ಕೋಲ್ಕತ್ತಾ: ನಂದಿಗ್ರಾಮದ ಹಿಂದೂ ಜನ ನನ್ನನ್ನ ಮತ್ತೆ ಗೆಲ್ಲಿಸಿದ್ದಾರೆ. ಇಲ್ಲಿನ ಇಡೀ ಮುಸ್ಲಿಂ ಮತಗಳು ಟಿಎಂಸಿಗೆ ಹೋದವು. ನಾನು ಇಲ್ಲಿನ ಹಿಂದೂಗಳಿಗಾಗಿ ಕೆಲಸ ಮಾಡುತ್ತೇನೆ ಎಂದು ಭವಾನಿಪುರ ಹಾಗೂ ನಂದಿ ಗ್ರಾಮ ಕ್ಷೇತ್ರದ ವಿಜೇತ ಅಭ್ಯರ್ಥಿ ಸುವೇಂದು ಅಧಿಕಾರಿ ಹೇಳಿದರು.

ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರೀ ಮತಗಳ ಅಂತರದಿಂದ ಚುನಾವಣೆಯಲ್ಲಿ ಎದ್ದಿದ್ದೇನೆ. ನಂದಿಗ್ರಾಮದ ಹಿಂದೂ ಜನ ನನ್ನನ್ನ ಗೆಲ್ಲಿಸಿದ್ದಾರೆ. ಇಲ್ಲಿನ ಇಡೀ ಮುಸ್ಲಿಂ ಸಮುದಾಯದ ಮತಗಳು ಟಿಎಂಸಿಗೆ ಹೋಗಿವೆ. ನಾನು ನಂದಿ ಗ್ರಾಮದ ಹಿಂದೂಗಳಿಗಾಗಿ ಕೆಲಸ ಮಾಡುತ್ತೇನೆ ಎಂದರು. 

ಇನ್ನೂ 24 ಗಂಟೆಯಲ್ಲಿ ಟಿಎಂಸಿ (ಸರ್ವನಾಶವಾಗುತ್ತದೆ. ಈ ಭ್ರಷ್ಟ ಕುಟುಂಬ ಆಧಾರಿತ ಪಕ್ಷಕ್ಕೆ ಯಾವುದೇ ಸಿದ್ಧಾಂತವಿಲ್ಲ. ನಾವು ಗೃಹ ಸಚಿವ ಅಮಿತ್‌ ಶಾ ಪ್ರಣಾಳಿಕೆಯಲ್ಲಿ ಘೋಷಿಸಿದ ಮತ್ತು ನರೇಂದ್ರ ಮೋದಿ ಅವರು ಮತ್ತೆ ಮತ್ತೆ ನೀಡಿದ ಭರವೆಸಗಳನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.