ-ಸಂವಿಧಾನಾತ್ಮಕ ಹಕ್ಕು ಇದೆ ರಾಜ್ಯಪಾಲರು ತಟಸ್ಥವಾಗಿ ಬಹುಮತ ಪರಿಶೀಲಿಸಬೇಕು ಅಂತಿಮವಾಗಿ ವಿಧಾನಸಭೆಯ ಫ್ಲೋರ್ ಟೆಸ್ಟ್ ಮೂಲಕವೇ ಆಗಬೇಕು ಎಂದು ಕಾನೂನು ಹೇಳುತ್ತದೆ.
