ತಮಿಳುನಾಡು : ತಮಿಳುನಾಡಿನಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರೋ ಟಿವಿಕೆಗೆ ಸರ್ಕಾರ ರಚಿಸಲು ನಾನಾ ಅಡೆತಡೆ ಬರ್ತಿದೆ. ತಮಿಳುನಾಡು ಹಂಗಾಮಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿದ್ದ ವಿಜಯ್​ ಕಾಂಗ್ರೆಸ್ ಜೊತೆಗೆ 113 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಲು ಆಹ್ವಾನಿಸುವಂತೆ ವಿನಂತಿಸಿ ಮನವಿ ಮಾಡಿದ್ರು. ಆದ್ರೆ ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನಿಸಲಿಲ್ಲ. ಹೀಗಾಗಿ ಇಂದು ಸಹ ವಿಜಯ್ ರಾಜ್ಯಪಾಲರನ್ನ ಭೇಟಿಯಾಗಿದ್ದಾರೆ.

ಮತ್ತೆ ರಾಜ್ಯಪಾಲರನ್ನ ಭೇಟಿಯಾದ ವಿಜಯ್​

ಟಿವಿಕೆ ಪಕ್ಷದ ನಾಯಕ ವಿಜಯ್ ಇಂದು (ಮೇ 7) ಮತ್ತೆ ತಮಿಳುನಾಡು ಹಂಗಾಮಿ ರಾಜ್ಯಪಾಲ ವಿಶ್ವನಾಥ್ ಅರ್ಲೇಕರ್ ಅವರನ್ನ ಭೇಟಿಯಾದ್ರು. ಟಿವಿಕೆ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸುವಂತೆ ವಿಜಯ್ ಮತ್ತೆ ಮನವಿ ಮಾಡಿದ್ದು, ವಿಧಾನಸಭೆ ಅಧಿವೇಶನ ಕರೆದು ಬಹುಮತ ಸಾಬೀತು ಪಡಿಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗ್ತಿದೆ.

ಗರ್ವನರ್​ ಅಂಗಳದಲ್ಲಿ ಚೆಂಡು

ಸರ್ಕಾರ ರಚನೆಗೆ ಮತ್ತೊಮ್ಮೆ ಹಕ್ಕು ಮಂಡನೆ ಮಾಡಲು ಟಿವಿಕೆ ಮುಂದಾಗಿದ್ದು, ಗವರ್ನರ್ ರಾಜೇಂದ್ರ ಅರ್ಲೇಕರ್ ಮ್ಯಾಜಿಕ್ ನಂಬರ್ ಕೇಳ್ತಿದ್ದಾರೆ. ಇದೀಗ ಮತ್ತೊಮ್ಮೆ ರಾಜ್ಯಪಾಲರನ್ನ ಭೇಟಿಯಾದ ವಿಜಯ್  ಬಹುಮತ ಸಾಬೀತು ಪಡಿಸುವಲ್ಲಿ ಗವರ್ನರ್ ಮನವೊಲಿಕೆ ಮಾಡ್ತಿದ್ದಾರೆ ಎಂದು ತಿಳಿದು ಬಂದಿದೆ.

ಹೈಕೋರ್ಟ್ ಕದ ತಟ್ತಾರಾ ವಿಜಯ್​?

ಮಾತುಕತೆ ವಿಫಲವಾಗಿ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡದಿದ್ರೆ ಟಿವಿಕೆ ಮುಖ್ಯಸ್ಥ ವಿಜಯ್​ ಹೈಕೋರ್ಟ್ ಮೆಟ್ಟಿಲೇರೋಕು ರೆಡಿಯಾಗಿದ್ದಾರೆ. ಈ ಸಂಬಂಧ ಕಾನೂನು ತಜ್ಞರ ಸಲಹೆ ಪಡೆದಿರೋ ವಿಜಯ್, ರಾರಾಜ್ಯಪಾಲರ ಭೇಟಿ ಬಳಿಕ ಕೋರ್ಟ್​​ ಹೋಗುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

 ಸರ್ಕಾರ ರಚಿಸಲು ವಿಜಯ್​ ಸರ್ಕಸ್​

ಸದ್ಯ ರಾಜ್ಯಪಾಲರನ್ನು ಭೇಟಿ ಮಾಡಿದ ವಿಜಯ್ ಅವರು ನಿರ್ಧಾರ ಮರು ಪರಿಶೀಲಿಸಲು ಮನವಿ ಮಾಡಿದ್ದಾರೆ. ರಾಜ್ಯಪಾಲರು ಮತ್ತೆ ನಿರಾಕರಿಸಿದರೆ ಹೈಕೋರ್ಟ್ ಗೆ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. ಟಿವಿಕೆ ಪ್ರಧಾನ ಕಾರ್ಯದರ್ಶಿ ಆನಂದ್ ಜೊತೆ ವಿಜಯ್ ಅವರು ಗವರ್ನರ್ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿಯಾಗಿದ್ದಾರೆ.